Ugara Sugar Factory: ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನಲ್ಲಿರುವ ಉಗಾರ ಶುಗರ್ ಪ್ಯಾಕ್ಟರಿ, ರೈತರಿಂದ ಕಬ್ಬು ನುರಿಸಿ, ಅವರಿಗೆ ಲಾಭ ತರುವ ಕೆಲಸ ಮಾಡಬೇಕಿತ್ತು. ಆದರೆ ಈ ಪ್ಯಾಕ್ಟರಿ ಈ ಭಾಗದ ಜನರಿಗೆ ವರವಾಗದೆ, ಶಾಪವಾಗಿ ಪರಿಣಮಿಸಿದೆ. ಈ ಕುರಿತು ಒಂದು ಸ್ಪೇಷಲ್ ರಿಪೋರ್ಟ್ ಇಲ್ಲಿದೆ.
ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಮಳ್ಳಿ ಹಾಗೂ ನಾಗರಹಳ್ಳಿ ಗ್ರಾಮಗಳ ಮಧ್ಯೆ ಉಗಾರ ಶುಗರ್ ಪ್ಯಾಕ್ಟರಿಯನ್ನು ನಿರ್ಮಿಸಲಾಗಿದೆ. ಇದು ನೀರಾವರಿ ಪ್ರದೇಶವಾಗಿರುವ ಕಾರಣ ಮೊದಲು ಈ ಸಕ್ಕರೆ ಕಾರ್ಖಾನೆ ಪ್ರಾರಂಭವಾದಾಗ ಈ ಭಾಗದ ರೈತರು ಕಬ್ಬು ಬೆಳೆದು ಲಾಭಗಳಿಸುವ ಕನಸು ಕಂಡಿದ್ದರು. ಅಲ್ಲದೆ ದೂರದ ಊರಿಗೆ ಕಬ್ಬು ತೆಗೆದುಕೊಂಡು ಹೋಗುವುದು ತಪ್ಪುತ್ತದೆ ಎಂಬ ಆಶಾಭಾವನೆ ಹೊಂದಿದ್ದರು. ಆದರೆ ಈ ಕಾರ್ಖಾನೆಯಿಂದ ಈಗ ಈ ಭಾಗದ ರೈತರಿಗೆ ಲಾಭಕ್ಕಿಂತಲೂ ನಷ್ಟವೆ ಹೆಚ್ಚಾಗುತ್ತಿದೆ. ಅದಕ್ಕೆ ಪ್ರಮುಖ ಕಾರಣ, ಈ ಕಾರ್ಖಾನೆಯವರು ದಿನವಿಡಿ ಕಬ್ಬು ನುರಿಸಿದ ನಂತರ ಉಳಿಯು ಭೂದಿಯನ್ನು ಮಧ್ಯರಾತ್ರಿ ಹಾರಿಸುತ್ತಾರೆ. ಇದು ಗ್ರಾಮದ ಮನೆಗಳ ಮೇಲೆ ಹಾಗೂ ಪ್ರಮುಖವಾಗಿ, ಹೊಲದಲ್ಲಿನ ಬೆಳೆಗಳ ಮೇಲೆ ಬೀಳುತ್ತಿದೆ. ಇದರಿಂದ ಬೆಳೆ ಹಾಳಾಗತ್ತಿದೆ.
ಇದನ್ನೂ ಓದಿ- ವಿವಿಧ ಯೊಜನೆಗಳಿಗಾಗಿ ವಿಕಲಚೇತನರಿಂದ ಅರ್ಜಿ ಆಹ್ವಾನ
ಈ ಪ್ಯಾಕ್ಟರಿ ಪಕ್ಕದಲ್ಲಿಯೇ ಹತ್ತಿ ಬೆಳೆಯನ್ನು ಬೆಳೆಯಲಾಗಿದೆ. ಈ ಹತ್ತಿ ಬೆಳೆಯ ಮೇಲೆ ಈ ಕಪ್ಪು ಬೂದಿ, ಮೆತ್ತಿದಂತೆ ಕೂತಿದೆ. ಇದರಿಂದ ಹತ್ತಿ ಬೆಳೆಯ ಬೆಲೆಯಲ್ಲಿ ಕುಸಿತವಾಗುತ್ತದೆ. ಅಲ್ಲದೆ ಇಳುವರಿಯೂ ಅರ್ಧಕ್ಕೆ ಕಡಿಮೆ ಬರುತ್ತಿದೆ. ಇದರಿಂದ ರೈತರು ನಷ್ಟ ಅನುಭವಿಸುವಂತಾಗಿದೆ. ಅಲ್ಲದೆ ಈ ಬೂದಿ ಭೂಮಿಯ ಮೇಲೆ ಬೀಳುವುದರಿಂದಲೂ ಭೂಮಿಯ ಮೇಲೆಯೂ ಪರಿಣಾಮ ಬೀರುತ್ತದೆ. ಅಲ್ಲದೆ ಎಲ್ಲಾ ಬೆಳೆಗಳ ಇಳುವರಿ ಕಡಿಮೆಯಾಗುತ್ತಿದೆ. ಆದ್ದರಿಂದ ಕೂಡಲೆ ಈ ಬೂದಿ ಹಾರಿಸುವುದನ್ನು ನಿಲ್ಲಿಸಬೇಕು ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.
