Ravichandran Ashwin: ಟೀಂ ಇಂಡಿಯಾಗೆ ಗುಡ್​ ನ್ಯೂಸ್.. ಮತ್ತೆ ತಂಡ ಸೇರಿದ ಸ್ಟಾರ್​ ಪ್ಲೇಯರ್! ​

Ravichandran Ashwin Rejoin to Team India: ಪಂದ್ಯದ ನಡುವೆ ಹಿಂದೆ ಸರಿದ ರವಿಚಂದ್ರನ್ ಅಶ್ವಿನ್ ಸದ್ಯ ಮತ್ತೆ ತಂಡ ಸೇರಿಕೊಳ್ಳುತ್ತಾರೆ ಎನ್ನುವ ಮಾಹಿತಿಯೊಂದು ಹೊರಬಿದ್ದಿದೆ..   

Written by - Savita M B | Last Updated : Feb 18, 2024, 11:07 AM IST
  • ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಪಂದ್ಯ ರಾಜ್‌ಕೋಟ್‌ನಲ್ಲಿ ನಡೆಯುತ್ತಿದೆ
  • ಪಂದ್ಯದ ನಡುವೆ ಹಿಂದೆ ಸರಿದ ರವಿಚಂದ್ರನ್ ಅಶ್ವಿನ್ ಸದ್ಯ ಮತ್ತೆ ತಂಡ ಸೇರಿಕೊಳ್ಳುತ್ತಾರೆ
  • ಈ ಕುರಿತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮಾಹಿತಿ ನೀಡಿದೆ
Ravichandran Ashwin: ಟೀಂ ಇಂಡಿಯಾಗೆ ಗುಡ್​ ನ್ಯೂಸ್.. ಮತ್ತೆ ತಂಡ ಸೇರಿದ ಸ್ಟಾರ್​ ಪ್ಲೇಯರ್! ​  title=

IND vs ENG: ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಪಂದ್ಯ ರಾಜ್‌ಕೋಟ್‌ನಲ್ಲಿ ನಡೆಯುತ್ತಿದೆ. ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಪಂದ್ಯದ ಮಧ್ಯದಲ್ಲಿ ತಮ್ಮ ಹೆಸರನ್ನು ಹಿಂತೆಗೆದುಕೊಂಡಿರುವುದು ಈ ಪಂದ್ಯದಲ್ಲಿ ಟೀಂ ಇಂಡಿಯಾಕ್ಕೆ ದೊಡ್ಡ ಹೊಡೆತವಾಗಿತ್ತು... ಅವರ ತಾಯಿಯ ಆರೋಗ್ಯ ಹದಗೆಟ್ಟಿದ್ದರಿಂದ ಅವರು ಹೊರಗೆ ಹೋಗಲು ನಿರ್ಧರಿಸಿದ್ದರು. ಭಾರತ ತಂಡಕ್ಕೆ ಎದುರಾದ ದೊಡ್ಡ ಸಮಸ್ಯೆ ಎಂದರೆ ಅಶ್ವಿನ್ ಬದಲಿಗೆ ಯಾವುದೇ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳಲು ಸಾಧ್ಯವಾಗದಿರುವುದು ಮತ್ತು ಕೇವಲ 4 ಬೌಲರ್‌ಗಳೊಂದಿಗೆ ಆಡಬೇಕಾದ ಅನಿವಾರ್ಯತೆಯಿದ್ದಿದ್ದು..

