ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮುಂಬರುವ ಮಧ್ಯಂತರ ಬಜೆಟ್ನಲ್ಲಿ ಹಲವು ದೊಡ್ಡ ಘೋಷಣೆಗಳನ್ನು ಮಾಡಲಿದ್ದಾರೆ ಎನ್ನಲಾಗಿದೆ. ಆಂಗ್ಲ ಮಾಧ್ಯಮದ ವಾಣಿಜ್ಯ ಪತ್ರಿಕೆಯೊಂದಕ್ಕೆ ದೊರೆತ ಮಾಹಿತಿಯ ಪ್ರಕಾರ, ಮಧ್ಯಂತರ ಬಜೆಟ್ನಲ್ಲಿ ಜಿಎಸ್ಟಿ ನೋಂದಾಯಿತ ಚಿಲ್ಲರೆ ಮತ್ತು ಸಣ್ಣ ವ್ಯಾಪಾರಿಗಳಿಗೆ ಅಗ್ಗದ ಆಕ್ಸಿಡೆಂಟಲ್ ಕವರ್ ಅನ್ನು ವಿತ್ತಸಚಿವೆ ಘೋಷಿಸುವ ಸಾಧ್ಯತೆ ಇದೆ. ರಾಷ್ಟ್ರೀಯ ಚಿಲ್ಲರೆ ವ್ಯಾಪಾರ ನೀತಿಯ ಅಡಿಯಲ್ಲಿ, ವ್ಯಾಪಾರಿಗಳು ಕೇವಲ 6000 ರೂಪಾಯಿಗಳ ರಿಯಾಯಿತಿ ಪ್ರೀಮಿಯಂನಲ್ಲಿ 10 ಲಕ್ಷ ರೂಪಾಯಿವರೆಗಿನ ಅಪಘಾತ ವಿಮಾ ಪಾಲಿಸಿಯನ್ನು ಪಡೆಯಲು ಇದರಿಂದ ಸಾಧ್ಯವಾಗಲಿದೆ ವರದಿ ಹೇಳಿದೆ..(Business News In Kannada/ Budget 2024 News In Kannada)
ಮೂಲಗಳ ಪ್ರಕಾರ, ನ್ಯೂ ಇಂಡಿಯಾ ಇನ್ಶುರೆನ್ಸ್ ಸೇರಿದಂತೆ ಪಿಎಸ್ಯು ವಿಮಾ ಕಂಪನಿಗಳಿಗೆ ಈ ಜವಾಬ್ದಾರಿಯನ್ನು ವಿತ್ತ ಸಚಿವರು ನೀಡುವ ಸಾಧ್ಯತೆ ಇದೆ. ಡಿಪಿಐಐಟಿ ವಿಮಾ ಕಂಪನಿಗಳೊಂದಿಗೆ ಮಾತುಕತೆ ನಡೆಸಿದೆ ಎಂದು ಹೇಳಲಾಗಿದ್ದು. ಮಾಹಿತಿ ಪ್ರಕಾರ ರಾಷ್ಟ್ರೀಯ ಚಿಲ್ಲರೆ ವ್ಯಾಪಾರ ನೀತಿಯಡಿ ಉದ್ಯಮಿಗಳಿಗೆ ಪಾಲಿಸಿ ನೀಡಲು ಯೋಜನೆ ರೂಪಿಸಲಾಗಿದೆ. ಅಲ್ಲದೆ, ಭಾಗಶಃ ಮತ್ತು ಪ್ರಮುಖ ಅಪಘಾತಗಳ ಜೊತೆಗೆ ಮರಣ ರಕ್ಷಣೆಯನ್ನು ಪಾಲಿಸಿಯಲ್ಲಿ ಸೇರಿಸಲಾಗುತ್ತದೆ ಎಂದೂ ಕೂಡ ಹೇಳಲಾಗಿದೆ.
ಇದನ್ನೂ ಓದಿ-ಪಿಂಚಣಿಗೆ ಸಂಬಂಧಿಸಿದ ನಿಯಮದಲ್ಲಿ ಬದಲಾವಣೆ, ಇನ್ಮುಂದೆ ಸಂಗಾತಿ ಕೈಯಲ್ಲಿ ಇರುವುದಿಲ್ಲ ಈ ಅಧಿಕಾರ!
ವಿಮಾ ವಲಯದ ನಿರೀಕ್ಷೆಗಳು
ಜೀವ ವಿಮಾ ಉದ್ಯಮವು ಬಜೆಟ್ 2023 ರಲ್ಲಿ ಹೆಚ್ಚಿನ ಮೌಲ್ಯದ ಎಂಡೋಮೆಂಟ್ ಪಾಲಿಸಿಗಳ ಮೆಚುರಿಟಿ ಆದಾಯಕ್ಕಾಗಿ ತೆರಿಗೆ-ಮುಕ್ತ ಸ್ಥಿತಿಯನ್ನು ಹಿಂತೆಗೆದುಕೊಳ್ಳುವ ರೂಪದಲ್ಲಿ ಹೊಡೆತವನ್ನು ಅನುಭವಿಸಿವೆ. ಏಪ್ರಿಲ್ 1, 2023 ರಿಂದ, 5 ಲಕ್ಷ ರೂ.ಗಿಂತ ಹೆಚ್ಚಿನ ವಾರ್ಷಿಕ ಪ್ರೀಮಿಯಂನ ಹೊಸ ಸಾಂಪ್ರದಾಯಿಕ ಪಾಲಿಸಿಗಳು ಮೆಚ್ಯೂರಿಟಿ ಆದಾಯದ ಮೇಲೆ ಈ ಪ್ರಮುಖ ತೆರಿಗೆ ಪ್ರಯೋಜನವನ್ನು ಪಡೆಯುವುದನ್ನು ನಿಲ್ಲಿಸಿವೆ.
ಇದನ್ನೂ ಓದಿ-Union Budget 2024: ಮಧ್ಯಂತರ ಬಜೆಟ್ ನಲ್ಲಿ 'ಮೋದಿ ಕಿ ಗ್ಯಾರಂಟಿ' ಝಲಕ್, ರೈತ-ಕಾರ್ಮಿಕರ ಮೇಲಿರಲಿದೆ ಮೇಜರ್ ಫೋಕಸ್!
ಸರ್ಕಾರ ಈ ನಿಯಮವನ್ನು ಸಡಿಲಿಸುತ್ತದೆ ಎಂದು ಜೀವ ವಿಮಾದಾರರು ಆಶಿಸುತ್ತಿದ್ದಾರೆ. ಈ ಕುರಿತು ಮಾತನಾಡಿರುವ ಎಡೆಲ್ವೀಸ್ ಟೋಕಿಯೊ ಲೈಫ್ ಇನ್ಶುರೆನ್ಸ್ನ ಎಂಡಿ ಮತ್ತು ಸಿಇಒ ಸುಮಿತ್ ರೈ, “ಉದ್ಯಮವು 5 ಲಕ್ಷ ರೂಪಾಯಿಗಳ ಮಿತಿಯನ್ನು ಮರುಪರಿಶೀಲಿಸುವಂತೆ ಒತ್ತಾಯಿಸುತ್ತಿದೆ ಮತ್ತು ಅದನ್ನು 10 ಲಕ್ಷಕ್ಕೆ ಹೆಚ್ಚಿಸುವ ಬಗ್ಗೆ ಪರಿಗಣಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದೆ. ಆ ಮುಂಭಾಗದಲ್ಲಿ ನಾವು ಕೆಲವು ಬದಲಾವಣೆಗಳನ್ನು ನೋಡಬಹುದು' ಎಂದು ಹೇಳಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