Makar Sankranti 2024: ಪ್ರತಿ ವರ್ಷ ಗ್ರಹಗಗಳ ರಾಜ ಸೂರ್ಯ ದೇವನು ಜನವರಿ 14/15ರಂದು ಧನು ರಾಶಿಯನ್ನು ತೊರೆದು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಹಿಂದೂ ಧರ್ಮದಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ವೈದಿಕ ಕ್ಯಾಲೆಂಡರ್ ಪ್ರಕಾರ, ಮಕರ ಸಂಕ್ರಾಂತಿ ಹಬ್ಬವನ್ನು 2024 ರಲ್ಲಿ ಜನವರಿ 15 ರಂದು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಸೂರ್ಯ ದೇವರನ್ನು ಪೂಜಿಸುವುದರಿಂದ ವಿಶೇಷ ಪ್ರಯೋಜನಗಳನ್ನು ಪಡೆಯಬಹುದು ಎದೂ ಹೇಳಲಾಗುತ್ತದೆ. ಈ ದಿನ ನಿಮ್ಮ ರಾಶಿಗನುಸಾರವಾಗಿ ಕೆಲವು ಮಂತ್ರಗಳನ್ನು ಪಠಿಸುವುದರಿಂದ ವ್ಯಕ್ತಿಯು ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು ಮತ್ತು ದೋಷಗಳಿಂದಲೂ ಪರಿಹಾರ ಪಡೆಯಬಹುದು ಎಂದು ನಂಬಲಾಗಿದೆ.
ಮಕರ ಸಂಕ್ರಾಂತಿ 2024 ಶುಭ ಮುಹೂರ್ತ:
ಈ ವರ್ಷ ಮಕರ ಸಂಕ್ರಾಂತಿ ಹಬ್ಬವನ್ನು ಸೋಮವಾರ, ಜನವರಿ 15, 2024 ರಂದು ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿ ಹಬ್ಬದ ದಿನ ಶುಭ ಮುಹೂರ್ತವು ಬೆಳಿಗ್ಗೆ 07:15 ರಿಂದ ಸಂಜೆ 05:46 ರವರೆಗೆ ಇರುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಕರ ಸಂಕ್ರಾಂತಿ ಹಬ್ಬದಂದು ರಾಶಿಚಕ್ರಕ್ಕೆ ಅನುಗುಣವಾಗಿ ಸೂರ್ಯ ದೇವರ ಮಂತ್ರಗಳನ್ನು ಪಠಿಸುವುದರಿಂದ ವ್ಯಕ್ತಿ ಜೀವನದಲ್ಲಿ ಅನಾರೋಗ್ಯ ಸಮಸ್ಯೆಗಳಿಂದ ಮುಕ್ತಿ ಹೊಂದುತ್ತಾನೆ. ದೋಷಗಳಿಂದ ಪರಿಹಾರ ಪಡೆಯುತ್ತಾನೆ. ಮಾತ್ರವಲ್ಲ, ಅವರ ಜೀವನವು ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರಲಿದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- Guru Gochar 2024: ಹೊಸ ವರ್ಷದಲ್ಲಿ ಗುರು ಸಂಚಾರ ಪ್ರಭಾವ, ಮೂರು ರಾಶಿಯವರಿಗೆ ಸವಾಲಿನ ಸಮಯ
ರೋಗ, ದೋಷ ಪರಿಹಾರಕ್ಕಾಗಿ ಮಕರ ಸಂಕ್ರಾಂತಿಯಲ್ಲಿ ನಿಮ್ಮ ರಾಶಿಗೆ ಅನುಗುಣವಾಗಿ ಈ ಪರಿಣಾಮಕಾರಿ ಮಂತ್ರಗಳನ್ನು ಪಠಿಸಿ:
ಮೇಷ ರಾಶಿ:
ಮಕರ ಸಂಕ್ರಾಂತಿಯ ದಿನ ಮೇಷ ರಾಶಿಯ ಜನರು 'ಓಂ ಅಚಿಂತಾಯ ನಮಃ' ಎಂಬ ಮಂತ್ರವನ್ನು ಪಠಿಸಬೇಕು.
ವೃಷಭ ರಾಶಿ:
ವೃಷಭ ರಾಶಿಯವರು ಸಂಕ್ರಾಂತಿಯ ದಿನದಂದು 'ಓಂ ಅರುಣಾಯ ನಮಃ' ಎಂಬ ಮಂತ್ರವನ್ನು ಪಠಿಸುವುದರಿಂದ ಶುಭ.
