Chest Pain: ಪದೇ ಪದೇ ಕಾಣಿಸಿಕೊಳ್ಳುವ ಎದೆನೋವು ಈ ರೋಗಗಳ ಅಪಾಯದ ಗಂಟೆಯೂ ಆಗಿರಬಹುದು!

Chest Pain: ಈ ಒತ್ತಡ ಭರಿತ ಜೀವನಶೈಲಿಯಲ್ಲಿ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ನಮ್ಮಲ್ಲಿ ಕೆಲವರಿಗೆ ಆಗಾಗ್ಗೆ ಎದೆನೋವು ಕಾಣಿಸಿಕೊಳ್ಳುತ್ತದೆ. ಆದರೆ, ಇದು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಎಂದು ಸುಮ್ಮನಾಗುತ್ತಾರೆ. ಅಂತಹವರಲ್ಲಿ ನೀವೂ ಒಬ್ಬರಾಗಿದ್ದರೆ ಇಂತಹ ತಪ್ಪನ್ನು ಎಂದಿಗೂ ಮಾಡಬೇಡಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಪದೇ ಪದೇ ಎದೆನೋವು ಕಾಣಿಸಿಕೊಳ್ಳಲು ಗ್ಯಾಸ್ಟ್ರಿಕ್ ಸೇರಿದಂತೆ ಹಲವು ಕಾರಣಗಳಿರಬಹುದು. ಆದರೆ, ಇದನ್ನು ನಿರ್ಲಕ್ಷಿಸುವುದು ಒಳ್ಳೆಯದಲ್ಲ. ವಾಸ್ತವವಾಗಿ, ಆಗಾಗ್ಗೆ ನಿಮ್ಮನ್ನು ಕಾಡುವ ಎದೆನೋವು ಅಪಾಯಕಾರಿ ಕಾಯಿಲೆಗಳ ಎಚ್ಚರಿಕೆಯ ಗಂಟೆಯೂ ಆಗಿರಬಹುದು. ತಜ್ಞರ ಪ್ರಕಾರ, ಪದೇ ಪದೇ ಕಾಣಿಸಿಕೊಳ್ಳುವ ಎದೆನೋವು ಈ 5 ಕಾಯಿಲೆಗಳ ಪಾಯದ ಸಂಕೇತವೂ ಆಗಿರಬಹುದು ಎನ್ನಲಾಗುತ್ತದೆ. ಅವುಗಳೆಂದರೆ... 

2 /6

ಹೃದಯಾಘಾತ:  ನಿಮಗೆ ಪದೇ ಪದೇ ಕಾಣಿಸಿಕೊಳ್ಳುವ ಎದೆನೋವು ಹೃದಯಾಘಾತದ ಅಪಾಯವನ್ನು ಸೂಚಿಸಬಹುದು. ಹಾಗಾಗಿ, ಆಗಾಗ್ಗೆ ಎದೆನೋವು ಕಾಣಿಸಿಕೊಳ್ಳುತ್ತಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಿರಿ.

3 /6

ಅಲ್ಸರ್ ಅಪಾಯ:  ಆಗಾಗ್ಗೆ ಕಾಣಿಸಿಕೊಳ್ಳುವ ಎದೆನೋವು ಗ್ಯಾಸ್ಟ್ರಿಕ್ ನಿಂದ ಇರಬಹುದು ಎಂದು ಕೆಲವರು ಸುಮ್ಮನಾಗುತ್ತಾರೆ. ಆದರಿದು ಹೊಟ್ಟೆ ಹುಟ್ಟು ಅಥವಾ ಅಲ್ಸರ್ ಅಪಾಯದ ಸಂಕೇತವೂ ಆಗಿರಬಹುದು. 

4 /6

ಪ್ಯಾನಿಕ್ ಅಟ್ಯಾಕ್:  ಹಲವು ಸಂದರ್ಭಗಳಲ್ಲಿ ಪ್ಯಾನಿಕ್ ಅಟ್ಯಾಕ್ ಆಗುವ ಮೊದಲು ಈ ರೀತಿ ಆಗಾಗ್ಗೆ ಎದೆನೋವು ಕಾಣಿಸಿಕೊಳ್ಳುವ ಸಂಭವವಿರುತ್ತದೆ ಎಂದು ಹೇಳಲಾಗುತ್ತದೆ. 

5 /6

ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್:  ಪದೇ ಪದೇ ಕಾಡುವ ಎದೆನೋವು ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ನಂತಹ ಗಂಭೀರ ಆರೋಗ್ಯ ಸಮಸ್ಯೆಯನ್ನೂ ಉಂಟು ಮಾಡಬಹುದು ಎನ್ನಲಾಗುತ್ತದೆ. 

6 /6

ಪೆರಿಕಾರ್ಡಿಟಿಸ್:  ಆಗಾಗ್ಗೆ ಕಾಣಿಸಿಕೊಳ್ಳುವ ಎದೆನೋವು ಪೆರಿಕಾರ್ಡಿಟಿಸ್ ನ ಮುನ್ಸೂಚನೆಯೂ ಆಗಿರಬಹುದು. ಪೆರಿಕಾರ್ಡಿಟಿಸ್ ಸಂದರ್ಭದಲ್ಲಿ ಹೃದಯದ ಸುತ್ತಲೂ ಊತ ಕಾಣಿಸಿಕೊಳ್ಳುತ್ತದೆ. ಇದರಿಂದಾಗಿಯೂ ಪದೇ ಪದೇ ಎದೆನೋವು ಕಾಣಿಸಿಕೊಳ್ಳಬಹುದು ಎಂದು ಹೇಳಲಾಗುತ್ತದೆ.  ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.