Shukra Nakshatra Parivartan 2024: ಪೂರ್ವಾಷಾಢಾ ನಕ್ಷತ್ರಕ್ಕೆ ಶುಕ್ರನ ಪ್ರವೇಶ, ಮಹಾಲಕ್ಷ್ಮಿ ಕೃಪೆಯಿಂದ ಈ ಜನರಿಗೆ ಧನ ಕುಬೇರ ನಿಧಿ ಪ್ರಾಪ್ತಿ ಯೋಗ!

Shukra Nakshatra Parivartan 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಪೂರ್ವಾಷಾಢಾ ನಕ್ಷತ್ರಕ್ಕೆ ಧನ-ವೈಭವ ಕರುಣಿಸುವ ಶುಕ್ರನಾ ಪ್ರವೇಶ ನೆರವೇರಲಿದೆ. ಇದು ಹಲವು ರಾಶಿಗಳ ಜನರ ಮೇಲೆ  ಸಕಾರಾತ್ಮಕ ಪ್ರಭಾವವನ್ನು ಬೀರಲಿದೆ ಮತ್ತು ಅವರ ಜೀವನದಲ್ಲಿ ಧನ-ಧಾನ್ಯ ವೃದ್ಧಿಯಾಗಲಿದೆ. (Spiritual News In Kannada)
 

Shukra Nakshatra Privartan 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಧನ ವೈಭವದಾತ ಶುಕ್ರ ಒಂದು ನಿಶ್ಚಿತ ಕಾಲಾಂತರದಲ್ಲಿ ತನ್ನ ರಾಶಿಯನ್ನು ಪರಿವರ್ತಿಸಿದಂತೆ ತನ್ನ ನಕ್ಷತ್ರವನ್ನು ಕೂಡ ಪರಿವರ್ತಿಸುತ್ತಾನೆ. ಶುಕ್ರನ ಈ ನಕ್ಷತ್ರ ಪರಿವರ್ತನೆ ಎಲ್ಲಾ ದ್ವಾದಶ ರಾಶಿಗಳ ಜನರ ಮೇಲೆ ಪ್ರಭಾವವನ್ನುಂಟು ಮಾಡುತ್ತದೆ. ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರ ಜನವರಿ 29, 2024 ರಂದು ಸಂಜೆ 5 ಗಂಟೆ 6 ನಿಮಿಷಕ್ಕೆ ಪೂರ್ವಾಷಾಢಾ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ.ಶುಕ್ರನ ಈ ನಕ್ಷತ್ರ ಪರಿವರ್ತನೆಯ ಪ್ರಭಾವ ಹಲವು ರಾಶಿಗಳ ಜನರ ಮೇಲೆ ಸಕಾರಾತ್ಮಕ ಪ್ರಭಾವವನ್ನು ಬೀರಲಿದೆ. ಬನ್ನಿ ಯಾವ ರಾಶಿಗಳ ಜನರ ಮೇಲೆ ಇದರ ಸಕಾರಾತ್ಮಕ ಪ್ರಭಾವ ಗೋಚರಿಸಲಿದೆ ತಿಳಿದುಕೊಳ್ಳೋಣ, 

 

ಇದನ್ನೂ ಓದಿ-Mangala Kumbh Gochar 2024: ಹದಿನೈದು ತಿಂಗಳ ಬಳಿಕ ಕುಂಭ ರಾಶಿಗ ಮಂಗಳನ ಪ್ರವೇಶ, ಈ ಜನರ ಜೀವನದಲ್ಲಿ ಗೋಲ್ಡನ್ ಟೈಮ್ ಆರಂಭ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ಒಟ್ಟು 27 ನಕ್ಷತ್ರಗಳಲ್ಲಿ ಪೂರ್ವಾಷಾಢಾ ನಕ್ಷತ್ರ 20ನೇ ನಕ್ಷತ್ರವಾಗಿದೆ. ಸ್ವಯಂ ಶುಕ್ರನೆ ಈ ನಕ್ಷತ್ರಕ್ಕೆ ಅಧಿಪತಿಯಾಗಿದ್ದಾನೆ. ಹೀಗಿರುವಾಗ ಶುಕ್ರ ತನ್ನ ಸ್ವನಕ್ಷತ್ರಕ್ಕೆ ಪ್ರವೇಶಿಸುತ್ತಿರುವುದು, ಸಮಾಜದಲ್ಲಿ ಘನತೆ ಗೌರವವನ್ನು ಹೆಚ್ಚಿಸುತ್ತದೆ. ಪ್ರೇಮ ಸಂಬಂಧದಲ್ಲಿ ಲಾಭ ಸಿಗಲಿದೆ. ಇದರ ಜೊತೆಗೆ ಅಪಾರ ಧನ ಸಂಪತ್ತು ಪ್ರಾಪ್ತಿಯಾಗಿ ಸುಖಿ ಜೀವನವನ್ನು ಕಳೆಯಬಹುದು.   

