ದೆಹಲಿ ಚಲೋ ಮೆರವಣಿಗೆ : 1 ತಿಂಗಳ ಕಾಲ ಸೆಕ್ಷನ್ 144 ಜಾರಿ ಮಾಡಿದ ರಾಷ್ಟ್ರ ರಾಜಧಾನಿ ಪೊಲೀಸರು

Delhi : ನಾಳೆ (ಫೆ.13) ನಡೆಯಲಿರುವ ದೆಹಲಿ ಚಲೋ ಮೆರವಣಿಗೆಯಲ್ಲಿ ಅಶಾಂತಿ ಮತ್ತು ಗಲಭೆಗಳು ಉಂಟಾಗಬಾರದು ಎನ್ನುವ ನಿಟ್ಟಿನಲ್ಲಿ ದೆಹಲಿ ಪೊಲೀಸರು ಒಂದು ತಿಂಗಳು ಕಾಲ ದೆಹಲಿಯಲ್ಲಿ ಸೆಕ್ಷನ್ 144 ಅನ್ನು ಜಾರಿ ಮಾಡಿದ್ದಾರೆ. 

Written by - Zee Kannada News Desk | Last Updated : Feb 12, 2024, 05:46 PM IST
  • ನಾಳೆ (ಫೆ.13) ನಡೆಯಲಿರುವ ದೆಹಲಿ ಚಲೋ ಮೆರವಣಿಗೆ ನಡೆಯಲಿದೆ
  • ರಾಷ್ಟ್ರ ರಾಜಧಾನಿಗೆ ರೈಲಿನಲ್ಲಿ ತೆರಳುತ್ತಿದ್ದ ಕರ್ನಾಟಕದ ಸುಮಾರು 100 ರೈತರನ್ನು ಭೋಪಾಲ್ನಲ್ಲಿ ರಾಜ್ಯ ಪೊಲೀಸರು ತಡೆದಿದ್ದಾರೆ ಎಂದು ರೈತ ಸಂಘಟನೆ ಸಂಯುಕ್ತ ಕಿಸಾನ್ ಮೋರ್ಚಾ (SKM) ತಿಳಿಸಿದೆ.
  • ಈ ಆದೇಶವು ಒಂದು ತಿಂಗಳುಗಳ ಕಾಲ ಈ ಸೆಕ್ಷನ್ ಜಾರಿಯಿರಲಿದ್ದು, ಫೆಬ್ರವರಿ 12 ರಿಂದ ಮಾರ್ಚ್ 12 ರವರೆಗೆ ಇರುತ್ತದೆ.
ದೆಹಲಿ ಚಲೋ ಮೆರವಣಿಗೆ : 1 ತಿಂಗಳ ಕಾಲ ಸೆಕ್ಷನ್ 144 ಜಾರಿ ಮಾಡಿದ ರಾಷ್ಟ್ರ ರಾಜಧಾನಿ ಪೊಲೀಸರು title=

Delhi Chalo Procession : ಮಂಗಳವಾರ ನಡೆಯಲಿರುವ ದೆಹಲಿ ಚಲೋ ಮೆರವಣಿಗೆ ಹಿನ್ನೆಲೆ ದೆಹಲಿಯಲ್ಲಿ ಸೆಕ್ಷನ್ 144 ಜಾರಿ ಮಾಡುವಂತೆ ಸೋಮವಾರ ದೆಹಲಿ ಪೊಲೀಸ್ ಆಯುಕ್ತ ಸಂಜಯ್ ಅರೋರಾ ಸೋಮವಾರ ಆದೇಶ ಹೊರಡಿಸಿದ್ದಾರೆ. 

ಈ ಆದೇಶವು ಒಂದು ತಿಂಗಳುಗಳ ಕಾಲ ಈ ಸೆಕ್ಷನ್ ಜಾರಿಯಿರಲಿದ್ದು, ಫೆಬ್ರವರಿ 12 ರಿಂದ ಮಾರ್ಚ್ 12 ರವರೆಗೆ ಇರುತ್ತದೆ. ಈ ಸಮಯದಲ್ಲಿ ಮೆರವಣಿಗೆ, ರಸ್ತೆ ಮಾರ್ಗವನ್ನು ನಿಷೇಧಿಸುವುದನ್ನು ನಿರ್ಬಂಧಿಸಲಾಗಿದೆ.  

ಇದನ್ನು ಓದಿ : ಹಿಮದ ಮಧ್ಯೆ ಆಂಕರ್ : guess the place ಎಂದ ಅನುಶ್ರೀ ಫೋಟೋಸ್ ಇಲ್ಲಿವೆ ನೋಡಿ

ಪಂಜಾಬ್, ಉತ್ತರ ಪ್ರದೇಶ ಮತ್ತು ಹರಿಯಾಣ ರೈತರು ಮೆರವಣಿಗೆ ಮೂಲಕ ದೆಹಲಿ ಸೇರುವ ನಿರೀಕ್ಷೆ ಇದ್ದು, ಟ್ಯಾಕ್ಟರ್ ರ್ಯಾಲಿ ಅನ್ನು ಸಂಪೂರ್ಣ ನಿಷೇಧಿಸಲಾಗಿದೆ. 

ಫೆಬ್ರುವರಿ 13 ರಂದು ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಲು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಿಸಾನ್ ಮಜ್ದೂರ್ ಮೋರ್ಚಾ (KMM), ಸಂಯುಕ್ತ ಕಿಸಾನ್ ಮೋರ್ಚಾ (SKM), ಮತ್ತು ಇತರ ಹಲವಾರು ರೈತ ಸಂಘಗಳನ್ನು 'ದೆಹಲಿ ಚಲೋ ಮೆರವಣಿಗೆ'ಗೆ ಕರೆ ನೀಡಿವೆ.

ಇದನ್ನು ಓದಿ  : ಲಿಡ್ಕರ್ ಲೆದರ್ ಉತ್ಪನ್ನಗಳ ರಾಯಭಾರಿಯಾಗಿ 'ಡಾಲಿ ಧನಂಜಯ' : ಪೋಸ್ಟರ್ ವೈರಲ್

ನಾಳೆ (ಫೆ.13) ನಡೆಯಲಿರುವ ದೆಹಲಿ ಚಲೋ ಮೆರವಣಿಗೆಯಲ್ಲಿ ಭಾಗವಹಿಸಲು ರಾಷ್ಟ್ರ ರಾಜಧಾನಿಗೆ ರೈಲಿನಲ್ಲಿ ತೆರಳುತ್ತಿದ್ದ ಕರ್ನಾಟಕದ ಸುಮಾರು 100 ರೈತರನ್ನು ಭೋಪಾಲ್ನಲ್ಲಿ ರಾಜ್ಯ ಪೊಲೀಸರು ತಡೆದಿದ್ದಾರೆ ಎಂದು ರೈತ ಸಂಘಟನೆ ಸಂಯುಕ್ತ ಕಿಸಾನ್ ಮೋರ್ಚಾ (SKM) ತಿಳಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News