Premature White Hair Problem : ಈ ವಿಟಮಿನ್ ಕೊರತೆಯಿಂದಾಗಿ ಕಿರಿ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುತ್ತದೆ

Premature White Hair Problem Solution: ಶಿಸ್ತುಬದ್ಧ ಜೀವನಶೈಲಿ ಮತ್ತು ಆರೋಗ್ಯಕರ ಆಹಾರ ಸೇವನೆ ಮೂಲಕ ಈ ಸಮಸ್ಯೆಯನ್ನು ನಿವಾರಿಸಬಹುದು. ಇನ್ನು ದೇಹದಲ್ಲಿ ನಿರ್ದಿಷ್ಟ ವಿಟಮಿನ್ ಕೊರತೆ ಎದುರಾದರೆ ಕೂಡಾ ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲು  ಹುಟ್ಟಿಕೊಳ್ಳುತ್ತದೆ.

Written by - Ranjitha R K | Last Updated : Jan 12, 2024, 05:00 PM IST
  • ಬಿಳಿ ಕೂದಲು ಮೂಡುವುದಕ್ಕೆ ನಾನಾ ಕಾರಣಗಳು
  • ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯೂ ಕಾರಣ
  • ದೇಹದಲ್ಲಿ ವಿಟಮಿನ್ ಕೊರತೆಯಾದರೆ ಕೂಡಾ ಈ ಸಮಸ್ಯೆ ಎದುರಾಗುತ್ತದೆ
Premature White Hair Problem : ಈ  ವಿಟಮಿನ್ ಕೊರತೆಯಿಂದಾಗಿ ಕಿರಿ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುತ್ತದೆ  title=

Premature White Hair Problem Solution : ಇತ್ತೀಚಿನ ದಿನಗಳಲ್ಲಿ 25 ರಿಂದ 30 ವರ್ಷ ವಯಸ್ಸಿನ ಯುವಕರು ಬಿಳಿ ಕೂದಲಿನ ಸಮಸ್ಯೆ ಎದುರಿಸುತ್ತಿದ್ದಾರೆ. ಇದಕ್ಕೆ ಕಾರಣ ಬೇರೆ ಬೇರೆಯದ್ದೇ ಆಗಿರಬಹುದು. ಕೆಲವರು ಅನುವಂಶಿಕ ಕಾರಣದಿಂದಾಗಿ ಈ ಸಮಸ್ಯೆ ಎದುರಿಸುತ್ತಾರೆ. ಆದರೆ  ಬಹುತೇಕರು  ತಾವು ಅನುಸರಿಸುವ ಜೀವನಶೈಲಿಯಿಂದಲೇ ಈ ಸಮಸ್ಯೆಗೆ ಒಳಗಾಗುತ್ತಾರೆ. ಇದಲ್ಲದೆ ಇತ್ತೀಚಿನ ದಿನಗಳಲ್ಲಿ ಎಗ್ಗಿಲ್ಲದೆ ಸೇವಿಸುವ ಅನಾರೋಗ್ಯಕರ ಆಹಾರ ಪದ್ಧತಿ ಕೂಡಾ ಕೂದಲು ಬಿಳಿಯಾಗುವ ಸಮಸ್ಯೆಗೆ ಕಾರಣವಾಗುತ್ತದೆ. ಶಿಸ್ತುಬದ್ಧ ಜೀವನಶೈಲಿ ಮತ್ತು ಆರೋಗ್ಯಕರ ಆಹಾರ ಸೇವನೆ ಮೂಲಕ ಈ ಸಮಸ್ಯೆಯನ್ನು ನಿವಾರಿಸಬಹುದು. ಇನ್ನು ದೇಹದಲ್ಲಿ ನಿರ್ದಿಷ್ಟ ವಿಟಮಿನ್ ಕೊರತೆ ಎದುರಾದರೆ ಕೂಡಾ ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲು  ಹುಟ್ಟಿಕೊಳ್ಳುತ್ತದೆ. 

