ರಾಜ್ಯದ ವಾಹನ ಸವಾರರಿಗೆ ಸಿಹಿ ಸುದ್ದಿ: ಟ್ರಾಫಿಕ್ ಫೈನ್ ಇಳಿಕೆಗೆ ಸರ್ಕಾರದ ನಿರ್ಧಾರ!

ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸಲಾಗುತ್ತಿರುವ ದುಬಾರಿ ಮೊತ್ತದ ದಂಡವನ್ನು ಕೂಡಲೇ ಕಡಿಮೆ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Last Updated : Sep 12, 2019, 10:17 AM IST
ರಾಜ್ಯದ ವಾಹನ ಸವಾರರಿಗೆ ಸಿಹಿ ಸುದ್ದಿ: ಟ್ರಾಫಿಕ್ ಫೈನ್ ಇಳಿಕೆಗೆ ಸರ್ಕಾರದ ನಿರ್ಧಾರ! title=

ಬೆಂಗಳೂರು: ರಾಜ್ಯದ ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿರುವ ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಇದೀಗ ದಂಡದ ಮೊತ್ತವನ್ನು ಕಡಿತಗೊಳಿಸಲು ಮುಂದಾಗಿದೆ. ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದು ದಂಡದ ಮೊತ್ತವನ್ನು 10 ಪಟ್ಟು ಹೆಚ್ಚಿಸಲಾಗಿತ್ತು. ಕೇಂದ್ರ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಮೋಟಾರು ವಾಹನ ಕಾಯ್ದೆ 2019ರ ನಂತರ ವಿಧಿಸಲಾಗುತ್ತಿರುವ ದುಬಾರಿ ಮೊತ್ತದ ದಂಡಕ್ಕೆ ವಾಹನ  ಸವಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಈ ನೂತನ ಕಾನೂನನ್ನು ಜನಸಾಮಾನ್ಯರ ಹಿತದೃಷ್ಟಿಯಿಂದಲೇ ಜಾರಿಗೊಳಿಸಲಾಗಿದ್ದರೂ ದುಬಾರಿ ದಂಡದಿಂದಾಗಿ ಜನತೆಗೆ ಬಾರಿ ಹೊರೆಯಾಗುತ್ತಿದೆ ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸಲಾಗುತ್ತಿರುವ ದುಬಾರಿ ಮೊತ್ತದ ದಂಡವನ್ನು ಕೂಡಲೇ ಕಡಿಮೆ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಮಾತನಾಡಿದ ಸಿಎಂ ಬಿ.ಎಸ್. ಯಡಿಯೂರಪ್ಪ, ಸಂಚಾರ ನಿಯಮ ಉಲ್ಲಂಘಿಸುವವರಿಗೆ ದುಬಾರಿ ಮೊತ್ತದ ದಂಡ ವಿಧಿಸುವುದರಿಂದ ಇದರಿಂದ ಜನಸಾಮಾನ್ಯರಿಗೆ ಬಾರಿ ಹೊರೆಯಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ದಂಡದ ಮೊತ್ತವನ್ನು ಇಳಿಸುವಂತೆ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು. 

ಗುಜರಾತ್ ಮಾದರಿಯಲ್ಲಿ ಇದೀಗ ಕರ್ನಾಟಕ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ನಿಯಮ ಜಾರಿಯಾಗಲು ಸುಮಾರು 10 ದಿನಗಳು ಬೇಕಾಗಬಹುದು ಎನ್ನಲಾಗಿದೆ. 

ಮೂಲಗಳ ಪ್ರಕಾರ, ಹೆಲ್ಮೆಟ್ ರಹಿತ ಚಾಲನೆಗೆ 1 ಸಾವಿರ ದಂಡವಿದ್ದರೆ 500 ರೂ.ಗೆ ಇಳಿಕೆ. ಲೈಸೆನ್ಸ್ ರಹಿತ ಚಾಲನೆಗೆ 5 ಸಾವಿರದ ಬದಲಿಗೆ 2,500 ರೂ. ದಂಡ, ಅಪಾಯಕಾರಿ ಚಾಲನೆಗೆ 5 ಸಾವಿರ ರೂ. ಬದಲು 3 ಸಾವಿರ ರೂ.ಗೆ ದಂಡ ಇಳಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
 

Trending News