ನವದೆಹಲಿ: ದೇಶೀಯ ಆರ್ಥಿಕತೆಯಲ್ಲಿ ಮಂದಗತಿಯ ಭೀತಿಯಿಂದ ಮಾರುಕಟ್ಟೆ ಸತತ ಮೂರನೇ ದಿನ ಕುಸಿದಿದ್ದು, ಗುರುವಾರದಂದು ಮಾರುಕಟ್ಟೆ ರೆಡ್ ಅಲರ್ಟ್ ನಲ್ಲಿ ಕೊನೆಗೊಂಡಿದೆ.
ಬಿಎಸ್ಇ ಸೆನ್ಸೆಕ್ಸ್ 587.44 ಪಾಯಿಂಟ್ ಅಥವಾ 1.59 ರಷ್ಟು ಕುಸಿದು 36,472.93 ಕ್ಕೆ ತಲುಪಿ ಮಾರ್ಚ್ 5 ರಿಂದ ಕನಿಷ್ಠ ಮಟ್ಟಕ್ಕೆ ಕುಸಿದಿದೆ ಎನ್ನಲಾಗಿದೆ. ಇನ್ನೊಂದೆಡೆಗೆ ಎನ್ಎಸ್ಇ ನಿಫ್ಟಿ 177.35 ಪಾಯಿಂಟ್ ಅಥವಾ 1.62 ಶೇಕಡಾ 10,741.35 ಕ್ಕೆ ತಲುಪುವ ಮೂಲಕ ಫೆಬ್ರುವರಿ 20 ರಿಂದ ಅತಿ ಕನಿಷ್ಠ ಪ್ರಮಾಣಕ್ಕೆ ಇಳಿದಿದೆ.ಸಿಜಿ ಪವರ್ನಲ್ಲಿ ವರದಿಯಾದ ಕಾರ್ಪೊರೇಟ್ ಆಡಳಿತದ ವಿಷಯಗಳ ಬಗ್ಗೆ ಹೂಡಿಕೆದಾರರು ಚಿಂತಿತರಾಗಿದ್ದರಿಂದ ಯೆಸ್ ಬ್ಯಾಂಕ್ 13.91 ರಷ್ಟು ನಷ್ಟ ಅನುಭವಿಸಿದೆ.
ವೇದಾಂತ, ಬಜಾಜ್ ಫೈನಾನ್ಸ್, ಒಎನ್ಜಿಸಿ, ಎಸ್ಬಿಐ, ಹೆರೊಮೊಟೊ ಕಾರ್ಪ್, ಐಸಿಐಸಿಐ ಬ್ಯಾಂಕ್, ಟಾಟಾ ಸ್ಟೀಲ್, ಎನ್ಟಿಪಿಸಿ, ಎಚ್ಡಿಎಫ್ಸಿ ಮತ್ತು ಎಚ್ಡಿಎಫ್ಸಿ ಬ್ಯಾಂಕ್ ಶೇ 7.76 ರಷ್ಟು ಕುಸಿದಿದೆ. ಇನ್ನೊಂದೆಡೆಗೆ ಟೆಕ್ ಮಹೀಂದ್ರಾ, ಟಿಸಿಎಸ್, ಎಚ್ಯುಎಲ್ ಮತ್ತು ಎಚ್ಸಿಎಲ್ ಟೆಕ್ ಷೇರುಗಳು ಹಸಿರು ಸಿಗ್ನಲ್ ನಲ್ಲಿ ಮುಚ್ಚಿದ್ದು, ಶೇ 1.57 ರಷ್ಟು ಏರಿಕೆಯಾಗಿದೆ.
ವಿದೇಶಿ ಬಂಡವಾಳ ಹೂಡಿಕೆದಾರರು ಬುಧವಾರ 770.81 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಮತ್ತು ದೇಶೀಯ ಸಾಂಸ್ಥಿಕ ಹೂಡಿಕೆದಾರರು ಸಹ 353.97 ಕೋಟಿ ರೂ.ಗಳ ಷೇರುಗಳನ್ನು ಖರೀದಿಸಿದ್ದಾರೆ ಎಂದು ತಾತ್ಕಾಲಿಕ ಅಂಕಿ ಅಂಶಗಳು ತಿಳಿಸಿವೆ.ಹಿಂದಿನ ಹಿಂದಿನ ಅಧಿವೇಶನದಲ್ಲಿ ಬಿಎಸ್ಇ ಸೆನ್ಸೆಕ್ಸ್ 267.64 ಪಾಯಿಂಟ್ ಅಥವಾ 0.72 ರಷ್ಟು ಕುಸಿದು 37,060.37 ಕ್ಕೆ ತಲುಪಿದ್ದರೆ, ಎನ್ಎಸ್ಇ ನಿಫ್ಟಿ 98.30 ಪಾಯಿಂಟ್ ಅಥವಾ 0.89 ಶೇಕಡಾ ಇಳಿದು 10,918.70 ಕ್ಕೆ ತಲುಪಿದೆ.