IHMCL Advisery : Paytm FASTag ಅನ್ನು ನಿಮ್ಮ ಕಾರಿನಲ್ಲಿ ಅಳವಡಿಸಿದ್ದರೆ ಈ ಸುದ್ದಿ ನಿಮಗೆ ಉಪಯುಕ್ತವಾಗಿದೆ. Paytm ಫಾಸ್ಟ್ಯಾಗ್ ಬಳಕೆದಾರರಿಗೆ ರೋಡ್ ಟೋಲಿಂಗ್ ಅಥಾರಿಟಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಹೆದ್ದಾರಿಯಲ್ಲಿ ಪ್ರಯಾಣಿಸುವ ಚಾಲಕರು ಅಧಿಕೃತ ಬ್ಯಾಂಕ್ನಿಂದ ಫಾಸ್ಟ್ಯಾಗ್ ಖರೀದಿಸುವಂತೆ ಪ್ರಾಧಿಕಾರ ಸಲಹೆ ನೀಡಿದೆ. ಇದರೊಂದಿಗೆ ಎರಡು ಕೋಟಿಗೂ ಹೆಚ್ಚು ಪೇಟಿಎಂ ಫಾಸ್ಟ್ಯಾಗ್ ಬಳಕೆದಾರರಿಗೆ ಹೊಸ RFID ಸ್ಟಿಕ್ಕರ್ಗಳನ್ನು ಪಡೆಯುವಂತೆ ಸೂಚನೆ ನೀಡಲಾಗಿದೆ. ಇದಕ್ಕಾಗಿ ರೋಡ್ ಟೋಲಿಂಗ್ ಅಥಾರಿಟಿ 32 ಅಧಿಕೃತ ಬ್ಯಾಂಕ್ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಹೆಸರಿಲ್ಲ ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ. ಜನವರಿ 31 ರಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಕೈಗೊಂಡ ಕ್ರಮದ ನಂತರ ಜನವರಿ 1 ರಿಂದ ಪೇಟಿಎಂ ಬ್ಯಾಂಕ್ ಸೇವೆಗಳನ್ನು ಒದಗಿಸುವುದನ್ನು ನಿಷೇಧಿಸಲಾಗಿದೆ.
ಫೆಬ್ರವರಿ 29 ರ ನಂತರ ಫಾಸ್ಟ್ಯಾಗ್ ನಿಷ್ಕ್ರಿಯ :
ಆರ್ಬಿಐ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಫೆಬ್ರವರಿ 29 ರ ನಂತರ ಪೇಟಿಎಂ ಬ್ಯಾಂಕ್ಗೆ ಫಾಸ್ಟ್ಟ್ಯಾಗ್ ಸಂಪರ್ಕಗೊಂಡಿರುವ ವಾಹನ ಮಾಲೀಕರ ಫಾಸ್ಟ್ಟ್ಯಾಗ್ಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ರೋಡ್ ಟೋಲಿಂಗ್ ಅಥಾರಿಟಿ ಬಳಕೆದಾರರಿಗೆ ಯಾವುದೇ ತೊಂದರೆಯಾಗದಂತೆ ಕೆಲವು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಈ ನಿಟ್ಟಿನಲ್ಲಿ, ಅಧಿಕೃತ ಬ್ಯಾಂಕ್ಗಳ ಪಟ್ಟಿಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಎಲೆಕ್ಟ್ರಾನಿಕ್ ಟೋಲಿಂಗ್ ಶಾಖೆಯಾದ IHMCL ನ ಅಧಿಕೃತ ಹ್ಯಾಂಡಲ್ನಿಂದ ಹಂಚಿಕೊಳ್ಳಲಾಗಿದೆ.ಎಚ್ಡಿಎಫ್ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಸ್ಬಿಐ, ಆಕ್ಸಿಸ್ ಬ್ಯಾಂಕ್, ಯುಕೊ ಬ್ಯಾಂಕ್ ಸೇರಿದಂತೆ 32 ಬ್ಯಾಂಕ್ಗಳ ಹೆಸರನ್ನು ಈ ಪಟ್ಟಿಯಲ್ಲಿ ನೀಡಲಾಗಿದೆ.
