ಸೋಮಣ್ಣ ಬಿಜೆಪಿಗೆ ಬರಲು ನಾನೂ ಕೂಡ ಕಾರಣ, ಅವರ ವಿರುದ್ಧ ಕೆಲಸ‌ ಮಾಡಿಲ್ಲ: ರುದ್ರೇಶ್ 

ತನ್ನ‌ ಸೋಲಿಗೆ ರುದ್ರೇಶ್ ಕಾರಣ ಎಂಬ ಸೋಮಣ್ಣ ಪರೋಕ್ಷ ಆರೋಪಕ್ಕೆ ಕೆಆರ್ಐಡಿಎಲ್ ಮಾಜಿ ಅಧ್ಯಕ್ಷ, ವಿಜಯೇಂದ್ರ ಆಪ್ತ ರುದ್ರೇಶ್ ಪ್ರತಿಕ್ರಿಯೆ ಕೊಟ್ಟು ತಾನು ಪಕ್ಷ ವಿರೋಧಿ ಕಾರ್ಯ ಮಾಡಿಲ್ಲ ಎಂದಿದ್ದಾರೆ.

Written by - Manjunath N | Last Updated : Jan 23, 2024, 07:01 PM IST
  • ನಮ್ಮದು ರಾಷ್ಟ್ರೀಯ ಪಕ್ಷ ಹಿರಿಯ ನಾಯಕರಿದ್ದಾರೆ ಅವರ ಅಣತಿಯಂತೆ ನಡೆಯಬೇಕು,ಇಷ್ಟು ವರ್ಷದಿಂದ ನಾನು ಪಕ್ಷದ ಪರವಾಗಿ ಓಡಾಡುತ್ತಿದ್ದೇನೆ,
  • ಯಾವತ್ತು ಪಕ್ಷ ವಿರೋಧಿ ಕೆಲಸ ಮಾಡಿಲ್ಲ, ಸೋಮಣ್ಣ ವಿರುದ್ದವೂ ಮಾತನಾಡಿಲ್ಲ ಎಂದು ಸ್ಪಷ್ಟನೆ ಕೊಟ್ಟರು
 ಸೋಮಣ್ಣ ಬಿಜೆಪಿಗೆ ಬರಲು ನಾನೂ ಕೂಡ ಕಾರಣ, ಅವರ ವಿರುದ್ಧ ಕೆಲಸ‌ ಮಾಡಿಲ್ಲ: ರುದ್ರೇಶ್  title=

ಚಾಮರಾಜನಗರ: ತನ್ನ‌ ಸೋಲಿಗೆ ರುದ್ರೇಶ್ ಕಾರಣ ಎಂಬ ಸೋಮಣ್ಣ ಪರೋಕ್ಷ ಆರೋಪಕ್ಕೆ ಕೆಆರ್ಐಡಿಎಲ್ ಮಾಜಿ ಅಧ್ಯಕ್ಷ, ವಿಜಯೇಂದ್ರ ಆಪ್ತ ರುದ್ರೇಶ್ ಪ್ರತಿಕ್ರಿಯೆ ಕೊಟ್ಟು ತಾನು ಪಕ್ಷ ವಿರೋಧಿ ಕಾರ್ಯ ಮಾಡಿಲ್ಲ ಎಂದಿದ್ದಾರೆ.

ಚಾಮರಾಜನಗರದಲ್ಲಿ ಮಾಧ್ಯಮವರೊಟ್ಟಿಗೆ ಅವರು ಮಾತನಾಡಿ, ವಿ.ಸೋಮಣ್ಣ ಕಾಂಗ್ರೆಸ್ ನಲ್ಲಿದ್ದ ವೇಳೆ; ಅವರು ಬಿಜೆಪಿಗೆ ಬರಬೇಕೆಂದು ನಾನು ಸಾಕಷ್ಟು ಬಾರಿ ಮನವಿ ಮಾಡಿಕೊಂಡು, ಅವರನ್ನು ಪಕ್ಷಕ್ಕೆ ಕರೆತರುವ ಅಳಿಲು ಸೇವೆ ಮಾಡಿದ್ದೇನೆ, ಸೋಮಣ್ಣ ಬಿಜೆಪಿಗೆ ಬರಲು ನಾನೂ ಕೂಡ ಕಾರಣ ಎಂದರು.

