Homemade Masks For Treating Acne: ಮೊಡವೆಗಳು ಸಾಮಾನ್ಯವಾಗಿ ಪುರುಷ್ರು ಮಹಿಳೆಯರು ಇಬ್ಬರಿಗೂ ಕಾಡುತ್ತವೆ.. ಇವುಗಳಿಂದ ಎಷ್ಟೋ ಭಾರೀ ಮುಜುಗರಕ್ಕೂ ಒಳಗಾಗಬೇಕಾಗುತ್ತದೆ.. ಆದರೆ ಇದು ಬಗೆ ಹರಿಯದ ಸಮಸ್ಯೆಯೇನಲ್ಲ.. ಇದಕ್ಕೆ ನೈಸರ್ಗಿಕ ಪರಿಹಾರವಾಗಿ ಅನೇಕ ಪ್ಯಾಕ್ಗಳ ಬಗ್ಗೆ ಇಂದು ನಾವು ಹೇಳಿಲಿದ್ದೇವೆ..
ಮೊಡವೆಗಳು ಒಂದು ಸಮಸ್ಯೆಯಾದರೆ ಅವು ಹೋದಮೇಲೆ ಉಳಿಯುವ ಕಪ್ಪು ಕಲೆಗಳೂ ಸಹ ಒಂದು ದೊಡ್ಡ ತಲೆನೋವಾಗಿ ಪರಿಣಮಿಸುತ್ತವೆ.. ಇವು ಮುಖದ ಸೌಂದರ್ಯವನ್ನೇ ಕಡಿಮೆಮಾಡಿಬಿಡುತ್ತವೆ.. ಹಾಗಾದರೆ ಕಲೆ ಹಾಗೂ ಈ ಮೊಡವೆಗಳಿಗೆ ಪರಿಹಾರವೇನು ಅಂತೀರಾ.. ಇಲ್ಲಿದೆ ಉತ್ತರ..
ಶ್ರೀಗಂಧ+ರೋಸ್ ವಾಟರ್ ಪೇಸ್ ಫ್ಯಾಕ್: ಮೊಡವೆ ಕಲೆಗಳನ್ನು ಹೋಗಲಾಡಿಸಲು ಶ್ರೀಗಂಧ ರೋಸ್ ವಾಟರ್ ಬೆಸ್ಟ್ ಮನೆಮದ್ದಾಗಿದೆ.. ಶ್ರೀಗಂಧವನ್ನು ಫೇಸ್ಟ್ ಮಾಡಿ ರೋಸ್ ವಾಟರ್ ಜೊತೆ ಮಿಕ್ಸ್ ಮಾಡಿ ಹಚ್ಚಿ 2-5 ನಿಮಿಷ ಇಟ್ಟು ತಣ್ಣೀರಿನಿಂದ ತೊಳೆಯಿರಿ.
ಅಲೋವೆರಾ + ಅರಿಶಿನ ಪೇಸ್ ಫ್ಯಾಕ್: ಮುಖದ ಮೇಲಿನ ಮೊಡವೆಗಳಿಗೆ ಅಲೋವೆರಾ + ಅರಿಶಿನ ಫೇಸ್ ಫ್ಯಾಕ್ ಸಹ ಉತ್ತಮವಾಗಿದೆ.. ಅರಿಶಿನ ಮತ್ತು ಅಲೋವೆರಾವನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿಕೊಂಡರೇ ಮುಖದಲ್ಲಿನ ಮೊಡವೆಗಳು ಮಾಯವಾಗುತ್ತವೆ.
ಬಾದಾಮಿ ಪುಡಿ + ಹಾಲು: ಬಾದಾಮಿ ಪುಡಿಗೆ ಹಾಲು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಮೃದುವಾಗಿ ಮಸಾಜ್ ಮಾಡಿ 10-15 ನಿಮಿಷ ಬಿಟ್ಟು ತೊಳೆದರೆ ಮುಖ ನ್ಯಾಚುರಲ್ ಆಗಿ ಹೊಳೆಯುವುದಲ್ಲದೇ ಮೊಡವೆ ಮೊಡವೆ ಕಲೆಗಳು ಮಾಯವಾಗುತ್ತವೆ..
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)
Next Gallery