Atal Setu : ಮುಂಬೈನಲ್ಲಿ ಮುಂಬೈ ಟ್ರಾನ್ಸ್-ಹಾರ್ಬರ್ ಲಿಂಕ್ (MTHL) ಅನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.ಅದಕ್ಕೆ ಅಟಲ್ ಬಿಹಾರಿ ವಾಜಪೇಯಿ ಸೇವಾರಿ-ನವ ಶೇವಾ ಅಟಲ್ ಸೇತು ಎಂದು ಹೆಸರಿಡಲಾಗಿದೆ. ಇದು ದೇಶದ ಅತಿ ಉದ್ದದ ಸಮುದ್ರ ಸೇತುವೆಯಾಗಿದೆ. ಇದರ ಉದ್ದ 21.8 ಕಿಲೋಮೀಟರ್. ಈ ಸೇತುವೆಯು ಮುಂಬೈ ನಗರವನ್ನು ನವಿ ಮುಂಬೈನ ನವಾ ಶೇವಾ ಪ್ರದೇಶಕ್ಕೆ ಸಂಪರ್ಕಿಸುತ್ತದೆ. ಪ್ರಧಾನಿ ಮೋದಿ ಡಿಸೆಂಬರ್ 2016 ರಲ್ಲಿ ಸೇತುವೆಯ ಶಂಕುಸ್ಥಾಪನೆ ಮಾಡಿದ್ದರು. ಇದರ ನಿರ್ಮಾಣಕ್ಕೆ 17,840 ಕೋಟಿ ರೂ.ಗೂ ಅಧಿಕ ಮೊತ್ತವನ್ನು ವ್ಯಯಿಸಲಾಗಿದೆ. ಈ ಸೇತುವೆಯಲ್ಲಿ ಆರು ಪಥಗಳಲ್ಲಿ ಸಂಚಾರ ನಡೆಸಬಹುದಾಗಿದೆ.
16.5 ಕಿಮೀ ಉದ್ದದ ಮೇಲ್ಸೇತುವೆ :
ಸೇತುವೆಯ ಉದ್ದವು ಸಮುದ್ರದಲ್ಲಿ ಸುಮಾರು 16.5 ಕಿಮೀ ಮತ್ತು ನೆಲದ ಮೇಲೆ ಸುಮಾರು 5.5 ಕಿಮೀ.ಸಾಗುತ್ತದೆ. ಸೇತುವೆಯ ಉದ್ಘಾಟನೆಯೊಂದಿಗೆ ಮುಂಬೈನಲ್ಲಿ ಸಂಚಾರ ಗಮನಾರ್ಹವಾಗಿ ಸುಧಾರಿಸುವ ನಿರೀಕ್ಷೆಯಿದೆ. ಇದರ ಲೋಕಾರ್ಪಣೆಯೊಂದಿಗೆ ದಕ್ಷಿಣ ಮುಂಬೈ ಮತ್ತು ನವಿ ಮುಂಬೈ ನಡುವಿನ ಪ್ರಯಾಣವು 2 ಗಂಟೆಯಿಂದ 20 ನಿಮಿಷಗಳಿಗೆ ಕಡಿತವಾಗುತ್ತದೆ. ಮುಂಬೈನ ಆರ್ಥಿಕ ಅಭಿವೃದ್ಧಿಯಲ್ಲಿಯೂ ಈ ಸೇತುವೆ ಪ್ರಮುಖ ಪಾತ್ರ ವಹಿಸಲಿದೆ. ಇದರೊಂದಿಗೆ ರಾಯಗಢದ ಕೈಗಾರಿಕಾ ವಲಯವನ್ನು ಸುಲಭವಾಗಿ ತಲುಪಬಹುದು.
ಇದನ್ನೂ ಓದಿ : ಶ್ರೀರಾಮನನ್ನು ನೋಡಲು ಅಯೋಧ್ಯೆಗೆ ಹೋಗ್ತೀರಾ..? ಈ ನಿಮಯಗಳನ್ನು ನೀವು ಪಾಲಿಸಲೇಬೇಕು
ಗಂಟೆಗೆ 100 ಕಿ.ಮೀ ವೇಗದಲ್ಲಿ ಚಲಿಸಬಹುದು :
ಸೇತುವೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಆಧಾರದ ಮೇಲೆ ನಿರ್ಮಿಸಲಾಗಿದೆ. ಸೇತುವೆಯನ್ನು ಮುಂಬೈ ಟ್ರಾನ್ಸ್-ಹಾರ್ಬರ್ ಲಿಂಕ್ ಕಾರ್ಪೊರೇಷನ್ (MTHL) ನಿರ್ವಹಿಸುತ್ತದೆ. ಈ ಸೇತುವೆಯ ಉದ್ಘಾಟನೆಯೊಂದಿಗೆ ಮುಂಬೈನಿಂದ ಪುಣೆ, ಗೋವಾ ಮತ್ತು ದಕ್ಷಿಣಕ್ಕೆ ಪ್ರಯಾಣವೂ ಸುಲಭವಾಗುತ್ತದೆ. ಇದರ ಮೇಲೆ, ಕಾರುಗಳು ಗಂಟೆಗೆ ಗರಿಷ್ಠ 100 ಕಿಮೀ ವೇಗದಲ್ಲಿ ಚಲಿಸುವುದು ಸಾಧ್ಯವಾಗುತ್ತದೆ.
ಟೋಲ್ ದರ:
MTHL ಮೂಲಕ ಪ್ರಯಾಣಿಸಿದರೆ, ಒನ್ ವೆ ಪ್ರಯಾಣಕ್ಕಾಗಿ 250 ರೂಪಾಯಿ ಟೋಲ್ ಪಾವತಿಸಬೇಕಾಗುತ್ತದೆ. ರೌಂಡ್ ಟ್ರಿಪ್ ಗೆ 375 ರೂ.ನೀಡಬೇಕಾಗುತ್ತದೆ. ಒಂದು ವರ್ಷದ ನಂತರ ಟೋಲ್ ಮರುಪರಿಶೀಲಿಸಲಾಗುವುದು ಎಂದು ಸರ್ಕಾರ ಹೇಳಿದೆ. ಪ್ರಸ್ತುತ, ಬಾಂದ್ರಾ-ವರ್ಲಿ ಸೀ ಲಿಂಕ್ನಲ್ಲಿ 85 ರೂ. ಮತ್ತು ರೌಂಡ್ ಟ್ರಿಪ್ಗೆ 127 ರೂ. ಟೋಲ್ ಪಾವತಿಸಬೇಕಾಗುತ್ತದೆ. MTHL ನಲ್ಲಿ ಬೈಕ್, ಆಟೋ ಮತ್ತು ಟ್ರ್ಯಾಕ್ಟರ್ಗಳ ಸಂಚಾರ ನಿಷೇಧಿಸಲಾಗಿದೆ. ಈ ಸೇತುವೆ ನಿರ್ಮಾಣಕ್ಕೆ 177,903 ಮೆಟ್ರಿಕ್ ಟನ್ ಉಕ್ಕು ಮತ್ತು 504,253 ಮೆಟ್ರಿಕ್ ಟನ್ ಸಿಮೆಂಟ್ ಬಳಸಲಾಗಿದೆ.
ಇದನ್ನೂ ಓದಿ : Atal Setu Inauguration: ಇಂದು ಉದ್ಘಾಟನೆಗೊಳ್ಳಲಿದೆ ಅತಿ ಉದ್ದದ ಸಮುದ್ರ ಸೇತುವೆ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.