Dhanu Sankranti: ಹಿಂದೂ ಧರ್ಮದಲ್ಲಿ ಸೂರ್ಯ ದೇವನನ್ನು ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ. ಮಾತ್ರವಲ್ಲ, ಸೂರ್ಯ ನಮಸ್ಕಾರ, ಸೂರ್ಯ ದೇವನ ಪೂಜೆಗೆ ವಿಶೇಷ ಮನ್ನಣೆ ನೀಡಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://youtu.be/--phA9ji8NM
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯದೇವನನ್ನು ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ. ಸನಾತನ ಧರ್ಮದಲ್ಲಿ ಧನು ಸಂಕ್ರಾಂತಿಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 16 ಡಿಸೆಂಬರ್ 2023ರಂದು ಸೂರ್ಯ ದೇವನು ವೃಶ್ಚಿಕ ರಾಶಿಯನ್ನು ತೊರೆದು ಧನು ರಾಶಿಯನ್ನು ಪ್ರವೇಶಿಸುತ್ತಾನೆ. ಇದನ್ನು ಧನು ಸಂಕ್ರಾಂತಿ ಎಂತಲೂ ಕರೆಯಲಾಗುತ್ತದೆ.
ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಧನು ಸಂಕ್ರಾಂತಿಯಲ್ಲಿ ಕೆಲವು ಪರಿಹಾರಗಳನ್ನು ಕೈಗೊಳ್ಳುವುದರಿಂದ ಸೂರ್ಯ ದೋಷ ನಿವಾರಣೆಯಾಗಿ ಜಾತಕದಲ್ಲಿ ಸೂರ್ಯ ಗ್ರಹ ಬಲಗೊಳ್ಳುತ್ತದೆ.
ಧನು ಸಂಕ್ರಾಂತಿಯ ದಿನ ಈ ನಾಲ್ಕು ಕ್ರಮ ಕೈಗೊಳ್ಳುವುದರಿಂದ ಸೂರ್ಯ ದೇವರ ಆಶೀರ್ವಾದವನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ. ಅವುಗಳೆಂದರೆ...
ಪುಣ್ಯ ಸ್ನಾನ: ಧನು ಸಂಕ್ರಾಂತಿಯ ದಿನ ಪುಣ್ಯ ನದಿ ಸ್ನಾನ ಮಾಡಿ ಪವಿತ್ರ ನದಿಯ ನೀರನ್ನು ಸೂರ್ಯದೇವರಿಗೆ ಅರ್ಘ್ಯವಾಗಿ ಅರ್ಪಿಸಿ. ಈ ಸಮಯದಲ್ಲಿ, 'ಓಂ ಸೂರ್ಯಾಯ ನಮಃ' ಎಂಬ ಮಂತ್ರವನ್ನು ಪಠಿಸಿ. ಈ ರೀತಿ ಮಾಡುವುದರಿಂದ ಪಾಪಗಳಿಂದ ಮುಕ್ತಿ ದೊರೆಯುತ್ತದೆ. ಜೊತೆಗೆ ಜಾತಕದಲ್ಲಿ ಸೂರ್ಯನ ಸ್ಥಾನವು ಬಲಗೊಳ್ಳುತ್ತದೆ.
ಧನು ಸಂಕ್ರಾಂತಿಯ ದಿನ ಸೂರ್ಯ ಚಾಲೀಸಾ ಅಥವಾ ಸೂರ್ಯ ಕವಚ ಸ್ತೋತ್ರವನ್ನು ಪಠಿಸಿ, ಸೂರ್ಯನ 108 ನಾಮಗಳನ್ನು ಜಪಿಸಿ. ಇದರಿಂದ ಜೀವನದಲ್ಲಿ ಎದುರಾಗಿರುವ ಸಾಮಸ್ಯೆಗಳಿಂದ ಮುಕ್ತಿ ಪಡೆಯಬಹುದು ಎಂದು ಹೇಳಲಾಗುತ್ತದೆ.
ಧನು ಸಂಕ್ರಾಂತಿಯಂದು ಪುಣ್ಯ ನದಿ ಸ್ನಾನ, ಜಪತಪಗಳ ಬಳಿಕ ಕಪ್ಪು ಎಳ್ಳನ್ನು ಗಂಗಾಜಲದಲ್ಲಿ ಬೆರೆಸಿ ಶಿವನಿಗೆ ಅಭಿಷೇಕ ಮಾಡಿ. ಇದರಿಂದ ಜಾತಕದಲ್ಲಿ ಗ್ರಹ ದೋಷ ನಿವಾರಣೆಯಾಗುತ್ತದೆ.
ಜಾತಕದಲ್ಲಿ ಸೂರ್ಯನ ಸ್ಥಾನವನ್ನು ಬಳಪಡಿಸಲು ಧನು ಸಂಕ್ರಾಂತಿಯ ದಿನ ಅಗತ್ಯವಿದ್ದವರಿಗೆ ನಿಮ್ಮ ಕೈಲಾದದ್ದನ್ನು ದಾನ ಮಾಡಿ. ನಿಮ್ಮಿಂದ ಒಬ್ಬರು ಸಂತೋಷಪಟ್ಟರೆ, ಸಮೃದ್ಧಿಯನ್ನು ಪಡೆದರೆ ನೀವೂ ಸಹ ಏಳ್ಗೆ ಹೊಂಡುತ್ತೀರಿ. ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.