ನವದೆಹಲಿ: ಕ್ಯಾಪ್ಟನ್ ಕೂಲ್ ಖ್ಯಾತಿಯ ಎಂ.ಎಸ್.ಧೋನಿ ಭಾರತಕ್ಕೆ ಎಲ್ಲಾ ಮಾದರಿ(ಐಸಿಸಿ ವಿಶ್ವಕಪ್, ಟಿ-೨೦ ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿ)ಯ ವಿಶ್ವಕಪ್ ಟ್ರೋಫಿ ತಂದುಕೊಟ್ಟ ಸಾಧಕ. ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡ ಹೆಸರು ಮಾಡಿರುವ ಧೋನಿ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಧೋನಿಯನ್ನು ದೇವರೆಂದು ಆರಾಧಿಸುವ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಇಷ್ಟೆಲ್ಲಾ ಸಾಧನೆ ಮಾಡಿರುವ ಧೋನಿ ತಾವು ಬೆಳೆದು ಬಂದ ಹಾದಿಯನ್ನು ಮಾತ್ರ ಮರೆದಿಲ್ಲ. ಇದಕ್ಕೆ ನಿದರ್ಶನವೆಂಬಂತೆ ಧೋನಿಯವರ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
2024ನೇ ಸಾಲಿನ ಐಪಿಎಲ್ ಟೂರ್ನಿಗಾಗಿ ರಾಂಚಿಯಲ್ಲಿ ಧೋನಿ ನೆಟ್ನಲ್ಲಿ ಅಭ್ಯಾಸ ನಡೆಸುತ್ತಿರುವ ಫೋಟೋ ವೈರಲ್ ಆಗಿದೆ. ಇದರಲ್ಲಿ ಧೋನಿ ಬ್ಯಾಟ್ನಲ್ಲಿದ್ದ ಸ್ಟಿಕ್ಕರ್ ಎಲ್ಲರ ಗಮನ ಸೆಳೆಯುತ್ತಿದೆ. ಬಹುತೇಕ ಕ್ರಿಕೆಟಿಗರು ಪ್ರತಿಷ್ಠಿತ ಕಂಪನಿಗಳ ಸ್ಟಿಕ್ಕರ್ಗಳನ್ನಷ್ಟೇ ಬ್ಯಾಟ್ ಮೇಲೆ ಅಂಟಿಸಿಕೊಂಡಿರುತ್ತಾರೆ. ಆದರೆ ಧೋನಿ ತಮ್ಮ ಬ್ಯಾಟ್ ಮೇಲೆ ಬಾಲ್ಯದ ಸ್ನೇಹಿತನ ಶಾಪ್ನ ಹೆಸರಿನ ಸ್ಟಿಕ್ಕರ್ ಅಂಟಿಸಿಕೊಂಡಿದ್ದಾರೆ.
ಇದನ್ನೂ ಓದಿ: IPL 2024: ಈ ವರ್ಷ ಐಪಿಎಲ್’ನಲ್ಲಿ ರಿಷಬ್ ಪಂತ್ ಆಡ್ತಾರಾ..? ಮುಖ್ಯ ಕೋಚ್ ರಿಕಿ ಪಾಂಟಿಂಗ್ ಕೊಟ್ಟೇಬಿಟ್ರು ಬಿಗ್ ಅಪ್ಡೇಟ್
ಧೋನಿ ಬ್ಯಾಟ್ನಲ್ಲಿ ಪ್ರೈಮ್ ಸ್ಫೋರ್ಟ್ಸ್ ಸ್ಟಿಕ್ಕರ್!
MS Dhoni with the 'Prime Sports' sticker bat. It is owned by his friend.
MS thanking him for all his help during the early stage of his career. pic.twitter.com/sYtcGE6Qal
— Mufaddal Vohra (@mufaddal_vohra) February 7, 2024
ಧೋನಿ ಬ್ಯಾಟ್ನಲ್ಲಿ ತಮ್ಮ ಬಾಲ್ಯದ ಸ್ನೇಹಿತ ಪರಮ್ಜಿತ್ ಅವರ ಕ್ರೀಡಾಪರಿಕರಗಳನ್ನು ಮಾರಾಟ ಮಾಡುವ ಪ್ರೈಮ್ ಸ್ಫೋರ್ಟ್ಸ್ ಹೆಸರಿನ ಸ್ಟಿಕ್ಕರ್ ಅಂಟಿಸಿಕೊಂಡಿದ್ದರು. ಈ ಪರಮ್ಜಿತ್ ಸಿಂಗ್ ಬಗ್ಗೆ ಧೋನಿಯವರ ಬಯೋಪಿಕ್ ಸಿನಿಮಾದಲ್ಲೂ ತೋರಿಸಲಾಗಿದೆ. ಧೋನಿಯ ಬ್ಯಾಟ್ಗೆ ಮೊದಲು ಸ್ಪಾನ್ಸರ್ ಮಾಡಿದವರು ಇದೇ ಪರಮ್ಜಿತ್. ಬಾಲ್ಯದಿಂದಲೂ ಧೋನಿಗೆ ಬೆಂಬಲ ನೀಡಿ ಸಹಾಯ ಮಾಡಿದ್ದು ಇವರೇ. ಧೋನಿ ವೃತ್ತಿ ಜೀವನ ಈ ಮಟ್ಟಕ್ಕೇರಲು ಈ ಪರಮ್ಜಿತ್ ಕೊಡುಗೆ ಅಪಾರವಿದೆ.
ಇದೀಗ ಧೋನಿ ವಿಶ್ವಮಟ್ಟದಲ್ಲಿ ದೊಡ್ಡ ಹೆಸರು ಮಾಡಿದ ಕ್ರಿಕೆಟಿಗ. ಆದರೆ ತನ್ನ ವೃತ್ತಿ ಜೀವನಕ್ಕೆ ದೊಡ್ಡ ಕೊಡುಗೆ ನೀಡಿದ ಬಾಲ್ಯದ ಸ್ನೇಹಿತನನ್ನು ಮರೆತಿಲ್ಲ. ಹೀಗಾಗಿಯೇ ಅವರು ತಮ್ಮ ಸ್ನೇಹಿತನ ಶಾಪ್ನ ಹೆಸರಿರುವ ಸ್ಟಿಕ್ಕರ್ಅನ್ನು ಬ್ಯಾಟ್ ಮೇಲೆ ಅಂಟಿಸಿಕೊಂಡಿದ್ದಾರೆ. ಧೋನಿಯವರ ಈ ನಡೆಗೆ ಸೋಷಿಯಲ್ ಮೀಡಿಯಾದಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಗೆಳೆಯನಿಗೆ ಕೃತಜ್ಞತೆ ಸಲ್ಲಿಸಿರುವ ಧೋನಿಗೆ ಸಲಾಂ ಹೇಳಿದ್ದಾರೆ.
ಇದನ್ನೂ ಓದಿ: ವಿರಾಟ್ ಕೊಹ್ಲಿ - ಬಿಸಿಸಿಐ ನಡುವಿನ ಸಮಸ್ಯೆ ಏನು?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.