ಯಡಿಯೂರಪ್ಪ ಪ್ರಮಾಣ ವಚನಕ್ಕೂ ಮೊದಲು 'ಡಿ' ಬದಲು 'ಐ' ಗೆ ಮೊರೆ ಹೋಗಿದ್ದೇಕೆ?

ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಬಿ.ಎಸ್.ಯಡಿಯೂರಪ್ಪ ಈಗ  ನಕ್ಷತ್ರದ ಗತಿ ಮೂಲಕ ತಮ್ಮ ಹೆಸರಿನಲ್ಲಿನ ಸ್ಪೆಲ್ಲಿಂಗ್ ನಲ್ಲಿ ಬದಲಾವಣೆ ಮಾಡಿದ್ದಾರೆ.

Last Updated : Jul 26, 2019, 06:09 PM IST
ಯಡಿಯೂರಪ್ಪ ಪ್ರಮಾಣ ವಚನಕ್ಕೂ ಮೊದಲು 'ಡಿ' ಬದಲು 'ಐ' ಗೆ ಮೊರೆ ಹೋಗಿದ್ದೇಕೆ? title=

ಬೆಂಗಳೂರು: ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಬಿ.ಎಸ್.ಯಡಿಯೂರಪ್ಪ ಈಗ  ನಕ್ಷತ್ರದ ಗತಿ ಮೂಲಕ ತಮ್ಮ ಹೆಸರಿನಲ್ಲಿನ ಸ್ಪೆಲ್ಲಿಂಗ್ ನಲ್ಲಿ ಬದಲಾವಣೆ ಮಾಡಿದ್ದಾರೆ.

ಹಾಗಾದರೆ ಈಗ ಅವರ ಸ್ಪೀಲಿಂಗ್ ಬದಲಾವಣೆಯ ಹಿನ್ನಲೆಯತ್ತ ಒಂದು ನೋಟ ಹರಿಸಬೇಕಾಗಿದೆ. ಮೊದಲ ಬಾರಿಗೆ 1975 ರಲ್ಲಿ ಶಿಕಾರಿಪುರ ಕ್ಷೇತ್ರದಿಂದ ಅವರು ಪಟ್ಟಣ ಪಂಚಾಯತಿಗೆ ಸ್ಪರ್ಧಿಸಿದಾಗಿನಿಂದ ಹಿಡಿದು ಜೆಡಿಎಸ್ ಜೊತೆಗಿನ ಮೈತ್ರಿಯೊಂದಿಗೆ ಸರ್ಕಾರ ರಚನೆ ಮಾಡುವವರೆಗೆ ಅವರ ಹೆಸರು ಯಡಿಯೂರಪ್ಪ( Yediyurappa) ಎಂದೇ ಇತ್ತು. ಆದರೆ ಯಾವಾಗ ಅವರು ಸಿಎಂ ಆಗಿ ಆಯ್ಕೆಯಾದರೂ ಆಗ ಅವರು ತಮ್ಮ ಹೆಸರನ್ನು ಯಡ್ಡಿಯೂರಪ್ಪ(Yeddyurappa) ಎಂದು ಬದಲಾಯಿಸಿಕೊಂಡರು.

ಇದಾದ ನಂತರ ಪತ್ರಿಕೆಗಳು ಅವರ ಹೆಸರನ್ನು ಚಿಕ್ಕದಾಗಿ ಯಡ್ಡಿ ಎಂದು ಹಾಗೂ ಬಿಎಸ್ವೈ ಎಂದು ಬಳಸತೊಡಗಿದವು. ಹೀಗಾಗಿ ಅವರು ಮೂರು ಅವಧಿಗೆ ಸಿಎಂ ಆದರೂ ಕೂಡ ಕ್ರಮವಾಗಿ 7 ದಿನ, ಮೂರು ವರ್ಷ , ಹಾಗೂ 55 ಗಂಟೆ ಗಳ ಕಾಲ ಸಿಎಂ ಆಗಿ ಅಧಿಕಾರಾವಧಿಯನ್ನು ಅನುಭವಿಸಿದರು. ಈ ಹಿನ್ನಲೆಯಲ್ಲಿ ಅವರು ಈಗ ತಮ್ಮ ಹೆಸರಿನಲ್ಲಿ 'ಡಿ' ಬದಲು 'ಐ'ಯನ್ನು ಸೇರಿಸಿ ಅದೃಷ್ಟ ಕುಲಾಯಿಸುತ್ತಾ ಎನ್ನುವ  ಪರೀಕ್ಷೆಯಲ್ಲಿ ತೊಡಗಿದ್ದಾರೆ.

ಇನ್ನು ಜೋತಿಷ್ಯರು ಅವರಿಗೆ ತಮ್ಮ ಹಳೆಯ ಹೆಸರನ್ನೇ ಮುಂದುವರೆಸಲು ಸಲಹೆ ನೀಡಿದರು. ಈ ಹಿನ್ನಲೆಯಲ್ಲಿ ಅವರು ಈಗ ತಮ್ಮ ಹಳೆಯ ಹೆಸರಿಗೆ ಅವರು ಮೊರೆ ಹೋಗಿದ್ದಾರೆ. 

Trending News