ಇದನ್ನೂ ಓದಿ : RBI MPC Meeting: ಮಧ್ಯಮ ವರ್ಗದ ಜನರ ಕೈ ಹಿಡಿಯಲಿದೆ RBI : ಮುಂದಿನ ವಾರ ಸಿಗಲಿದೆ ಸಿಹಿ ಸುದ್ದಿ
EPFO ಹಕ್ಕುಗಳೂ ನಿಷೇಧ :
ಇತ್ತೀಚೆಗೆ, ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) EFP ಖಾತೆಯನ್ನು Paytm ಪೇಮೆಂಟ್ ಬ್ಯಾಂಕ್ಗೆ ಲಿಂಕ್ ಮಾಡಲಾದ ಕ್ರೆಡಿಟ್ಗಳನ್ನು ನಿರ್ಬಂಧಿಸಲು ನಿರ್ಧರಿಸಿದೆ. ಪೇಟಿಎಂ ಬ್ಯಾಂಕ್ ವಿರುದ್ದ ಆರ್ಬಿಐ ಕ್ರಮ ಜರುಗಿಸಿದ ಹಿನ್ನೆಲೆಯಲ್ಲಿ ಇಪಿಎಫ್ಒ ಕೂಡಾ ಈ ನಿರ್ಧಾರವನ್ನು ತೆಗೆದುಕೊಂಡಿದೆ.ಇಪಿಎಫ್ಒ ಹೊರಡಿಸಿದ ಸುತ್ತೋಲೆಯಲ್ಲಿ, ಪೇಟಿಎಂ ಪೇಮೆಂಟ್ ಬ್ಯಾಂಕ್ ಲಿಮಿಟೆಡ್ (ಪಿಪಿಬಿಎಲ್) ಖಾತೆಗಳಿಗೆ ಸಂಬಂಧಿಸಿದ ಕ್ಲೈಮ್ಗಳನ್ನು ಸ್ವೀಕರಿಸದಂತೆ ಎಲ್ಲಾ ಕ್ಷೇತ್ರ ಕಚೇರಿಗಳಿಗೆ ಆದೇಶಿಸಲಾಗಿದೆ.
ಮತ್ತೊಂದೆಡೆ, ಒಂದು ದಿನದ ಹಿಂದೆ ಆರ್ಬಿಐ ಕ್ರಮದ ನಂತರ, ಇಡಿ ಪೇಟಿಎಂನ ಹಿರಿಯ ಅಧಿಕಾರಿಗಳನ್ನು ವಿಚಾರಣೆ ನಡೆಸಿ ಹಲವು ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಮೂಲಗಳ ಪ್ರಕಾರ, ಫಿನ್ಟೆಕ್ ಕಂಪನಿಯಲ್ಲಿ ಆರ್ಬಿಐ ಗಮನಿಸಿರುವ ಅಕ್ರಮಗಳ ಬಗ್ಗೆ ಔಪಚಾರಿಕ ತನಿಖೆಯನ್ನು ಪ್ರಾರಂಭಿಸಲು ನಿರ್ಧರಿಸುವ ಮೊದಲು ಕೇಂದ್ರ ಸಂಸ್ಥೆ ಫೆಮಾ ಅಡಿಯಲ್ಲಿ ದಾಖಲೆಗಳ ಪ್ರಾಥಮಿಕ ಪರೀಕ್ಷೆಯನ್ನು ನಡೆಸುತ್ತಿದೆ. ಪೇಟಿಎಂ ಅಧಿಕಾರಿಗಳು ಇತ್ತೀಚೆಗಷ್ಟೇ ಕೆಲವು ದಾಖಲೆಗಳನ್ನು ಸಲ್ಲಿಸಿದ್ದು, ಅವರಿಂದ ಕೆಲ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಸಂಬಂಧ ಇನ್ನೂ ಕೆಲವು ಮಾಹಿತಿ ಕೇಳಲಾಗಿದೆ.
ಇದನ್ನೂ ಓದಿ : Arecanut Price: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.