Darshan Got Bhumi Putra Title: ಚಂದನವನದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಸಿದ 'ಕಾಟೇರ' ಸಿನಿಮಾ ತೆರೆಕಂಡು, ದೇಶದೆಲ್ಲಡೆ ಮಾತ್ರವಲ್ಲೇ ವಿದೇಶದಲ್ಲೂ ಭರ್ಜರಿ ಪ್ರದರ್ಶನವಾಗಿ, ಈಗಾಗಲೇ 25 ದಿನಗಳನ್ನು ಪೂರೈಸಿದೆ. ಇದೇ ವೇಳೆ ಜನವರಿ 26 ಗಣರಾಜ್ಯೋತ್ಸವದಂದು ರೈತ ಸಂಘದ ಮುಖಂಡ ದಿವಗಂತದ ಕೆ ಎಸ್ ಪುಟ್ಟಣ್ಣಯ್ಯ 75ನೇ ಜನ್ಮದಿನದ ಅಂಗವಾಗಿ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ನಟ ದರ್ಶನ್‌ಗೆ ಭೂಮಿಪುತ್ರ ಎಂಬ ಬಿರುದನ್ನು ನೀಡಿ ಗೌರವಿಸಲಾಗಿದೆ. ವಿಶೇಷ ಸಮಾರಂಭದಲ್ಲಿನಟ ದರ್ಶನ್‌ಗೆ ಎಲ್ಲಾ ಜಿಲ್ಲೆಯ ಮಣ್ಣು, ರಾಗಿ, ಗೋಧಿ ಹಾಗೂ ಟಗರನ್ನು ನೀಡಿ, ಭೂಮಿ ಪುತ್ರ ಅನ್ನೋ ಬಿರುದನ್ನು ರೈತ ಸಂಘದ ಪರವಾಗಿ ಕೆ ಎಸ್ ಪುಟ್ಟಣ್ಣಯ್ಯ ಪುತ್ರ ವೇದಿಕೆ ಮೇಲೆ ನೀಡಿದ್ದಾರೆ.
ವೇದಿಕೆಯ ಮೇಲಿದ್ದಾಗ ದರ್ಶನ್ ರೈತರ ತ್ಯಾಗ, ಸೇವೆಯನ್ನು ನೆನಪಿಸಿಕೊಳ್ಳುವುದರ ಜೊತೆಗೆ, ಕೆ ಎಸ್ ಪುಟ್ಟಣ್ಣಯ್ಯ ಸೇವೆಯನ್ನು ನೆನೆದಿದ್ದಾರೆ. ದರ್ಶನ್, "ರೈತರ ಸಂಘಕ್ಕೆ ಯಾರು ಕೈ ಕೊಡುವುದಕ್ಕೆ ಹೋಗಬೇಡಿ. ಅನ್ನನಾ ದೇವರು ಅಂತೀವಿ. ಆ ದೇವರನ್ನು ಸೃಷ್ಟಿ ಮಾಡುವ ಏಕೈಕ ಅಧಿಕಾರ ಇರೋದು ಯಾರಿಗೆ? ಅವನೊಬ್ಬನಿಗೆನೇ.. ಅವನು ನೇಗಿಲು ಹಿಡಿಯೋದಿಲ್ಲ, ಎತ್ತು ಕಟ್ಟುವುದಿಲ್ಲ ಅಂದರೆ ಮಣ್ಣು ತಿನ್ನಬೇಕಾಗುತ್ತೆ. ನಾನು ಯಾವಾಗಲೂ ಹೇಳುತ್ತೇನೆ ರೈತರಿಗೆ ಸಿಂಪತಿ ಬೇಡ. ಅಯ್ಯೋ ಪಾಪ ಅಂತ ಹೇಳುವುದಕ್ಕೆ ಹೋಗಬೇಡಿ. ನ್ಯಾಯವಾದ ಬೆಲೆ ಕೊಟ್ಟು ಬಿಟ್ಟರೆ, ಎಲ್ಲರೂ ಹೆಲಿಕಾಪ್ಟರ್‌ನಲ್ಲಿ ಬರುತ್ತೇವೆ." ಎಂದು ರೈತರ ಬಗ್ಗೆ ಹೇಳಿದ್ದಾರೆ.