ಇದನ್ನೂ ಓದಿ: ಹಳಸಿದ ಬಾಯಲ್ಲಿ ದಾಲ್ಚಿನ್ನಿ ನೀರು ಕುಡಿಯಿರಿ: ಈ ಕಾಯಿಲೆಗಳಿಗೆ ಪರ್ಮನೆಂಟ್ ರಿಲೀಫ್ ಸಿಗುತ್ತೆ!

ಸೋಮಣ್ಣ ಅವರು ದೊಡ್ಡವರು, ನಾನು ನೋಡಿದ ಹಾಗೆ ನನ್ನ ಹೆಸರನ್ನು ಸೋಮಣ್ಣ ಎಲ್ಲೂ ಹೇಳಿಲ್ಲ, ನಾನೇ ಹೋಗಿ ಸೋಮಣ್ಣರ ಬಳಿ ಮಾತನಾಡುತ್ತೇನೆ.ನನ್ನಿಂದ ಏನು ತಪ್ಪಾಗಿದೆ ಎಂದು ಕೇಳುತ್ತೇನೆ ಎಂದು ಹೇಳಿದರು.ಸೋಮಣ್ಣರ ಸೋಲಿಗೆ ರುದ್ರೇಶ್ ಕಾರಣ ಎಂಬ ವಿಚಾರಕ್ಕೆ ಮಾತನಾಡಿ, ನಾನು ಕಾರಣವಲ್ಲ, ಚುನಾವಣೆ ವೇಳೆ ನಾನು ಬಂದೂ ಇಲ್ಲ ,ಚುನಾವಣೆ ಸಂದರ್ಭದಲ್ಲಿ ನಾನು ಕಾರ್ಯಕರ್ತರನ್ನು ಭೇಟಿನೂ ಆಗಿಲ್ಲ, ಏನನ್ನೂ ಹೇಳಿಲ್ಲ, ಒಂದು ವೇಳೆ ನನ್ನನ್ನು ಕರೇದಿದ್ರೆ ನಾನು ಬಂದು ಚುನಾವಣೆ  ಕೆಲಸ ಮಾಡುತ್ತಿದ್ದೆ, ಹನೂರಿನ ಅಭ್ಯರ್ಥಿ ಕರೆದಿದ್ದಕ್ಕೆ ಅಲ್ಲಿ ಕೆಲ ದಿನ ಪ್ರಚಾರ ಮಾಡಿದ್ದೆ, ಚಾಮರಾಜನಗರಕ್ಕೆ ನಾನು ಬಂದಿಲ್ಲ ಎಂದರು.

ನಮ್ಮದು ರಾಷ್ಟ್ರೀಯ ಪಕ್ಷ ಹಿರಿಯ ನಾಯಕರಿದ್ದಾರೆ ಅವರ ಅಣತಿಯಂತೆ ನಡೆಯಬೇಕು,ಇಷ್ಟು ವರ್ಷದಿಂದ ನಾನು ಪಕ್ಷದ ಪರವಾಗಿ ಓಡಾಡುತ್ತಿದ್ದೇನೆ, ಯಾವತ್ತು ಪಕ್ಷ ವಿರೋಧಿ ಕೆಲಸ ಮಾಡಿಲ್ಲ, ಸೋಮಣ್ಣ ವಿರುದ್ದವೂ ಮಾತನಾಡಿಲ್ಲ ಎಂದು ಸ್ಪಷ್ಟನೆ ಕೊಟ್ಟರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News