ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದ ಯಕ್ಷಗಾನದ ಪ್ರಸಂಗವೊಂದರಲ್ಲಿ ಸಂಜೀವಿನಿ ಹೊತ್ತ ಆಂಜನೇಯ ನೂರಾರೂ ಅಡಿ ಎತ್ತರಿಂದ ರಾತ್ರಿ ಸಮಯದಲ್ಲಿ ಇಳಿದು ಮೆಚ್ಚುಗೆ ಗಳಿಸಿದ್ದಾನೆ. ಕುಮಟಾದ ಮಣಕಿ ಮೈದಾನದಲ್ಲಿ ಘಟನೆ ನಡೆದಿದೆ. ಕುಮಟಾ ಜಾತ್ರಾ ಪ್ರಯುಕ್ತವಾಗಿ ಹನುಮ ಸಂಜೀವಿನಿ ಹಾಗೂ ಪವಿತ್ರ ಪದ್ಮನಿ ಯಕ್ಷಗಾನ ಆಯೋಜನೆ ಮಾಡಲಾಗಿತ್ತು. ಸಂಜೀವಿನಿ ಎಂಬ ಯಕ್ಷಗಾನ ಪ್ರಸಂಗದಲ್ಲಿ ಆಂಜನೇಯ ಸಂಜೀವಿನಿ ಪರ್ವತವನ್ನ ಹೊತ್ತು ತರುವ ಸನ್ನಿವೇಶವನ್ನ ಮಾಡಲಾಗಿತ್ತು, 100 ಅಡಿ ಎತ್ತರದಿಂದ ಹನುಮಂತ ಸಂಜೀವಿನಿ ಪರ್ವತ ಹೊತ್ತು ತರುವ ಸನ್ನಿವೇಶ ಪ್ರೇಕ್ಷಕರ ಗಮನ ಸೆಳೆದಿದ್ದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.