Masturbation Benefits : ಲೈಂಗಿಕತೆ ಮತ್ತು ಹಸ್ತಮೈಥುನದ ಬಗ್ಗೆ ಜನರು ಅನೇಕ ಅನುಮಾನಗಳನ್ನು ಹೊಂದಿರುತ್ತಾರೆ. ಆದರೆ ಹಸ್ತಮೈಥುನ ಆರೋಗ್ಯಕ್ಕೆ ಒಳ್ಳೆಯದಾ ಅಥವಾ ಕೆಟ್ಟದ್ದಾ..? ಎಂಬ ಪ್ರಶ್ನೆಗಳಿಗೆ ಸಧ್ಯ ಉತ್ತರ ತಿಳಿದುಕೊಳ್ಳೋಣ..
Health Benefits of Masturbation: ಲೈಂಗಿಕತೆ ಮತ್ತು ಹಸ್ತಮೈಥುನದ ಬಗ್ಗೆ ಅನೇಕ ತಪ್ಪು ಕಲ್ಪನೆಗಳಿವೆ. ಒಂದು ಕಾಲದಲ್ಲಿ ಜನರು ಈ ವಿಷಯಗಳ ಬಗ್ಗೆ ಬಹಿರಂಗವಾಗಿ ಮಾತನಾಡಲು ಇಷ್ಟಪಡುವುದಿಲ್ಲ. ಆದರೆ ಇಂದು ಅನೇಕರು ಈ ವಿಷಯಗಳ ಬಗ್ಗೆ ಬಹಿರಂಗವಾಗಿ ಮಾತನಾಡಲು ಇಷ್ಟ ಪಡುವುದಿಲ್ಲ. ಸಧ್ಯ ಹಸ್ತಮೈಥುನ ಆರೋಗ್ಯಕ್ಕೆ ಒಳ್ಳೆಯದಾ ಅಥವಾ ಕೆಟ್ಟದ್ದಾ..? ಸ್ಪಷ್ಟತೆ ಇಲ್ಲಿದೆ...
ಹಸ್ತಮೈಥುನದಿಂದ ಡೋಪಮೈನ್ ಮತ್ತು ಎಂಡಾರ್ಫಿನ್ ಎಂಬ ಹಾರ್ಮೋನುಗಳು ಬಿಡುಗಡೆಯಾಗುತ್ತವೆ. ಇದು ನಿಮ್ಮನ್ನು ಸಂತೋಷದಿಂದ ಇಡುತ್ತದೆ.
ಹಸ್ತಮೈಥುನ ಒತ್ತಡವನ್ನು ನಿವಾರಿಸುತ್ತದೆ, ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಮನಸ್ಸನ್ನೂ ಶಾಂತಗೊಳಿಸುತ್ತದೆ.
ಹಸ್ತಮೈಥುನ ಮಾಡಿಕೊಳ್ಳುವುದರಿಂದ ಸಂಗಾತಿ ಇಲ್ಲದಿದ್ದರೂ ಲೈಂಗಿಕತೆಯ ಆನಂದ ಹೊಂದಬಹುದು.
ಹಸ್ತಮೈಥುನದಿಂದ ನೀವು ತುಂಬಾ ಸುಸ್ತಾಗಿರುತ್ತೀರಿ ಇದರಿಂದಾಗಿ, ನಿಮಗೆ ಉತ್ತಮ ನಿದ್ರೆ ಬರುತ್ತದೆ.
ಲೈಂಗಿಕತೆ ಅಥವಾ ಹಸ್ತಮೈಥುನವು ನಿಮ್ಮ ರೋಗನಿರೋಧಕ ಶಕ್ತಿಯನ್ನು ದ್ವಿಗುಣಗೊಳಿಸುತ್ತದೆ.