White Hair Remedies :ನಮ್ಮ ಮನೆಯ ಸುತ್ತ ಮುತ್ತ ಸಿಗುವ ಎಲೆಗಳನ್ನು ಬಳಸುವ ಮೂಲಕ ಬಿಳಿ ಕೂದಲನ್ನು ಶಾಶ್ವತವಾಗಿ ಯಾವುದೇ ಅಡ್ಡ ಪರಿಣಾಮ ಇಲ್ಲದೆ ಕಪ್ಪಾಗಿಸಬಹುದು.
White Hair Remedies : ನಮ್ಮ ಸುತ್ತ ಮುತ್ತಲೇ ಸಿಗುವ ಕೆಲವು ವಸ್ತುಗಳನ್ನು ಬಳಸುವ ಮೂಲಕ ಬಿಳಿ ಕೂದಲನ್ನು ಬುಡದಿಂದಲೇ ಕಪ್ಪಾಗಿಸಬಹುದು. ಹಿತ್ತಲ ಗಿಡ ಮದ್ದಲ್ಲ ಎನ್ನುವ ಗಾದೆಯಿದೆ. ಹಾಗೆಯೇ ನಾವು ಕೂಡಾ ನಮ್ಮ ಹಿತ್ತಲಲ್ಲೇ ಸಿಗುವ ಕೆಲವು ಔಷಧಿಗಳನ್ನು ನಿರ್ಲಕ್ಷಿಸಿ ಬಿಡುತ್ತೇವೆ. ನಮ್ಮ ಮನೆಯ ಸುತ್ತ ಮುತ್ತ ಸಿಗುವ ಎಲೆಗಳನ್ನು ಬಳಸುವ ಮೂಲಕ ಬಿಳಿ ಕೂದಲನ್ನು ಶಾಶ್ವತವಾಗಿ ಯಾವುದೇ ಅಡ್ಡ ಪರಿಣಾಮ ಇಲ್ಲದೆ ಕಪ್ಪಾಗಿಸಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಪೇರಳೆ ಎಲೆಯನ್ನು ಬಳಸುವುದರಿಂದ ಬಿಳಿ ಕೂದಲನ್ನು ಬುಡದಿಂದಲೇ ಕಪ್ಪಾಗಿಸಬಹುದು. ಪೇರಳೆ ಎಲೆಯನ್ನು ತೆಗೆದುಕೊಂಡು ಒಂದು ಪಾತ್ರೆಯಲ್ಲಿ ಹಾಕಿ ಅದಕ್ಕೆ ನೀರು ಸೇರಿಸಬೇಕು. ಈಗ ಆ ನೀರಿನ ಬಣ್ಣ ಬದಲಾಗುವವರೆಗೆ ಕುದಿಸಬೇಕು. ನಂತರ ನೀರನ್ನು ತಣ್ಣಗಾಗಿಸಿ ಕೂದಲಿಗೆ ಹಚ್ಚಬೇಕು. ನಿಯಮಿತವಾಗಿ ಹೀಗೆ ಮಾಡಿದರೆ ಬಿಳಿ ಕೂದಲು ಕಪ್ಪಾಗುತ್ತದೆ.
ನಿಮ್ಮ ಕೂದಲಿಗೆ ಅನುಸಾರವಾಗಿ ಪೇರಳೆ ಎಲೆಗಳನ್ನು ತೆಗೆದುಕೊಂಡು ಅರೆದು ಪೇಸ್ಟ್ ಮಾಡಿಕೊಳ್ಳಿ. ಹೀಗೆ ಮಾಡಿಕೊಂಡ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ ಸುಮಾರು 30 ನಿಮಿಷಗಳವರೆಗೆ ಬಿಡಿ. ನಂತರ ಕೂದಲನ್ನು ಚೆನ್ನಾಗಿ ತೊಳೆಯಿರಿ. ಹೀಗೆ ಮಾಡುವುದರಿಂದಲೂ ಬಿಳಿ ಕೂದಲು ಕಪ್ಪಾಗುವುದು.
ಮಾವಿನ ಎಲೆ ಕೂಡಾ ಬಿಳಿ ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುತ್ತದೆ. ಮಾವಿನ ಎಲೆಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಆ ನೀರನ್ನು ಕೂದಲಿಗೆ ಹಚ್ಚಿ ನಂತರ ಕೂದಲನ್ನು ತೊಳೆಯಬೇಕು. ಹೀಗೆ ಮಾಡಿದರೆ ಬಿಳಿ ಕೂದಲು ಕಪ್ಪಾಗುವುದು.
ಕರಿಬೇವು ಬಿಳಿ ಕೂದಲನ್ನು ಕಪ್ಪಾಗಿಸಲು ಇರುವ ಬೆಸ್ಟ್ ಮನೆ ಮದ್ದು. ಕರಿಬೇವಿನ ಎಲೆಗಳನ್ನು ಕುದಿಸಿ ಅದರ ನೀರನ್ನು ಕೂದಲಿಗೆ ಹಚ್ಚಿದರೂ ಕೂದಲು ಕಪ್ಪಾಗುವುದು.
ಕರಿಬೇವಿನ ಎಲೆಯನ್ನು ಅರೆದು ಕೂದಲಿಗೆ ಹಚ್ಚುವುದರಿಂದ ಬಿಳಿ ಕೂದಲು ಬುಡದಿಂದಲೇ ಕಪ್ಪಾಗುವುದು. (ಸೂಚನೆ : ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee Kannada News ಅದನ್ನು ಅನುಮೋದಿಸುವುದಿಲ್ಲ.)