Dogs Crying: ನಾಯಿಗಳು ರಾತ್ರಿ ಹೊತ್ತು ಅಳುವುದೇಕೆ? ದೆವ್ವ ಕಾಣೋದಕ್ಕಲ್ಲ.. ಇದು ಅಸಲಿ ಸತ್ಯ..!

Dogs crying at night: ನಾಯಿಗಳು ರಾತ್ರಿಯಲ್ಲಿ ಕೂಗುವುದು ಮತ್ತು ಅಳುವುದನ್ನು ನೋಡಿರಬಹುದು. ಕೆಲವರು ಇದಕ್ಕೆ ತುಂಬಾ ಹೆದರುತ್ತಾರೆ. ನಾಯಿಗಳು ರಾತ್ರಿಯಲ್ಲಿ ಅಳುವುದು ಯಾಕೆ ಗೊತ್ತಾ?

Written by - Chetana Devarmani | Last Updated : Mar 10, 2024, 02:24 PM IST
  • ನಾಯಿಗಳು ರಾತ್ರಿಯಲ್ಲಿ ಕೂಗುವುದು ಏಕೆ?
  • ನಾಯಿಗಳು ರಾತ್ರಿಯಲ್ಲಿ ಅಳುವುದು ಯಾಕೆ ಗೊತ್ತಾ?
  • ರಾತ್ರಿ ಹೊತ್ತಲ್ಲಿ ನಾಯಿಗಳು ಅತಿ ಹೆಚ್ಚು ಬೊಗಳುವುದು
Dogs Crying: ನಾಯಿಗಳು ರಾತ್ರಿ ಹೊತ್ತು ಅಳುವುದೇಕೆ? ದೆವ್ವ ಕಾಣೋದಕ್ಕಲ್ಲ.. ಇದು ಅಸಲಿ ಸತ್ಯ..! title=

Dog Crying At Night Means : ರಾತ್ರಿಯಲ್ಲಿ ನಾಯಿಗಳು ಕೂಗುವ ಶಬ್ದವನ್ನು ಪ್ರತಿನಿತ್ಯ ನಾವೆಲ್ಲರೂ ಕೇಳುತ್ತೇವೆ. ರಾತ್ರಿ ಹೊತ್ತಲ್ಲಿ ನಾಯಿಗಳು ಅತಿ ಹೆಚ್ಚು ಬೊಗಳುವುದು ಮತ್ತು ಜೋರಾಗಿ ಅಳುವುದನ್ನ ನೋಡಬಹುದು. ನಾಯಿಗಳು ಅಳುವುದು ಕೆಟ್ಟ ಶಕುನ ಎಂಬ ನಂಬಿಕೆಯೊಂದಿದೆ. 

ರಾತ್ರಿ ಹೊತ್ತಲ್ಲಿ ನಾಯಿ ಅಳುವುದು ಅನೇಕ ಕೆಟ್ಟ ಘಟನೆಗಳ ಸಂಕೇತವಾಗಿದೆ. ಹಾಗೆಯೇ ಮನೆಯ ಹೊರಗೆ ನಾಯಿ ಕೂಗಿದರೆ ಅಶುಭ ಎಂಬ ನಂಬಿಕೆಯಿದೆ. ಇದೇ ಕಾರಣಕ್ಕೆ ಮನೆ ಮುಂದೆ ನಾಯಿ ಅತ್ತರೆ ಅದನ್ನು ಅಲ್ಲಿಂದ ಓಡಿಸುತ್ತಾರೆ.

ಇದನ್ನೂ ಓದಿ : South Actress: ರಜನಿಕಾಂತ್​ ಮಾಜಿ ಅಳಿಯನ ಜೊತೆ ಸಂಬಂಧ..15 ನೇ ವಯಸ್ಸಿಗೇ ಗರ್ಭಿಣಿಯಾದ ಸೌತ್‌ನ ಸ್ಟಾರ್‌ ನಟಿ ಈಕೆ!

ನಾಯಿಯು ರಾತ್ರಿ ಹೊತ್ತು ಬೊಗಳಿದಾಗಲೆಲ್ಲಾ ಅದರ ಸುತ್ತಲೂ ಕೆಲವು ರೀತಿಯ ನಕಾರಾತ್ಮಕ ಶಕ್ತಿ ಇರುತ್ತದೆ ಎಂದು ಕೆಲವರು ಹೇಳುತ್ತಾರೆ. ಆ ನೆಗೆಟಿವ್ ಎನರ್ಜಿ ನೋಡಿದ ನಾಯಿಗಳು ಜೋರಾಗಿ ಬೊಗಳುತ್ತವೆ ಎನ್ನುತ್ತಾರೆ. ನಾಯಿಗಳು ಕತ್ತಲೆಯಲ್ಲಿ ದುಷ್ಟಶಕ್ತಿಗಳನ್ನು ನೋಡಬಹುದು ಎಂದು ಕೆಲವರು ನಂಬುತ್ತಾರೆ. ನಾಯಿ ಜೋರಾಗಿ ಬೊಗಳಿದರೆ ಇದು ಕೆಟ್ಟ ಶಕುನ ಎಂದು ಪರಿಗಣಿಸುತ್ತಾರೆ. 

ಮನುಷ್ಯರನ್ನು ಆಕರ್ಷಿಸಲು ನಾಯಿಗಳು ಕೂಗುತ್ತವೆ ಮತ್ತು ಬೊಗಳುತ್ತವೆ ಎಂದು ಅನೇಕ ಅಧ್ಯಯನಗಳು ಹೇಳುತ್ತವೆ. ಹಳೆ ಪ್ರದೇಶದಿಂದ ಹೊಸ ಜಾಗಕ್ಕೆ ಬರುವಾಗ, ದಾರಿ ತಪ್ಪಿದಾಗಲೂ ನಾಯಿಗಳು ಹೀಗೆ ಮಾಡುತ್ತವೆ. ತಮ್ಮ ಹಿಂಡಿನಿಂದ ಬೇರ್ಪಟ್ಟಾಗಲೂ.. ಒಂಟಿತನ ಅನುಭವಿಸಿ ನಾಯಿಗಳು ಅಳುತ್ತವೆ.

ಇದನ್ನೂ ಓದಿ : ಈ ಗಿಡದ ಎಲೆಗಳನ್ನು ಜಗಿದು ತಿನ್ನುವುದರಿಂದ ಸಕ್ಕರೆ ಮಟ್ಟ ಎಂದಿಗೂ ಹೆಚ್ಚಾಗುವುದಿಲ್ಲ! 

ನಾಯಿಗಳು ವಯಸ್ಸಾದಂತೆ ಹೆಚ್ಚು ಭಯಪಡುತ್ತವೆ. ರಾತ್ರಿ ಒಂಟಿ ಎಂದು ಅನಿಸಿದಾಗ ಜೋರಾಗಿ ಅಳುತ್ತವೆ. ಅದರ ಪ್ರೀತಿಪಾತ್ರರು ಅಥವಾ ಜೊತೆಗಿನ ಬೇರೆ ನಾಯಿ ಇಹಲೋಕ ತ್ಯಜಿಸಿದ್ದರೂ ದುಃಖದಿಂದ ಕಣ್ಣೀರು ಹಾಕುತ್ತವೆ. 

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮತ್ತು ಧಾರ್ಮಿಕ ವಿಚಾರಗಳನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ತಜ್ಞರ ಸಲಹೆಯನ್ನು ಪಡೆಯಿರಿ. Zee Kannada News ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News