ಇದನ್ನೂ ಓದಿ: ʻರಂಗಿತರಂಗʼ ಬಳಿಕ ನಿರೂಪ್-ಸಾಯಿಕುಮಾರ್ ಕಾಂಬೋದಲ್ಲಿ ಹೊಸ ಸಿನಿಮಾ: ಚಿತ್ರಕಥೆಯೇನು ಗೊತ್ತೇ?
ಅದೇ ವೇದಿಕೆ ದರ್ಶನ್, "ಮುಂದಕ್ಕೆ ನಮ್ಮ ಟೈಗರ್ ಸಿನಿಮಾ ಬರುತ್ತೆ. ಮಾದೇವ ಬರುತ್ತೆ. ಹಾಗೇ ಧನ್ವೀರ್‌ದು ವಾಮನ ಬರುತ್ತೆ. ನಮ್ಮ ಚಿಕ್ಕಣ್ಣನದ್ದು ಉಪಾಧ್ಯಕ್ಷ ಬಂದಿದೆ. ಸಿನಿಮಾ ನೋಡುತ್ತಿದ್ದೀರ. ಇನ್ನು ನೋಡಿ ಇದೆಲ್ಲ ಅಪ್ಪಟ ಕನ್ನಡ ಸಿನಿಮಾಗಳು. ಅದ್ಯಾವುದೂ ಬೇರೆ ಭಾಷೆ ಸಿನಿಮಾ ಅಲ್ಲ. ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ. ಕನ್ನಡ ಸಿನಿಮಾಗಳನ್ನು ಹರಸಿ ಬೆಳೆಸಿ." ಎಂದು ಮೇಲೆ ಅಪ್ಪಟ ಕನ್ನಡ ಸಿನಿಮಾಗಳನ್ನು ಬೆಂಬಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಇನ್ನೊಂದು ಕಡೆ ಮತ್ತೆ ವೈವಾಹಿಕ ಜೀವನದಲ್ಲಿ ಎದ್ದಿರೋ ಬಿರುಗಾಳಿ ಬಗ್ಗೆ ದರ್ಶನ್ ಪರೋಕ್ಷವಾಗಿ ಮಾತನಾಡುತ್ತಾರೆಂಬ ನಿರೀಕ್ಷೆಯಿದ್ದು, ಅದಕ್ಕೆ ತಕ್ಕಂತೆ "ಉರಿಯೋರು ಉರಿದುಕೊಳ್ಳಲಿ.. ಬೈದೋರು ಬೈಯಿಸಿಕೊಳ್ಳಲಿ. ದರ್ಶನ್ ನೀನು ಹಿಂಗೆ ಇರು. ಇವತ್ತು ತುಂಬಾ ತಾಳ್ಮೆಯಿಂದ ಇದ್ದೀನಿ. ತಾಳ್ಮೆ ತುಂಬಾನೇ ಕಲಿಸುತ್ತಿದೆ. ಯಾರು ಏನೇ ಅಂದುಕೊಂಡರೂ, ಏನೇ ಮಾಡಿಕೊಂಡರೂ, ಇಲ್ಲಿರೋ ಸೆಲೆಬ್ರೆಟಿಗಳು ಸಾಕು ನನಗೆ. ಇನ್ಯಾರು ಬೇಡ ನನಗೆ ಅಂತ ಹೇಳುವುದಕ್ಕೆ ಇಷ್ಟ ಪಡುತ್ತೇನೆ." ಎಂದು ಹೇಳಿದ್ದಾರೆ. ಈ ಮೂಲಕ ನಟ ದರ್ಶನ್ ಪರೋಕ್ಷವಾಗಿ ಟಾಂಗ್ ಕೊಟ್ರಾ ಅನ್ನೋ ಪ್ರಶ್ನೆ ಕೂಡ ಎದ್ದಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