ನವದೆಹಲಿ: ಭೂತಾನ್ನಲ್ಲಿ ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ಇಬ್ಬರು ಪೈಲಟ್ಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
Bhutan: An Indian Army Cheetah helicopter crashed in Bhutan today, both pilots lost their lives. It was enroute from Khirmu(Arunanchal) to Yongfulla(Bhutan) on duty. The 2 pilots were-an Indian Army pilot of Lieutenant colonel rank&a Bhutanese Army pilot training with Indian Army pic.twitter.com/gxl6W7WzqQ
— ANI (@ANI) September 27, 2019
ಅಪಘಾತದಲ್ಲಿ ಮೃತಪಟ್ಟ ಭಾರತೀಯ ಸೇನಾ ಪೈಲಟ್ ಲೆಫ್ಟಿನೆಂಟ್ ಕರ್ನಲ್ ಶ್ರೇಣಿಯಲ್ಲಿದ್ದರೆ, ಇನ್ನೊಬ್ಬರು ಭಾರತೀಯ ಸೇನೆಯೊಂದಿಗೆ ಭೂತಾನ್ ಸೈನ್ಯದ ಪೈಲಟ್ ತರಬೇತಿ ಪಡೆದಿದ್ದಾರೆ ಎಂದು ಭಾರತೀಯ ಸೇನೆಯ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್ಐ ತಿಳಿಸಿದೆ.
Indian Army Spokesperson, Col Aman Anand: An Indian Army Helicopter crashed at 1 pm near Yongphulla in Bhutan. Helicopter went out of radio and visual contact soon after 1 pm. It was enroute from Khirmu (Arunanchal Pradesh) to Yongfulla on duty. (file pic) https://t.co/RoF540RMx3 pic.twitter.com/6SM0SYWJCl
— ANI (@ANI) September 27, 2019
ಮಂಜಿನ ವಾತಾವರಣದಿಂದಾಗಿ ಭೂತಾನ್ನ ಯೋಂಗ್ಫುಲ್ಲಾದ ಖೆಂಟೊಂಗ್ಮನಿ ಬಳಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಚಾಪರ್ ಅಪ್ಪಳಿಸಿದೆ ಎಂದು ಭಾರತೀಯ ಸೇನೆಯ ವಕ್ತಾರ ಕರ್ನಲ್ ಅಮನ್ ಆನಂದ್ ಹೇಳಿದ್ದಾರೆ. ಮಧ್ಯಾಹ್ನ 1 ಗಂಟೆಯ ನಂತರ ಚಾಪರ್ ರೇಡಿಯೋ ಮತ್ತು ದೃಶ್ಯ ಸಂಪರ್ಕ ಕಡಿದುಕೊಂಡಿತು. ಯೋಂಗ್ಫುಲ್ಲಾದಿಂದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಮತ್ತು ಭಗ್ನಾವಶೇಷವನ್ನು ಗುರುತಿಸಲಾಗಿದೆ ಎಂದು ಅವರು ಹೇಳಿದರು.