Apple Watches Ban: ನೀವೂ ಸಹ ಆಪಲ್ ವಾಚ್ನ ಅಭಿಮಾನಿಯಾಗಿದ್ದರೆ ಈ ಸುದ್ದಿ ನಿಮ್ಮನ್ನು ನಿರಾಸೆಗೊಳಿಸಬಹುದು. ಟೆಕ್ ದೈತ್ಯ ಆಪಲ್ ಯುಎಸ್ನಲ್ಲಿ ತನ್ನ ಪ್ರಸಿದ್ದ ವಾಚ್ಗಳಾದ ಅಲ್ಟ್ರಾ 2 ಮತ್ತು ವಾಚ್ 9 ಸರಣಿಯ ಮಾರಾಟವನ್ನು ಸ್ಥಗಿತಗೊಳಿಸಿದೆ. ಮಾತ್ರವಲ್ಲ, ಶೀಘ್ರದಲ್ಲೇ ಅಮೆಜಾನ್ ಮತ್ತು ಅನೇಕ ಇ-ಕಾಮರ್ಸ್ ವೆಬ್ಸೈಟ್ಗಳಿಂದ ಈ ವಾಚ್ಗಳನ್ನು ಹಿಂಪಡೆಯಲಾಗುವುದು ಎಂದು ತಿಳಿಸಿದೆ.
ಆಪಲ್ ಪ್ರಸಿದ್ದ ವಾಚ್ಗಳ ಮಾರಾಟಕ್ಕೆ ನಿಷೇಧದ ಹಿಂದಿನ ಕಾರಣ!
ಆಪಲ್ ಕಂಪನಿಯು ವೈದ್ಯಕೀಯ ತಂತ್ರಜ್ಞಾನ ಸಂಸ್ಥೆ ಮಾಸಿಮೊ ಜೊತೆಗಿನ ಪೇಟೆಂಟ್ ವಿವಾದದಿಂದಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಆಪಲ್ ಕಂಪನಿಯ ಅಲ್ಟ್ರಾ 2 ಮತ್ತು ವಾಚ್ 9 ಸರಣಿಯ ವಾಚ್ಗಳಲ್ಲಿ ಕಾಣಿಸಿಕೊಂಡಿರುವ SpO2 ರಕ್ತದ ಆಮ್ಲಜನಕ ಸಂವೇದಕ ತಂತ್ರಜ್ಞಾನ. ಈ ತಂತ್ರಜ್ಞಾನವು ತನ್ನ ಪೇಟೆಂಟ್ ಅನ್ನು ಉಲ್ಲಂಘಿಸುತ್ತದೆ ಎಂದು ಮಾಸ್ಸಿಮೊ ಹೇಳಿಕೊಂಡಿದೆ.
ಇದನ್ನೂ ಓದಿ- ಇದ್ದಕ್ಕಿದ್ದಂತೆ ಪ್ಲೇ ಸ್ಟೋರ್ನಿಂದ 2500 ಆ್ಯಪ್ಗಳನ್ನು ತೆಗೆದುಹಾಕಿದ ಗೂಗಲ್
ಅಕ್ಟೋಬರ್ನಲ್ಲಿ ಐಟಿಸಿ ನಿರ್ಧಾರ ಹೊರಬಿದ್ದ ಎರಡು ತಿಂಗಳ ಬಳಿಕ ಆಪಲ್ ಈ ನಿರ್ಧಾರ ಕೈಗೊಂಡಿದೆ. ಗಮನಾರ್ಹವಾಗಿ, ಕಳೆದ ಅಕ್ಟೋಬರ್ನಲ್ಲಿ ತನ್ನ ನಿರ್ಧಾರ ಪ್ರಕಟಿಸಿದ್ದ ಐಟಿಸಿ ಅದನ್ನು ಪರಿಶೀಲಿಸಲು ಶ್ವೇತಭವನಕ್ಕೆ 60 ದಿನಗಳ ಎಂದರೆ ಎರಡು ತಿಂಗಳ ಕಾಲಾವಕಾಶ ನೀಡಿತ್ತು. ಈ ಅವಧಿಯಲ್ಲಿ, ಆಪಲ್ ತನ್ನ ಎರಡೂ ಮಾದರಿಗಳ (ಅಲ್ಟ್ರಾ 2 ಮತ್ತು ವಾಚ್ 9 ಸರಣಿಯ) ವಾಚ್ಗಳ ಮಾರಾಟವನ್ನು ಮುಂದುವರೆಸಿತು. ಆದಾಗ್ಯೂ, ಪರಿಶೀಲನೆ ಬಳಿಕ ಶ್ವೇತಭವನವು ಐಟಿಸಿಯ ನಿರ್ಧಾರವನ್ನು ಎತ್ತಿಹಿಡಿದಿದ್ದು ಯುಎಸ್ನಲ್ಲಿ ಈ ಮಾದರಿಗಳನ್ನು ಮಾರಾಟ ಮಾಡುವುದನ್ನು ನಿಲ್ಲಿಸಲು ಆಪಲ್ ಕಂಪನಿಗೆ ಸೂಚಿಸಿದೆ.
ಸದ್ಯ ಶ್ವೇತ ಭವನದ ಸೂಚನೆಯಂತೆ ಯುಎಸ್ ನಲ್ಲಿ ತನ್ನ ಅಲ್ಟ್ರಾ 2 ಮತ್ತು ವಾಚ್ 9 ಸರಣಿಯ ವಾಚ್ಗಳ ಮಾರಾಟವನ್ನು ಸ್ಥಗಿತಗೊಳಿಸಿರುವ ಆಪಲ್, ಇಂಟರ್ನ್ಯಾಷನಲ್ ಟ್ರೇಡ್ ಕಮಿಷನ್ (ITC) ತನ್ನ ನಿರ್ಧಾರವನ್ನು ಬದಲಾಯಿಸದಿದ್ದರೆ, ಅದನ್ನು ಎದುರಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಜೊತೆಗೆ ಸಾಧ್ಯವಾದಷ್ಟು ಬೇಗ ತನ್ನ ಸ್ಮಾರ್ಟ್ ವಾಚ್ ಮಾದರಿಗಳ ಮಾರಾಟವನ್ನು ಪುನರಾರಂಭಿಸಲಾಗುವುದು ಎಂದು ತಿಳಿಸಿದೆ.
ಇದನ್ನೂ ಓದಿ- ಆನ್ಲೈನ್ ಶಾಪಿಂಗ್ ಮಜ ದುಪ್ಪಟ್ಟಾಗಿಸಲು ಜಿಮೇಲ್ ನಲ್ಲಿ ಬಂದಿದೆ ಹೊಸ ವೈಶಿಷ್ಟ್ಯ, ಇಲ್ಲಿದೆ ವಿವರ!
ಮುಂದುವರಿಯಲಿದೆ ಈ ಸ್ಮಾರ್ಟ್ ವಾಚ್ ಮಾರಾಟ:
ಇಂಟರ್ನ್ಯಾಷನಲ್ ಟ್ರೇಡ್ ಕಮಿಷನ್ (ಐಟಿಸಿ) ಆದೇಶದ ಪ್ರಕಾರ, ರಕ್ತದ ಆಮ್ಲಜನಕವನ್ನು ಅಳೆಯುವ ವೈಶಿಷ್ಟ್ಯವನ್ನು ಹೊಂದಿರದ ಆಪಲ್ ವಾಚ್ಗಳ ಮಾರಾಟವನ್ನು ಮಾತ್ರ ಅಮೆರಿಕದಲ್ಲಿ ಅನುಮತಿಸಲಾಗುತ್ತದೆ. ಇವುಗಳಲ್ಲಿ Apple Watch SE ಕೂಡ ಸೇರಿದೆ ಎಂಬುದು ಗಮನಾರ್ಹವಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.