2 /5

ಮೇಷ ರಾಶಿ: ಶುಕ್ರ ಪೂರ್ವಾಷಾಢಾ ನಕ್ಷತ್ರವನ್ನು ಪ್ರೇವೇಶಿಸಿದ ನಿಮ್ಮ ಗೋಚರ ಜಾತಕದ ನವಮ ಭಾವದಲ್ಲಿ ಸಂಚರಿಸಲಿದ್ದಾನೆ. ಹೀಗಿರುವಾಗ ನಿಮಗೆ ನಿಮ್ಮ ಅದೃಷ್ಟದ ಸಂಪೂರ್ಣ ಬೆಂಬಲ ಪ್ರಾಪ್ತಿಯಾಗಲಿದೆ. ಆಧ್ಯಾತ್ಮದತ್ತ ನಿಮ್ಮ ಒಲವು ಹೆಚ್ಚಾಗಲಿದೆ. ಉನ್ನತ ಶಿಕ್ಷಣ ಪಡೆಯಬೇಕೆಂಬ ನಿಮ್ಮ ಆಸೆ ಈಡೇರಲಿದೆ. ಕಾರ್ಯ ಕ್ಷೇತ್ರದಲ್ಲಿ ನಿಮ್ಮ ಪ್ರಯತ್ನಕ್ಕೆ ಭಾರಿ ಪ್ರಶಂಸೆ ಸಿಗಲಿದೆ. ಪದೋನ್ನತಿಯ ಜೊತೆಗೆ ಪ್ರಶಸ್ತಿ ಲಭಿಸಲಿದೆ. ವಿದೇಶಕ್ಕೆ ಹೋಗುವ ನಿಮ್ಮ ಕನಸು ಈಡೇರಲಿದೆ. ವೈವಾಹಿಕ ಜೀವನ ಮತ್ತು ಲವ್ ಲೈಫ್ ಕುರಿತು ಹೇಳುವುದಾದರೆ, ಸಕಾರಾತ್ಮಕ ಪ್ರರಿಣಾಮಗಳು ಕಂಡುಬರಲಿವೆ. ಬಾಳಸಂಗಾತಿಯ ಜೊತೆಗೆ ಉತ್ತಮ ಕಾಲವನ್ನು ಕಳೆಯುವಿರಿ. ಪರಸ್ಪರ ಚೆನ್ನಾಗಿ ಅರಿತು, ಅವರ ಬೆಂಬಲದಿಂದ ನೀವು ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸುವಿರಿ.   

3 /5

ಮಿಥುನ ರಾಶಿ: ಶುಕ್ರನ ಪೂರ್ವಾಷಾಢಾ ನಕ್ಷತ್ರ ಗೋಚರದ ಮೂಲಕ ನಿಮ್ಮ ಜಾತಕದ ಸಪ್ತಮ ಭಾವದಲ್ಲಿ ಸಂಚರಿಸಲಿದ್ದಾನೆ. ಹೀಗಿರುವಾಗ ನಿಮ್ಮ ಜೀವನದಲ್ಲಿ ಅದರ ಸಕಾರಾತ್ಮಕ ಪರಿಣಾಮಗಳನ್ನು ನೀವು ಕಾಣಬಹುದು. ಸ್ವಲ್ಪ ಎಚ್ಚರಿಕೆ ವಹಿಸಿದರೆ, ಪಾಟ್ನರ್ ಶಿಪ್ ವ್ಯವಹಾರದಲ್ಲಿ ನಿಮಗೆ ಲಾಭ ಸಿಗಲಿದೆ. ವೈವಾಹಿಕ ಜೀವನ ಸಾಕಷ್ಟು ಖುಷಿಗಳಿಂದ ಕೂಡಿರಲಿದೆ. ಒಂಟಿಯಾಗಿದ್ದರೆ, ವಿಶೇಷ ವ್ಯಕ್ತಿಯ ಜೊತೆಗೆ ನಿಮ್ಮ ಭೇಟಿ ನೆರವೇರುವ ಸಾಧ್ಯತೆ ಇದೆ. ಶುಕ್ರನ ಕೃಪೆಯಿಂದ ನಿಮಗೆ ಅಪಾರ ಧನ-ಸಂಪತ್ತು ಪ್ರಾಪ್ತಿಯಾಗಲಿದೆ. ಕುಟುಂಬಸ್ಥರ ಜೊತೆಗೆ ಉತ್ತಮ ಕಾಲವನ್ನು ಕಳೆಯುವಿರಿ.   

4 /5

ಧನು ರಾಶಿ: ಪೂರ್ವಾಷಾಢಾ ನಕ್ಷತ್ರಕ್ಕೆ ಶುಕ್ರ ಪ್ರವೇಶಿಸಿ ನಿಮ್ಮ ಜಾತಕದ ಲಗ್ನ ಭಾವದಲ್ಲಿ ಆತ ಸಂಚರಿಸಲಿದ್ದಾನೆ. ಇದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರಲಿದೆ. ಆತ್ಮ ಗೌರವ ಹೆಚ್ಚಾಗಲಿದೆ. ಇದರಿಂದ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ನಿಮ್ಮದಾಗುವುದರ ಜೊತೆಗೆ ಅಪಾರ ಧನ ಸಂಪಾದನೆಯನ್ನು ಮಾಡುವಲ್ಲಿ ನೀವು ಯಶಸ್ವಿಯಾಗುವಿರಿ. ಆದಾಯದ ಹೊಸ ಮೂಲಗಳು ತೆರೆದುಕೊಳ್ಳಲಿವೆ. ವೈಯಕ್ತಿಕ ವಿಕಾಸದ ಜೊತೆಗೆ ದೀರ್ಘಕಾಲದಿಂದ ನೀವು ಪಡುತ್ತಿರುವ ಪ್ರಯತ್ನಕ್ಕೆ ಯಶಸ್ಸು ಸಿಗಲಿದೆ. ನಿಮಗೆ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸಿನ ಜೊತೆಗೆ ಧನಲಾಭ ಸಿಗುವ ಪ್ರಬಲ ಯೋಗಗಳು ನಿರ್ಮಾಣಗೊಳ್ಳುತ್ತಿವೆ. ಇದಲ್ಲದೆ ಈ ಅವಧಿಯಲ್ಲಿ ಅದೃಷ್ಟವೂ ಕೂಡ ನಿಮ್ಮೊಂದಿಗಿರಲಿದೆ.  

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)