ಈ ಉಗಾರ ಸಕ್ಕರೆ ಕಾರ್ಖಾನೆಯವರು ಹಾರಿಸುವ ಈ ಬೂದಿಯಿಂದ ಕೇವಲ ರೈತರ ಬೆಳೆಯ ಮೇಲಷ್ಟೆ ಅಲ್ಲ. ಸುತ್ತಲಿನ ಗ್ರಾಮದ ಜನರ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತಿದೆ. ಈ ಬೂದಿ ಮನೆಯ ಮೆಲೆ, ನೀರಿನ ಮೇಲೆ, ಮನೆಯ ಅಂಗಳದಲ್ಲಿ ತೊಳೆದು ಹಾಕಿದ ಬಟ್ಟೆಯ ಮೇಲೆ, ಮಲಗಿದ ವ್ಯಕ್ತಿಯ ಚರ್ಮದ ಮೇಲೆ ಬೀಳುವುದರಿಂದ, ಜನರು ಚರ್ಮ ರೋಗಕ್ಕೆ ಒಳಗಾಗುತ್ತಿದ್ದಾರೆ. ಈ ಕುರಿತು ಸುತ್ತಲಿನ ನಾಗರಹಳ್ಳಿ, ಮಳ್ಳಿ ಸೇರಿದಂತೆ ನಾಲ್ಕಾರು ಗ್ರಾಮದ ಜನರು ಹಲವಾರು ಬಾರಿ ಈ ಕಾರ್ಖಾನೆಯವರಿಗೆ ಈ ರೀತಿ ಬೂದಿ ಹಾರಿಸಬೇಡಿ ಇದರಿಂದ ನಮಗೆ ಕಷ್ಟವಾಗುತ್ತಿದೆ. ವಾತಾವರಣ ಹಾಳಾಗುತ್ತಿದೆ ಎಂದು ಮನವಿ ಸಲ್ಲಿಸಿದ್ದಾರೆ. ಆದರೆ ಗ್ರಾಮಸ್ಥರ ಮನವಿಗೆ ಈ ಪ್ಯಾಕ್ಟರಿ ಮಾಲೀಕರು ಕ್ಯಾರೆ ಅಂದಿಲ್ಲ.
ಇದನ್ನೂ ಓದಿ- "ಕಾಂಗ್ರೆಸ್ ಗ್ಯಾರಂಟಿಯಿಂದ ಆರ್ಥಿಕ ಬಲ; ಅಂಕಿ-ಅಂಶ ಬೇಕಿದ್ದರೆ ಕೇಳಿ ಪಡೆಯಿರಿ"
ಈ ರೀತಿಯಲ್ಲಿ ಕೆಮಿಕಲ್ ಮಿಶ್ರಿತ ಬೂದಿಯನ್ನು ಹಾರಿಸುವ ಮೂಲಕ ಈ ಜನರ ಜೀವನದೊಂದಿಗೆ ಚಲ್ಲಾಡವಾಡುತ್ತಿರುವ ಕಾರ್ಖಾನೆಯವರ ಮೇಲೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯವರು ಕ್ರಮ ಕೈಗೊಳ್ಳುವ ಮೂಲಕ, ಈ ಜನರ ಸಂಕಷ್ಟಕ್ಕೆ ಕೊನೆ ಹಾಡಬೇಕಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.