ವಿಟಮಿನ್ ಬಿ ಕೊರತೆ  :
ದೇಹದಲ್ಲಿ ವಿಟಮಿನ್ ಬಿ  ಪೋಷಕಾಂಶದ ಕೊರತೆ ಎದುರಾದರೆ ಅದರ ನೇರ ಪರಿಣಾಮವು ನಮ್ಮ ಕೂದಲಿನಲ್ಲಿ ಕಾಣಿಸಿಕೊಳ್ಳುತ್ತದೆ. ವಿಟಮಿನ್ ಬಿ ಇರುವ ಆಹಾರ ಸೇವಿಸದಿದ್ದರೆ ಚಿಕ್ಕ ವಯಸ್ಸಿನಲ್ಲಿ ಕೂದಲು ಬೆಳ್ಳಗಾಗುವುದು ಮಾತ್ರವಲ್ಲ, ಕೂದಲು ಉದುರುವ ಸಮಸ್ಯೆಯೂ ಎದುರಾಗುತ್ತದೆ. ವಿಟಮಿನ್ ಬಿ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಪೋಷಕಾಂಶವಾಗಿದೆ. ಇದು ಸೆಲ್ ಮೆಟೋಬಾಲಿಸಂ  ಮತ್ತು ಕೆಂಪು ರಕ್ತ ಕಣಗಳ ಸಂಶ್ಲೇಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಇದನ್ನೂ ಓದಿ :Jaggery tea benefits : ಬೆಲ್ಲದ ಚಹಾ ಕುಡಿಯುವುದರಿಂದ ಈ ರೋಗಗಳಿಂದ ಸಿಗುವುದು ಶಾಶ್ವತ ಮುಕ್ತಿ

ದೈನಂದಿನ ಆಹಾರದಲ್ಲಿ ವಿಟಮಿನ್ ಬಿ ಸಮೃದ್ಧವಾಗಿರುವ ಆಹಾರವನ್ನು ಸೇರಿಸಿ :
ನಿಮ್ಮ ಕೂದಲು ಚಿಕ್ಕ ವಯಸ್ಸಿನಲ್ಲಿಯೇ ಬೆಳ್ಳಗಾಗುತ್ತಿದ್ದರೆ, ನಿಮ್ಮ ದೈನಂದಿನ ಆಹಾರದಲ್ಲಿ ವಿಟಮಿನ್ ಬಿ, ವಿಟಮಿನ್ ಬಿ 6 ಮತ್ತು ವಿಟಮಿನ್ ಬಿ 12  ಸೇರಿಸಿ. ಅದರಲ್ಲಿಯೂ ಡೈರಿ ಉತ್ಪನ್ನಗಳನ್ನು ಹೆಚ್ಚು ಪ್ರಾಶಸ್ತ್ಯ ನೀಡಿ. ಇದು  ಈ ಪೋಷಕಾಂಶಗಳ ಕೊರತೆಯನ್ನು ನೀಗಿಸಬಹುದು.

ವಿಟಮಿನ್ ಬಿ ಪಡೆಯಲು ಏನು ತಿನ್ನಬೇಕು? :
ಮೊಟ್ಟೆಗಳು
ಸೋಯಾಬೀನ್ಸ್
ಮೊಸರು
ಓಟ್ಸ್
ಹಾಲು
ಚೀಸ್
ಬ್ರೊಕೊಲಿ
ಲೋಬ್ಸ್ಟರ್
ಸಾಲ್ಮನ್ ಚಿಕನ್ ಚಿಕನ್
ಹಸಿರು
ಎಲೆಗಳ ತರಕಾರಿಗಳು
ಧಾನ್ಯಗಳು

ಇದನ್ನೂ ಓದಿ : Best Foods For Weight Loss: ಸುಲಭವಾಗಿ ತೂಕ ಕಳೆದುಕೊಳ್ಳಲು ಈ ಆಹಾರ ಸೇವಿಸಿರಿ

ಬಿ ಜೀವಸತ್ವಗಳ ವಿಧಗಳು :
ವಿಟಮಿನ್ ಬಿ 1 - ಥಯಾಮಿನ್
ವಿಟಮಿನ್ ಬಿ 2 - ರಿಬೋಫ್ಲಾವಿನ್
ವಿಟಮಿನ್ ಬಿ 3 - ನಿಯಾಸಿನ್
ವಿಟಮಿನ್ ಬಿ 5 - ಪಾಂಟೊಥೆನಿಕ್ ಆಮ್ಲ
ವಿಟಮಿನ್ ಬಿ 7 - ಬಯೋಟಿನ್
ವಿಟಮಿನ್ ಬಿ 9 - ಫೋಲೇಟ್
ವಿಟಮಿನ್ ಬಿ 12 - ಕೋಬಾಲಾಮಿನ್

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

  

Trending News