ಮಹಾರಾಷ್ಟ್ರ ವಿಧಾನಸಭಾ ಚುನಾವಣೆ: ಬಿಜೆಪಿಗೆ 160, ಶಿವಸೇನೆಗೆ 110 ಸ್ಥಾನ ಹಂಚಿಕೆ!

ಬಿಜೆಪಿ ಮತ್ತು ಶಿವಸೇನೆ ನಡುವೆ ಸೀಟು ಹಂಚಿಕೆಯಾಗಿದ್ದು, ಬಿಜೆಪಿಗೆ 160 ಕ್ಕೂ ಹೆಚ್ಚು, ಶಿವಸೇನೆಗೆ 110 ಮತ್ತು ಸಣ್ಣ ಮಿತ್ರ ಪಕ್ಷಗಳಿಗೆ 18 ಸ್ಥಾನಗಳನ್ನು ನೀಡಲಾಗಿದೆ ಎನ್ನಲಾಗಿದೆ. 

Last Updated : Sep 5, 2019, 01:26 PM IST
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ: ಬಿಜೆಪಿಗೆ 160, ಶಿವಸೇನೆಗೆ 110 ಸ್ಥಾನ ಹಂಚಿಕೆ! title=

ಮುಂಬೈ: ಮಹಾರಾಷ್ಟ್ರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಮತ್ತು ಶಿವಸೇನೆ ನಡುವೆ ಸ್ಥಾನ ಹಂಚಿಕೆ ಕುರಿತು ನಿರಂತರ ಮಾತುಕತೆ ನಡೆದಿದ್ದು, ಸೆಪ್ಟೆಂಬರ್ 7ರಂದು ಪ್ರಧಾನಿ ನರೇಂದ್ರ ಮೋದಿ ಕೂಡ ಮುಂಬೈಗೆ ಆಗಮಿಸಲಿದ್ದಾರೆ. ಏತನ್ಮಧ್ಯೆ, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 160ಕ್ಕೂ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಹೇಳಲಾಗುತ್ತಿದೆ.

ಬಿಜೆಪಿ ಮತ್ತು ಶಿವಸೇನೆ ನಡುವೆ ಸೀಟು ಹಂಚಿಕೆಯಾಗಿದ್ದು, ಬಿಜೆಪಿಗೆ 160 ಕ್ಕೂ ಹೆಚ್ಚು, ಶಿವಸೇನೆಗೆ 110 ಮತ್ತು ಸಣ್ಣ ಮಿತ್ರ ಪಕ್ಷಗಳಿಗೆ 18 ಸ್ಥಾನಗಳನ್ನು ನೀಡಲಾಗಿದೆ ಎನ್ನಲಾಗಿದೆ. 110ಕ್ಕಿಂತ ಕಡಿಮೆ ಸ್ಥಾನಗಳಿಗೆ ಸ್ಪರ್ಧಿಸಲು ಶಿವಸೇನೆ ನಿರಾಕರಿಸಿದ್ದು, ಸಣ್ಣ ಮಿತ್ರ ಪಕ್ಷಗಳಿಗೆ 18 ಸ್ಥಾನಗಳನ್ನು ನೀಡಲು ಎರಡೂ ಪಕ್ಷಗಳೂ ಸಮ್ಮತಿ ಸೂಚಿಸಿವೆ ಎಂದು ಮೂಲಗಳು ತಿಳಿಸಿವೆ.

ಮಹಾರಾಷ್ಟ್ರದಲ್ಲಿ 288 ವಿಧಾನಸಭೆ ಸ್ಥಾನಗಳಿದ್ದು, ಸ್ಥಾನ ಹಂಚಿಕೆಗೆ ಸಂಬಂಧಿಸಿದಂತೆ ಅಂತಿಮ ಸೂತ್ರಕ್ಕಾಗಿ ಎರಡೂ ಪಕ್ಷಗಳ ನಾಯಕರ ಸಭೆ ಮುಂದುವರಿಯಲಿದೆ. ಬಿಜೆಪಿ ಮತ್ತು ಶಿವಸೇನೆ ನಡುವೆ ಸೀಟು ಹಂಚಿಕೆ ಕುರಿತು ಮೊದಲ ಸುತ್ತಿನ ಮಾತುಕತೆ ಪೂರ್ಣಗೊಂಡಿದೆ ಎನ್ನಲಾಗಿದೆ. 
 

Trending News