ಬಾಗ್ಪಾತ್: ಯಮುನಾ ನದಿಯಲ್ಲಿ ರೈತರು ಮತ್ತು ಕಾರ್ಮಿಕರಿಂದ ತುಂಬಿದ್ದ ದೋಣಿ ಮುಳುಗಿ ಉತ್ತರ ಪ್ರದೇಶದ ಬಾಗ್ಪಾತ್ ಜಿಲ್ಲೆಯಲ್ಲಿ 22 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಆದಾಗ್ಯೂ, ಜಿಲ್ಲಾಡಳಿತವು ಇದನ್ನು ದೃಢಪಡಿಸಲಿಲ್ಲ.
ಜಿಲ್ಲಾಡಳಿತವು ಅಪಘಾತದ ನಂತರ ಸುಮಾರು ಹನ್ನೆರಡು ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ತಿಳಿಸಿದೆ. ಹಡಗಿನಲ್ಲಿ 60 ಪ್ರಯಾಣಿಕರು ಎಂದು ತಿಳಿದುಬಂದಿದ್ದು, ಪೋಲಿಸ್ ಮತ್ತು ಆಡಳಿತ ಅಧಿಕಾರಿಗಳಿಂದಸ್ಥಳದಲ್ಲಿ ರಕ್ಷಣಾ ಕಾರ್ಯ ಮುಂದುವರೆದಿದೆ.
ಘಟನೆಯ ನಂತರ ಪೊಲೀಸರು ಮತ್ತು ಸ್ಥಳೀಯ ಅಧಿಕಾರಿಗಳು ತಡವಾಗಿ ತಲುಪಿದರು. ಇದಕ್ಕೂ ಮೊದಲು ಹೆದ್ದಾರಿಯಲ್ಲಿ ಹಾದು ಹೋಗುತ್ತಿದ್ದ ಸ್ಥಳೀಯರಿಂದ ಕೆಲವು ಮಂದಿಯನ್ನು ರಕ್ಷಿಸಲಾಗಿತ್ತು ಎಂದು ತಿಳಿದು ಬಂದಿದೆ.
ಸ್ಥಳದಲ್ಲೇ ಇರುವ ಜಿಲ್ಲಾ ಮ್ಯಾಜಿಸ್ಟ್ರೇಟ್ ಭವಾನಿ ಸಿಂಗ್ ದೋಣಿಯಲ್ಲಿ 60 ಕ್ಕಿಂತ ಹೆಚ್ಚು ಪ್ರಯಾಣಿಕರಿದ್ದರು, ಅವರಲ್ಲಿ ಹೆಚ್ಚು ಮಂದಿ ಮಹಿಳೆಯರು ಎಂದು ತಿಳಿಸಿದ್ದಾರೆ. ಜನರು ಬಾಗ್ಪಾಟ್ ನಿಂದ ಹರಿಯಾಣಕ್ಕೆ ಕೆಲಸ ಮಾಡಲು ಹೊರಟಿದ್ದರು. ದೋಣಿಯು ನದಿಯ ಮಧ್ಯ ಭಾಗಕ್ಕೆ ತಲುಪಿದಾಗ ಇದ್ದಕ್ಕಿದ್ದಂತೆ ಮುಳುಗಿದೆ ಎಂದು ತಿಳಿಸಿದ ಅವರು ಇದುವರೆಗೂ 22 ಮೃತ ದೇಹಗಳನ್ನು ಹೊರಗೆ ತೆಗೆಯಲಾಗಿದೆ ಹಾಗೂ ಸುಮಾರು 12 ಮಂದಿಯನ್ನು ರಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ದೋಣಿ ಕೇವಲ 15 ಪ್ರಯಾಣಿಕರನ್ನು ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿತ್ತು, ಆದರೆ ಸುಮಾರು 60 ಪ್ರಯಾಣಿಕರು ಬೋರ್ಡ್ನಲ್ಲಿ ಇದ್ದರು. ಇದರಿಂದಾಗಿ ಅಪಘಾತ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಮತ್ತೊಂದೆಡೆ, ಅಪಘಾತದಲ್ಲಿ ಮೃತಪಟ್ಟವರನ್ನು ಗ್ರಾಮಸ್ಥರು ಮತ್ತು ಸಂಬಂಧಿಕರ ಮೂಲಕ ಪತ್ತೆ ಹಚ್ಚಲಾಗುತ್ತಿದೆ.
ಬಿಹಾರದಲ್ಲೂ ದೋಣಿ ಅಪಘಾತ
ಮತ್ತೊಂದೆಡೆ, ಗಂಗಾ ನದಿಯಲ್ಲಿ ಆರು ಜನರು ಮುಳುಗಿ ಮೃತಪಟ್ಟಿರುವ ವರದಿಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ಅಪಘಾತ ಸಂಭವಿಸಿದಾಗ ಪಾಟ್ನಾದ ಮೊಕಾಮಾ ವಿಭಾಗದ ಮಾರಿಕಾ ಹಳ್ಳಿಯಲ್ಲಿ ಒಂದು ಕುಟುಂಬವು ಗಂಗಾ ಸ್ನಾನಕ್ಕೆ ತೆರಳಿತು. ಇಲ್ಲಿಯವರೆಗೂ ಇಬ್ಬರ ದೇಹವನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿದುಬಂದಿದೆ. ಉಳಿದ ನಾಲ್ಕು ದೇಹಗಳ ಹುಡುಕಾಟ ಸಾಗಿದೆ ಎಂದು ಹೇಳಲಾಗುತ್ತಿದೆ.