ಮೈಸೂರು: ಬುಧವಾರ ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಕಾರ್ಯಕರ್ತನ ಕೆನ್ನೆಗೆ ಹಿಡಿದಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿರುವ ಸಿದ್ದರಾಮಯ್ಯ, ನನಗೆ ಪುತ್ರ ಸಮಾನನಾದ ರವಿಗೆ ಕೆನ್ನೆಗೆ ಹೊಡೆದಿದ್ದಕ್ಕೆ ವಿಪರೀತಾರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದಿದ್ದಾರೆ.
#WATCH: Congress leader and Karnataka's former Chief Minister Siddaramaiah slaps his aide outside Mysuru Airport. pic.twitter.com/hhC0t5vm8Q
— ANI (@ANI) September 4, 2019
ಈ ಕುರಿತು ಖಾಸಗಿ ಮಾಧ್ಯಮಕ್ಕೆ ನಾಡನಹಳ್ಳಿ ರವಿ ನೀಡಿರುವ ಹೇಳಿಕೆಯ ವಿಡಿಯೋ ಪೋಸ್ಟ್ ಮಾಡಿರುವ ಸಿದ್ದರಾಮಯ್ಯ, ನನಗೆ ಪುತ್ರ ಸಮಾನನಾದ ನಾಡನಹಳ್ಳಿ ರವಿ ನಾನು ಬೆಳೆಸಿದ ಯುವನಾಯಕ, ಇಂತಹ ನೂರಾರು ಯುವಕರು ನನ್ನ ಜತೆ ಇರ್ತಾರೆ. ಅವರ ಜೊತೆ ಪ್ರೀತಿ-ಕೋಪದ ಸಂಬಂಧ ನನ್ನದು. ಅವನಿಗೆ ಹುಸಿಕೋಪದಿಂದ ಕೆನ್ನೆಗೆ ಹೊಡೆದಿದ್ದೆ. ಅದಕ್ಕೆ ವಿಪರೀತಾರ್ಥ ಕಲ್ಪಿಸುವ ಅಗತ್ಯ ಇಲ್ಲ. ರವಿಯೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾನೆ ಎಂದು ಬರೆದಿದ್ದಾರೆ.
ಸಿದ್ದರಾಮಯ್ಯ ನನಗೆ ತಂದೆ ಸಮಾನ:
ಇನ್ನು ಈ ಘಟನೆ ಬಗ್ಗೆ ಸ್ಪಷ್ಟನೆ ನೀಡಿರುವ ರವಿ, ಮೈಸೂರಿನಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮೈಸೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಆ ಸಂದರ್ಭದಲ್ಲಿ ಗಾಂಧಿ ಸ್ಕ್ವೇರ್ ನಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮಕ್ಕೆ ಬರುವಂತೆ ನಾನು ಅವರನ್ನು ಕರೆದೆ, ಅದೇ ಸಮಯದಲ್ಲಿ ಮರಿಗೌಡರು ಫೋನ್ ನೀಡುವಂತೆ ತಿಳಿಸಿದರು. ಫೋನ್ ಕೊಟ್ಟಾಗ ನಾನು ಅಲ್ಲಿ ಮತ್ತೊಂದು ಕಾರ್ಯಕ್ರಮಕ್ಕೆ ಹೋಗುತ್ತಿದ್ದೇನೆ. ನಾನೇ ಬರಬೇಕಾ, ನಾನು ಬರದಿದ್ದರೆ ಆಗುವುದಿಲ್ಲವೇ? ನೀವೇ ಹೋಗಿ ಮಾಡಿ ಎಂದು ಹೇಳಿದರು. ನಾನು ಮತ್ತೆ ಫೋನ್ ನೀಡಲು ಮುಂದಾದಾಗ ಅವರು ಕೈ ಬೀಸಿದರು ಅದನ್ನೇ ಮಾಧ್ಯಮಗಳಲ್ಲಿ ಕೆನ್ನೆಗೆ ಹೊಡೆದರು ಎಂದು ದೊಡ್ಡ ವಿಷಯವಾಗಿ ಬಿಂಬಿಸಲಾಗಿದೆ. ಒಂದು ವೇಳೆ ಸಿದ್ದರಾಮಯ್ಯ ಅವರು ನನಗೆ ಹೊಡೆದರೂ ಅವರು ನನ್ನ ತಂದೆ ಸಮಾನ, ನನ್ನ ಗುರುಗಳು, ಹಿರಿಯರು, ಅವರ ಮಾರ್ಗದರ್ಶನದಿಂದ ನಾನು ಉತ್ತಮ ಜೀವನ ಸಾಗಿಸುತ್ತಿದ್ದೇನೆ. ಅವರ ಆಶೀರ್ವಾದ ನನ್ನ ಮೇಲಿದೆ. ಅವರು ನನಗೆ ಹೊಡೆದಿದ್ದರೂ ನನಗೇನೂ ಬೇಸರವಿಲ್ಲ. ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯ ಇಲ್ಲ. ನನ್ನ ಹಾಗೂ ಸಿದ್ದರಾಮಯ್ಯನವರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾನು ಅವರ ಸಾಕು ಮಗನಂತಿದ್ದೇನೆ ಎಂದಿದ್ದಾರೆ.
ನನಗೆ ಪುತ್ರ ಸಮಾನನಾದ ನಂದನಹಳ್ಳಿ ರವಿ ನಾನು ಬೆಳೆಸಿದ ಯುವನಾಯಕ, ಇಂತಹ ನೂರಾರು ಯುವಕರು ನನ್ನ ಜತೆ ಇರ್ತಾರೆ. ಅವರ ಜೊತೆ ಪ್ರೀತಿ-ಕೋಪದ ಸಂಬಂಧ ನನ್ನದು. ಅವನಿಗೆ ಹುಸಿಕೋಪದಿಂದ ಕೆನ್ನೆಗೆ ಹೊಡೆದಿದ್ದೆ. ಅದಕ್ಕೆ ವಿಪರೀತಾರ್ಥ ಕಲ್ಪಿಸುವ ಅಗತ್ಯ ಇಲ್ಲ. ರವಿಯೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾನೆ. https://t.co/Np3YjqgciZ
— Siddaramaiah (@siddaramaiah) September 4, 2019