Darling Krishna And Prakash Raj ʻFatherʼ: ಕನ್ನಡದ ಹೆಸರಾಂತ ನಿರ್ದೇಶಕ, ನಿರ್ಮಾಪಕ ಆರ್.ಚಂದ್ರು ಇತ್ತೀಚೆಗಷ್ಟೇ ಆರ್ ಸಿ ಸ್ಟುಡಿಯೋಸ್ ಎಂಬ ಹೊಸ ಬ್ಯಾನರ್ ಆರಂಭಿಸಿದ್ದು, ಅಂದೇ ಐದು ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಘೋಷಣೆ ಮಾಡಿದ್ದರು. ಅದರಲ್ಲಿ ಮೊದಲಿಗೆ 'ಫಾದರ್' ಚಿತ್ರವನ್ನು ಕೈಗೆತ್ತಿಕೊಂಡಿದ್ದು, ಇದೀಗ ಈ ಸಿನಿಮಾ ಸೆಟ್ಟಿಗೇರಿದೆ. ಚಂದ್ರು ತಮ್ಮ ಹುಟ್ಟು ಹಬ್ಬದಂದು ಈ ಚಿತ್ರದ ಬಗ್ಗೆ ಮಾಹಿತಿ ನೀಡಿದ್ದಿ, ಇದೇ ತಿಂಗಳ ಕೊನೆಯಲ್ಲಿ ಆರಂಭವಾಗಲಿದೆ.
'ಫಾದರ್' ಸಿನಿಮಾದಲ್ಲಿ ಅಪ್ಪ ಮತ್ತು ಮಗನ ಬಾಂಧವ್ಯದ ಕಥೆಯನ್ನು ಹೇಳಲಿದ್ದು, ನಾಯಕನಾಗಿ ಡಾರ್ಲಿಂಗ್ ಕೃಷ್ಣ ಅಭಿನಯಿಸುತ್ತಿದ್ದಾರೆ. ಹಾಗೆಯೇ ತಂದೆಯ ಪಾತ್ರದಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ನಟಿಸುತ್ತಿದ್ದಾರೆ. ಅಪ್ಪ - ಮಗನ ಬಾಂಧವ್ಯದ ಕಥೆಯುಳ್ಳ ಫಾದರ್ ಚಿತ್ರದಲ್ಲಿ, ತೆಲುಗು ನಟ ಸುನೀಲ್ ಸೇರಿದಂತೆ ದಕ್ಷಿಣ ಭಾರತದ ಖ್ಯಾತ ಕಲಾವಿದರು ಬಣ್ಣ ಹಚ್ಚಿಲಿದ್ದಾರೆ. ಡಾರ್ಲಿಂಗ್ ಕೃಷ್ಣ ಮತ್ತು ಪ್ರಕಾಶ್ ರಾಜ್ ಕಾಂಬಿನೇಷನ್ ನ ಮೊದಲ ಸಿನಿಮಾವಿದಾಗಿದ್ದು, ಇದು ಕೂಡ ಪ್ಯಾನ್ ಇಂಡಿಯಾ ಪರಿಕಲ್ಪನೆಯಲ್ಲಿ ಮೂಡಿ ಬರಲಿದೆ.
ಇದನ್ನೂ ಓದಿ: Darshan: ವಿವಾದಗಳ ಬಳಿಕ ಪತ್ನಿ ಮತ್ತು ಪುತ್ರನೊಂದಿಗೆ ಕಾಳಹಸ್ತಕ್ಕೆ ದರ್ಶನ್ ಭೇಟಿ!
ನಿರ್ದೇಶಕ ಆರ್ ಚಂದ್ರು 'ಶ್ರೀರಾಮಬಾಣಂ ಚರಿತ', 'ಪಿಓಕೆ', 'ಫಾದರ್', 'ಡಾಗ್' ಮತ್ತು 'ಕಬ್ಜ 2' ಹೀಗೆ ಒಟ್ಟಿಗೆ ಐದು ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಘೋಷಣೆ ಮಾಡಿದ್ದರು. ಆ ಸಂದರ್ಭದಲ್ಲಿ "ನಾನು ಇತ್ತೀಚಿಗೆ ಆರ್ ಸಿ ಸ್ಟುಡಿಯೋಸ್ ಎಂಬ ಸಂಸ್ಥೆ ಮೂಲಕ ಐದು ಪ್ಯಾನ್ ಇಂಡಿಯಾ ಚಿತ್ರಗಳನ್ನು ನಿರ್ಮಿಸುವುದಾಗಿ ಹೇಳಿದ್ದೆ. ಅದರ ಮೊದಲ ಚಿತ್ರವಾಗಿ 'ಫಾದರ್' ಫೆಬ್ರವರಿ ತಿಂಗಳ ಕೊನೆಗೆ ಆರಂಭವಾಗಲಿದೆ" ಎಂದು ಆರ್ ಚಂದ್ರು ಮಾಹಿತಿ ನೀಡಿದ್ದಾರೆ.
'ಫಾದರ್' ಸಿನಿಮಾದ ನಂತರ ಚಂದ್ರು ಮತ್ತೊಂದು ಮೆಗಾ ಪ್ರಾಜೆಕ್ಟ್ ಅನ್ನು ಕೈಗೆತ್ತಿಕೊಳ್ಳಲಿದ್ದು, ಅದು ಕೂಡ ಭಾರೀ ಬಜೆಟ್ ಅನ್ನು ಹೊಂದಿರುವ ಚಿತ್ರವಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಮೂಡಿ ಬರಲಿದ್ದು, ಈಗಾಗಲೇ ಚಿತ್ರದ ಸ್ಕ್ರಿಪ್ಟ್ ಕೆಲಸದಲ್ಲಿ ತೊಡಗಿಕೊಳ್ಳಲಿದ್ದಾರೆ. ಚಂದ್ರು ನಿರ್ಮಾಣದ ಮುಂಬರುವ ಸಿನಿಮಾಗಳಲ್ಲಿ 'ಡಾಗ್' ಹೆಸರಿನ ಇನ್ನೊಂದು ಚಿತ್ರವನ್ನು ಹೊಸ ನಿರ್ದೇಶಕರೊಬ್ಬರು ಡೈರೆಕ್ಟ್ ಮಾಡಲಿದ್ದಾರಂತೆ. ಆದರೆ ಈ ಎಲ್ಲಾ ಐದು ಪ್ಯಾನ್ ಇಂಡಿಯಾ ಚಿತ್ರಗಳಿಗೂ ಚಂದ್ರು ಹಣ ಹಾಕುತ್ತಿದ್ದಾರೆ. ಉಳಿದ ಸಿನಿಮಾಗಳ ಬಗ್ಗೆ ಮುಂದಿನ ದಿನಗಳಲ್ಲಿ ಅಪ್ಡೇಟ್ ಸಿಗಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.