LGಯ 5 ಜಿ ಸ್ಮಾರ್ಟ್‌ಫೋನ್‌ನ ಫಸ್ಟ್ ಲುಕ್ ರಿಲೀಸ್, ಇದರಲ್ಲಿದೆ ಡಬಲ್ ಸ್ಕ್ರೀನ್ ವೈಶಿಷ್ಟ್ಯ!

'ಡ್ಯುಯಲ್ ದಿ ಬೆಟರ್' ಎಂಬ ಶೀರ್ಷಿಕೆಯ 15 ಸೆಕೆಂಡುಗಳ ವೀಡಿಯೊವನ್ನು ಕಂಪನಿಯು ಬಿಡುಗಡೆ ಮಾಡಿದೆ ಎಂದು ಸುದ್ದಿ ಸಂಸ್ಥೆ ಯೋನ್ಹಾಪ್ ನ್ಯೂಸ್ ವರದಿ ತಿಳಿಸಿದೆ.

Last Updated : Aug 14, 2019, 02:02 PM IST
LGಯ 5 ಜಿ ಸ್ಮಾರ್ಟ್‌ಫೋನ್‌ನ ಫಸ್ಟ್ ಲುಕ್ ರಿಲೀಸ್, ಇದರಲ್ಲಿದೆ ಡಬಲ್ ಸ್ಕ್ರೀನ್ ವೈಶಿಷ್ಟ್ಯ! title=
Photo Courtesy: Twitter

ಸಿಯೋಲ್: ಎಲ್ಜಿ ಎಲೆಕ್ಟ್ರಾನಿಕ್ಸ್ ತನ್ನ ಎರಡನೇ 5 ಜಿ ಫೋನ್‌ನ ಫಸ್ಟ್ ಲುಕ್ ರಿಲೀಸ್ ಮಾಡಿದೆ. ಇದು ಎರಡು ಡಿಟ್ಯಾಚೇಬಲ್ ಪರದೆ(ಸ್ಕ್ರೀನ್)ಗಳನ್ನು ಹೊಂದಿದೆ. ಈ ಫೋನ್ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಥಿನ್ಕ್ಯು ವಿ 50 ಅನ್ನು ಬಿಡುಗಡೆ ಮಾಡಿದ ನಾಲ್ಕು ತಿಂಗಳ ನಂತರ ಸೆಪ್ಟೆಂಬರ್ 6 ರಂದು ಬರ್ಲಿನ್‌ನ ಐಎಫ್‌ಎನಲ್ಲಿ ಈ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು LG ಯೋಜಿಸಿದೆ. ಐಎಫ್‌ಎ 2019 ಯುರೋಪಿನ ಅತಿದೊಡ್ಡ ಟೆಕ್ ಶೋ ಆಗಿದೆ.

'ಡ್ಯುಯಲ್ ದಿ ಬೆಟರ್' ಎಂಬ ಶೀರ್ಷಿಕೆಯ 15 ಸೆಕೆಂಡುಗಳ ವೀಡಿಯೊವನ್ನು ಕಂಪನಿಯು ಬಿಡುಗಡೆ ಮಾಡಿದೆ ಎಂದು ಸುದ್ದಿ ಸಂಸ್ಥೆ ಯೋನ್ಹಾಪ್ ನ್ಯೂಸ್ ವರದಿ ತಿಳಿಸಿದೆ. ಅದರಲ್ಲಿ ಎರಡು ಪರದೆಯ ಸ್ಮಾರ್ಟ್‌ಫೋನ್ ತೋರಿಸಲಾಗಿದೆ. ಹೊಸ ಫೋನ್‌ನಲ್ಲಿ 'ಫ್ರೀ ಸ್ಟಾಪ್ ಹಿಂಜ್' ತಂತ್ರಜ್ಞಾನವನ್ನು ಬಳಸಿದೆ ಎಂದು ಕೊರಿಯಾದ ಸ್ಮಾರ್ಟ್‌ಫೋನ್‌ ತಯಾರಕರು ಹೇಳಿದ್ದಾರೆ. ಇದು ಎರಡನೇ ಪರದೆಯನ್ನು ಯಾವುದೇ ಸ್ಥಾನದಲ್ಲಿ ಇರಿಸಲು ಅಥವಾ ಲ್ಯಾಪ್ಟಾಪ್ನಂತೆ ಮಡಚಲು ಅನುವು ಮಾಡಿಕೊಡುತ್ತದೆ.

ಹೊಸ 5 ಜಿ ಫೋನ್‌ಗೆ ವಿ 60 ಎಂದು ಹೆಸರಿಡುವ ಸಾಧ್ಯತೆ ಇದ್ದು, ಇದು ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ ನೋಟ್‌ಗೆ ತೀವ್ರ ಸ್ಪರ್ಧೆಯನ್ನು ನೀಡಲಿದೆ ಎಂದು ತಂತ್ರಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಸ್ಯಾಮ್‌ಸಂಗ್‌ನ Galaxy Note  10 ಆಗಸ್ಟ್‌ನಲ್ಲಿ ಬಿಡುಗಡೆಯಾಗಿದೆ. Galaxy Fold ಅನ್ನು ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕಂಪನಿಯ ಮೂಲಗಳು ತಿಳಿಸಿವೆ.

Trending News