ನವದೆಹಲಿ: ಲಿಂಗದ ಆಧಾರದ ಮೇಲೆ ಸಂಭಾವನೆ ನೀಡುವ ಪ್ರಕ್ರಿಯೆ ಜಾಗತಿಕವಾಗಿ ಅಸ್ತಿತ್ವದಲ್ಲಿದೆ ಎಂದು ಮಾಜಿ ವಿಶ್ವಸುಂದರಿ ಹಾಗೂ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.
Gender pay gap a 'global' problem: Priyanka Chopra
Read @ANI story |https://t.co/Ial6Z2qDhN pic.twitter.com/reCALddmVZ
— ANI Digital (@ani_digital) December 23, 2017
ಈ ಲಿಂಗಾಧಾರಿತ ವೇತನ ತಾರತಮ್ಯ ನೀತಿಯು ಅದು ಬಾಲಿವುಡ್ ಆಗಿರಬಹುದು ಹಾಲಿವುಡ್ ಆಗಿರಬಹುದು ಅಥವಾ ಇನ್ನಿತರ ಯಾವುದೇ ಕ್ಷೇತ್ರವಾಗಿರಬಹುದು ಮಹಿಳೆಯರಿಗಿಂತ ಪುರುಷರೆ ಹೆಚ್ಚು ಸಂಭಾವನೆಯನ್ನು ಪಡೆಯುತ್ತಾರೆ, ಇದು ಕೇವಲ ಸಿನಿಮಾ ವಲಯಕ್ಕೆ ಸೀಮಿತವಾಗಿಲ್ಲ, ಇದು ಜಾಗತಿಕವಾದ ಸಮಸ್ಯೆ ಎಂದು ಪ್ರಿಯಾಂಕಾ ಚೋಪ್ರಾ ತಿಳಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.
ಈ ಹಿಂದೆ ದೀಪಿಕಾ ಪಡುಕೋಣೆ ಕಂಗನಾ ರಾನೋತ್ ಮತ್ತು ಅನುಷ್ಕಾ ಶರ್ಮಾ ಚಿತ್ರರಂಗದಲ್ಲಿ ಕೇವಲ ನಟರಿಗೆ ಮಾತ್ರ ಸಿಗುತ್ತಿರುವ ಪ್ರಾಧಾನ್ಯತೆಯ ಕುರಿತಾಗಿ ಖಂಡಿಸಿದ್ದರು