Sai Pallavi Childhood News: ತೆಲುಗು, ತಮಿಳು, ಮಲಯಾಳಂ ಚಿತ್ರರಂಗದಲ್ಲಿ ಅದೆಷ್ಟೋ ನಟಿಯರು ಕೆಲಸ ಮಾಡಿದ್ದಾರೆ, ಮಾಡುತ್ತಿದ್ದಾರೆ… ಆದರೆ ಇವರೆಲ್ಲರಿಗಿಂತ ಸಾಯಿ ಪಲ್ಲವಿ ವಿಭಿನ್ನ ನಾಯಕಿಯಂತೆ ಕಾಣಿಸಿಕೊಳ್ಳುತ್ತಾರೆ. ಅದಕ್ಕೆ ಕಾರಣ, ಅವರಿಗೆ ಸಿನಿಮಾ ಮೇಲಿರುವ ಬದ್ಧತೆ. ಅಂದಹಾಗೆ ಸಾಯಿ ಪಲ್ಲವಿಯವರನ್ನು, ಯಾವುದೇ ಎಕ್ಸ್ಪೋಸಿಂಗ್ ಪಾತ್ರಗಳಿಲ್ಲದೆ ಆಫರ್’ಗಳನ್ನು ಪಡೆಯುತ್ತಿರುವ ಏಕೈಕ ನಾಯಕಿ ಎಂದೇ ಹೇಳಬಹುದು.
ಇದನ್ನೂ ಓದಿ: ಈ ಇಬ್ಬರು ಆಟಗಾರರನ್ನು ಪಡೆದ ಟೀಂ ಇಂಡಿಯಾವೇ ಜಗತ್ತಿನ ಅದೃಷ್ಟಶಾಲಿ ತಂಡ: ಇಂಗ್ಲೆಂಡ್ ಆಟಗಾರ ಹೇಳಿಕೆ
ಸಾಯಿ ಪಲ್ಲವಿ 2015 ರಲ್ಲಿ ಮಲಯಾಳಂ ಚಿತ್ರ ಪ್ರೇಮಂ ಮೂಲಕ ಸಿನಿರಂಗಕ್ಕೆ ಮೊದಲ ಬಾರಿ ಕಾಲಿಟ್ಟರು. ಅದಾದ ಬಳಿಕ 2016ರಲ್ಲಿ ಮಲಯಾಳಂ ಚಿತ್ರ ಕಲಿಯಲ್ಲಿ ಅಭಿನಯಿಸಿದರೆ, ಫಿದಾ ಚಿತ್ರದ ಮೂಲಕ ಟಾಲಿವುಡ್ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟರು. ಈ ಸಿನಿಮಾ ಮೂಲಕ ಸಾಯಿ ಪಲ್ಲವಿ ಸೂಪರ್ ಹಿಟ್ ಆಗಿದ್ದು ಎಂದರೆ ತಪ್ಪಾಗಲ್ಲ.
ಇತ್ತೀಚೆಗಷ್ಟೇ ಈ ಬ್ಯೂಟಿ ಸಂದರ್ಶನವೊಂದರಲ್ಲಿ ತನ್ನ ಬಾಲ್ಯದ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಬಾಲ್ಯದಲ್ಲಿ ಅವರ ತಂದೆ-ತಾಯಿ ಬಳಿ ಸಿಕ್ಕಾಪಟ್ಟೆ ಪ್ರಶ್ನೆಗಳನ್ನು ಕೇಳುತ್ತಿದ್ದರಂತೆ. ಅದರಲ್ಲಿ ಅವರನ್ನು ದತ್ತು ತೆಗೆದುಕೊಂಡಿದ್ದೀರಾ ಎಂದೆಲ್ಲಾ ಪ್ರಶ್ನೆ ಮಾಡುತ್ತಿದ್ದರಂತೆ. ”ನಾನು ತುಂಬಾ ಬೆಳ್ಳಗಿದ್ದೇನೆ, ಫೇರ್ ಆಗಿದ್ದೇನೆ. ನಿನಗೇಕೆ ಡಸ್ಕಿ ಸ್ಕಿನ್ ಕಲರ್ ಇದೆ. ನನ್ನನ್ನು ದತ್ತು ತೆಗೆದುಕೊಂಡಿದ್ದೀರಾ” ಎಂದು ತಂದೆ-ತಾಯಿಯನ್ನು ನೇರವಾಗೇ ಪ್ರಶ್ನಿಸುತ್ತಿದ್ದರಂತೆ. ಅದಕ್ಕೆ ಅವರ ತಂದೆ-ತಾಯಿ, “ನೀನು ನಿನ್ನ ತಂಗಿ ಇಬ್ಬರೂ ನಮ್ಮ ಮಕ್ಕಳೇ” ಎಂದು ಪ್ರತಿಕ್ರಿಯಿಸುತ್ತಿದ್ದರಂತೆ. ಈ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಬೀದಿನಾಯಿಯನ್ನು ದತ್ತು ಪಡೆದ ನಟಿ ಜ್ಯೋತಿಕಾ ಆ ನಾಯಿಗೆ ಇಟ್ಟಿದ್ದು ಈ ತಾರೆಯ ಹೆಸರನ್ನು…!
ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