ಮಿಥುನ ರಾಶಿ:
ಮಿಥುನ ರಾಶಿಯ ಜನರು ಮಕರ ಸಂಕ್ರಾಂತಿಯ ದಿನದಂದು 'ಓಂ ಆದಿ-ಭೂತಾಯ ನಮಃ' ಎಂಬ ಮಂತ್ರವನ್ನು ಪಠಿಸಬೇಕು.
ಕರ್ಕಾಟಕ ರಾಶಿ:
ಕರ್ಕಾಟಕ ರಾಶಿಯವರು 'ಓಂ ವಸುಪ್ರದಾಯ ನಮಃ' ಎಂಬ ಮಂತ್ರವನ್ನು ಪಠಿಸುವುದರಿಂದ ಶುಭ ಫಲಗಳನ್ನು ಪಡೆಯುತ್ತಾರೆ.
ಸಿಂಹ ರಾಶಿ:
ಸಿಂಹ ರಾಶಿಯ ಜನರು 'ಓಂ ಭನ್ವೇ ನಮಃ' ಎಂಬ ಮಂತ್ರವನ್ನು ಪಠಿಸುವುದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತಾರೆ ಎಂದು ಹೇಳಲಾಗುತ್ತದೆ.
ಕನ್ಯಾ ರಾಶಿ:
ಕನ್ಯಾ ರಾಶಿಯ ಜನರು ಮಕರ ಸಂಕ್ರಾಂತಿ ಹಬ್ಬದ ದಿಂದ 'ಓಂ ಶಾಂತಾಯ ನಮಃ' ಮಂತ್ರವನ್ನು ಪಠಿಸುವುದರಿಂದ ಲಾಭ.
ಇದನ್ನೂ ಓದಿ- ಮಕರ ಸಂಕ್ರಾಂತಿಯಂದೇ ಅದ್ಭುತ ರಾಜಯೋಗಗಳು… ಈ ರಾಶಿಗಳಿಗೆ ಹಣ, ಕೀರ್ತಿ ಜೊತೆ ಸರ್ಕಾರಿ ನೌಕರಿ ಸಿಕ್ಕೇಸಿಗುತ್ತೆ!
ತುಲಾ ರಾಶಿ:
ಮಕರ ಸಂಕ್ರಾಂತಿಯಂದು ತುಲಾ ರಾಶಿಯವರಿಗೆ 'ಓಂ ಇಂದ್ರಾಯ ನಮಃ' ಎಂಬ ಮಂತ್ರವನ್ನು ಪಠಿಸಲು ಸಲಹೆ ನೀಡುತ್ತಾರೆ.
ವೃಶ್ಚಿಕ ರಾಶಿ:
ಮಕರ ಸಂಕ್ರಾಂತಿ ಹಬ್ಬದ ದಿನ ವೃಶ್ಚಿಕ ರಾಶಿಯವರು 'ಓಂ ಆದಿತ್ಯಾಯ ನಮಃ' ಎಂಬ ಮಂತ್ರವನ್ನು ಪಠಿಸುವುದರಿಂದ ಲಾಭವಾಗುತ್ತದೆ.
ಧನು ರಾಶಿ:
ಧನು ರಾಶಿಯ ಜನರು ಸಂಕ್ರಾಂತಿಯ ದಿನದಂದು ‘ಓಂ ಶರ್ವಾಯ ನಮಃ’ ಎಂಬ ಮಂತ್ರವನ್ನು ಪಠಿಸಬೇಕು.
ಮಕರ ರಾಶಿ:
ಮಕರ ರಾಶಿಯ ಜನರು ಮಕರ ಸಂಕ್ರಾಂತಿ ಹಬ್ಬದಂದು 'ಓಂ ಸಹಸ್ತ್ರ ಕಿರಣಾಯ ನಮಃ' ಎಂಬ ಮಂತ್ರವನ್ನು ಪಠಿಸಲು ಸಲಹೆ ನೀಡಲಾಗುತ್ತದೆ.
ಕುಂಭ ರಾಶಿ:
ಕುಂಭ ರಾಶಿಯವರು ಸಂಕ್ರಾಂತಿ ಹಬ್ಬದ ದಿನದಂದು 'ಓಂ ಬ್ರಾಹ್ಮಣೇ ದಿವಾಕರ ನಮಃ' ಎಂಬ ಮಂತ್ರವನ್ನು ಪಠಿಸುವುದರಿಂದ ಒಳ್ಳೆಯದಾಗುತ್ತದೆ.
ಮೀನ ರಾಶಿ:
ಮೀನ ರಾಶಿಯ ಜನರಿಗೆ ಮಕರ ಸಂಕ್ರಾಂತಿಯ ದಿನದಂದು 'ಓಂ ಜಯಿನೇ ನಮಃ' ಮಂತ್ರವನ್ನು ಪಠಿಸಲು ಸಲಹೆ ನೀಡಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.