LPG Latest Price: ಮಾರ್ಚ್‌ನ ಮೊದಲ ದಿನವೇ ಗ್ರಾಹಕರಿಗೆ ಶಾಕ್! ವಾಣಿಜ್ಯ ಸಿಲಿಂಡರ್ ಬೆಲೆ 25.50 ರೂ. ಏರಿ

Commercial Cylinders Price: ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಕಂಪನಿಗಳು  ಹಿಂದಿನ ತಿಂಗಳ ಸರಾಸರಿ ಅಂತರರಾಷ್ಟ್ರೀಯ ಬೆಲೆಯನ್ನು ಆಧರಿಸಿ ಪ್ರತಿ ತಿಂಗಳ ಮೊದಲನೆಯ ದಿನದಂದು ಅಡುಗೆ ಅನಿಲ ಮತ್ತು ATF ಬೆಲೆಗಳನ್ನು   ಪರಿಷ್ಕರಿಸುತ್ತವೆ. ಗಮನಾರ್ಹವಾಗಿ ಸತತ ಮೂರನೇ ತಿಂಗಳು ಸಹ ವಾಣಿಜ್ಯ ಎಲ್‌ಪಿ‌ಜಿ ದರದಲ್ಲಿ ಏರಿಕೆ ಕಂಡು ಬಂದಿದೆ. 

Written by - Yashaswini V | Last Updated : Mar 1, 2024, 07:38 AM IST
  • ವಾಣಿಜ್ಯ ಎಲ್‌ಪಿ‌ಜಿ ದರದಲ್ಲಿ ಸತತ ಮೂರನೇ ತಿಂಗಳು ಏರಿಕೆ ಕಂಡು ಬಂದಿದೆ.
  • 2024ರ ಫೆಬ್ರವರಿ ತಿಂಗಳಿನಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 14ರೂ. ಹೆಚ್ಚಿಸಲಾಗಿತ್ತು.
  • ಇದಕ್ಕೂ ಮೊದಲು ಹೊಸ ವರ್ಷದ ಮೊದಲ ದಿನದಂದು ಎಂದರೆ 01 ಜನವರಿ 2024ರಂದು 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 1.50 ರೂ.ಏರಿಕೆ ಮಾಡಲಾಗಿತ್ತು.
LPG Latest Price: ಮಾರ್ಚ್‌ನ ಮೊದಲ ದಿನವೇ ಗ್ರಾಹಕರಿಗೆ ಶಾಕ್! ವಾಣಿಜ್ಯ ಸಿಲಿಂಡರ್ ಬೆಲೆ 25.50 ರೂ. ಏರಿ title=

Commercial LPG Cylinders Hike: ತೈಲ-ಮಾರ್ಕೆಟಿಂಗ್ ಕಂಪನಿಗಳು (OMC) ಮಾರ್ಚ್ ತಿಂಗಳ ಮೊದಲ ದಿನವೇ ಗ್ರಾಹಕರಿಗೆ ಶಾಕ್ ನೀಡಿದ್ದು, 01 ಮಾರ್ಚ್ 2024ರಿಂದ ಜಾರಿಗೆ ಬರುವಂತೆ 19 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ 25.50 ರೂ. ಏರಿಕೆಯನ್ನು ಘೋಷಿಸಿವೆ.  ಗಮನಾರ್ಹವಾಗಿ ಸತತ ಮೂರನೇ ತಿಂಗಳು ಸಹ ವಾಣಿಜ್ಯ ಎಲ್‌ಪಿ‌ಜಿ ದರದಲ್ಲಿ ಏರಿಕೆ ಕಂಡು ಬಂದಿದೆ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಜೊತೆಗೆ ವಿಮಾನ ಇಂಧನದ ಬೆಲೆಯೂ ಏರಿಕೆಯಾಗಿದೆ. 

ಸತತ ಮೂರನೇ ತಿಂಗಳು ಏರಿಕೆ ಕಂಡ ವಾಣಿಜ್ಯ ಸಿಲಿಂಡರ್ ದರ: 
ವಾಣಿಜ್ಯ ಎಲ್‌ಪಿ‌ಜಿ ದರದಲ್ಲಿ ಸತತ ಮೂರನೇ ತಿಂಗಳು ಏರಿಕೆ ಕಂಡು ಬಂದಿದೆ. 2024ರ ಫೆಬ್ರವರಿ ತಿಂಗಳಿನಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 14ರೂ.  ಹೆಚ್ಚಿಸಲಾಗಿತ್ತು. ಇದಕ್ಕೂ ಮೊದಲು ಹೊಸ ವರ್ಷದ ಮೊದಲ ದಿನದಂದು ಎಂದರೆ 01 ಜನವರಿ 2024ರಂದು 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 1.50 ರೂ.ಏರಿಕೆ ಮಾಡಲಾಗಿತ್ತು. ಇದೀಗ ಇಂದಿನಿಂದ ಜಾರಿಗೆ ಬರುವಂತೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಒಮ್ಮೆಗೆ 25.50 ರೂ.ಹೆಚ್ಚಿಸಲಾಗಿದೆ. 

ಇದನ್ನೂ ಓದಿ- Typical Farming: ಕಡಿಮೆ ಹೂಡಿಕೆ ಮತ್ತು ಹೆಚ್ಚು ಲಾಭ..! ಲಕ್ಷಗಟ್ಟಲೆ ದುಡಿಯುತ್ತಿರುವ ಆದರ್ಶ ರೈತ

ಹೊಸ ದರಗಳ ಬಳಿಕ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 1795 ರೂ., ಕೋಲ್ಕತ್ತಾದಲ್ಲಿ 1911 ರೂ., ಮುಂಬೈನಲ್ಲಿ 1749 ರೂ. ಮತ್ತು ಚೆನ್ನೈನಲ್ಲಿ 1960 ರೂ.ಗಳಿಗೆ ಲಭ್ಯವಾಗಲಿದೆ. 

ವಿಮಾನ ಇಂಧನದ ಬೆಲೆಯೂ ಏರಿಕೆ: 
ತೈಲ ಕಂಪನಿಗಳು ಇಂದಿನಿಂದ ಜಾರಿಯಾಗುವಂತೆ ವಿಮಾನ ಇಂಧನದ ಬೆಲೆಯನ್ನು ಸಹ ಹೆಚ್ಚಿಸಿವೆ. ವಿಮಾನ ಇಂಧನದ ಬೆಲೆಯನ್ನು ಪ್ರತಿ ಕೆಜಿಗೆ 624.37 ರೂಪಾಯಿ ಏರಿಕೆ ಮಾಡಲಾಗಿದೆ.  

ಇದನ್ನೂ ಓದಿ- Salary hike update : ಲೋಕಸಭೆ ಚುನಾವಣೆಗೂ ಮುನ್ನ ಸರ್ಕಾರಿ ಉದ್ಯೋಗಿಗಳಿಗೆ 3 ಪ್ರಮುಖ ಘೋಷಣೆಗಳು! ವೇತನದಲ್ಲಿ ಆಗುವುದು ಭಾರೀ ಹೆಚ್ಚಳ

ಗೃಹಬಳಕೆಯ ಅನಿಲ ದರದಲ್ಲಿಲ್ಲ ಯಾವುದೇ ಬದಲಾವಣೆ: 
ಆದಾಗ್ಯೂ, ನೆಮ್ಮದಿಯ ಸುದ್ದಿ ಎಂದರೆ,  ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ. ಬೆಂಗಳೂರಿನಲ್ಲಿ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ 905.50 ರೂ. ಆಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News