ವರದಿ ಪ್ರಕಾರ, ಅಶ್ವಿನ್ ಊಟದ ವೇಳೆಗೆ ರಾಜ್‌ಕೋಟ್‌ನಲ್ಲಿ ಟೀಮ್ ಇಂಡಿಯಾ ಸೇರಬಹುದು. ನಾಲ್ಕನೇ ದಿನದ ಆರಂಭದ ಮೊದಲು ಮಾತನಾಡಿದ ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್, "ಖಚಿತವಾಗಿಲ್ಲ ಆದರೆ ಅವರು ತಂಡವನ್ನು ಸೇರಿಕೊಳ್ಳಬಹುದು" ಎಂದಿದ್ದಾರೆ.. ಈ ಹಿಂದೆ ಪ್ರತಿಕ್ರಿಯಿಸುವಾಗ ದಿನೇಶ್ ಕಾರ್ತಿಕ್ ಕೂಡ ರವಿಚಂದ್ರನ್ ಯಾವುದೇ ಸಮಯದಲ್ಲಿ ಈ ಟೆಸ್ಟ್ ಪಂದ್ಯಕ್ಕೆ ಸೇರಬಹುದು ಎಂದು ಹೇಳಿದ್ದರು.

ಇದನ್ನೂ ಓದಿ-ʼದೇಶೀಯ ಕ್ರಿಕೆಟ್ ಅನ್ನು ನಿರ್ಲಕ್ಷಿಸಿದವರು ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆʼ ಇಶಾನ್ ಕಿಶನ್ ಗೆ ಜೈ ಶಾ ಎಚ್ಚರಿಕೆ!

ನಾಲ್ಕನೇ ದಿನದಿಂದ ಅಶ್ವಿನ್ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ಮೂಲಕ ಮಾಹಿತಿ ನೀಡಿದೆ. ನಾಯಕ ರೋಹಿತ್ ಶರ್ಮಾಗೆ ಇದು ಅತಿದೊಡ್ಡ ಶುಭ ಸುದ್ದಿಯಾಗಿದೆ ಏಕೆಂದರೆ ಅವರು ಮೂರನೇ ದಿನದವರೆಗೆ ಕೇವಲ 4 ಬೌಲರ್‌ಗಳೊಂದಿಗೆ ಆಡಬೇಕಾಗಿತ್ತು.

ಇದನ್ನೂ ಓದಿ-Yashasvi Jaiswal: ʻಯಶಸ್ವಿʼ ಜೈಸ್ವಾಲ್ ಶತಕದಿಂದ 3 ಕ್ರಿಕೆಟಿಗರ ವೃತ್ತಿಜೀವನ ಅಂತ್ಯ!

ಬಿಸಿಸಿಐ ತನ್ನ ಪತ್ರಿಕಾ ಪ್ರಕಟಣೆಯಲ್ಲಿ, “ಕುಟುಂಬದ ಸಮಸ್ಯೆಗಳಿಂದಾಗಿ ಅಶ್ವಿನ್ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದಂದು ಪಂದ್ಯದಿಂದ ತಾತ್ಕಾಲಿಕವಾಗಿ ಹಿಂದೆ ಸರಿಯಬೇಕಾಯಿತು. ಇದೀಗ ಮಂಡಳಿಯು ಅವರ ಮರಳುವಿಕೆಯನ್ನು ಘೋಷಿಸಲು ಖುಷಿಪಡುತ್ತಿದೆ" ಎಂದು ತಿಳಿಸಿದೆ..

ಇನ್ನು ಈ ಟೆಸ್ಟ್‌ ಪಂದ್ಯದ ಎರಡನೇ ದಿನದಂದು ಅಶ್ವಿನ್ ಬೌಲಿಂಗ್ ಮಾಡುವಾಗ ದೊಡ್ಡ ಸಾಧನೆ ಮಾಡಿದ್ದಾರೆ.. ಈ ಸ್ಟಾರ್ ಆಫ್ ಸ್ಪಿನ್ನರ್ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ 500 ವಿಕೆಟ್‌ಗಳನ್ನು ಪೂರೈಸಿ.. ಮಾಜಿ ನಾಯಕ ಅನಿಲ್ ಕುಂಬ್ಳೆ ನಂತರ ಈ ಸಾಧನೆ ಮಾಡಿದ ಎರಡನೇ ಬೌಲರ್ ಎನಿಸಿಕೊಂಡರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು

ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ 
 ಮಾಡಿ

Trending News