Sushmit Sen : ಸುಶ್ಮಿತಾ ಸೇನ್ ಮಾಜಿ ಭುವನ ಸುಂದರಿ ಮತ್ತು ನಟಿ ಮಾತ್ರವಲ್ಲ, ನಿಜವಾದ ಅರ್ಥದಲ್ಲಿ ಲಕ್ಷಾಂತರ ಮಹಿಳೆಯರಿಗೆ ಸ್ಫೂರ್ತಿ ನೀಡಿದ ರೋಲ್ ಮಾಡೆಲ್. . ಇಬ್ಬರು ಹೆಣ್ಣುಮಕ್ಕಳಿಗೆ ಸಿಂಗಲ್ ಪೇರೆಂಟ್.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
1994ರಲ್ಲಿ ಮಿಸ್ ಯುವಿವರ್ಸ್ ಕಿರೀಟ ಮುಡಿಗೇರಿಸಿಕೊಂಡ ಚೆಲುವೆ ಸುಶ್ಮಿತಾ ಸೇನ್. ಭುವನ ಸುಂದರಿ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಇತಿಹಾಸವನ್ನು ಸುಶ್ಮಿತಾ ನಿರ್ಮಿಸಿದರು.
1994 ರಲ್ಲಿ ಭುವನ ಸುಂದರಿ ಪ್ರಶಸ್ತಿಯನ್ನು ಗೆದ್ದ ನಂತರ, ಸುಶ್ಮಿತಾ ಸೇನ್ 1996 ರಲ್ಲಿ ಬಾಲಿವುಡ್ ನತ್ತ ಹೆಜ್ಜೆ ಹಾಕಿದರು. ದಸ್ತಕ್ನೊಂದಿಗೆ ಬಾಲಿವುಡ್ಗೆ ಪಾದಾರ್ಪಣೆ ಮಾಡಿದ ಅವರು ನಂತರ ಅವರು ತಮಿಳು ಆಕ್ಷನ್ ಚಿತ್ರ ರಚಗನ್ ನಲ್ಲಿಯೂ ಕಾಣಿಸಿಕೊಂಡರು. ಇದಾದ ನಂತರ ಮತ್ತೆ ಬಾಲಿವುಡ್ಗೆ ಮರಳಿದ ಅವರು ಸಲ್ಮಾನ್ ಖಾನ್ ಜೊತೆ ಬಿವಿ ನಂ 1 ನಲ್ಲಿ ಕಾಣಿಸಿಕೊಂಡರು.
ಈ ಮಧ್ಯೆ ಅನೇಕ ಪ್ರಸಿದ್ಧ ವ್ಯಕ್ತಿಗಳೊಂದಿಗೆ ರ ಸುಶ್ಮಿತಾ ಹೆಸರು ತಳುಕು ಹಾಕಿಕೊಂಡಿತ್ತು. ಲಲಿತ್ ಮೋದಿ, ಸಂಜಯ್ ನಾರಂಗ್, ರಣದೀಪ್ ಹೂಡಾ, ಇಮ್ತಿಯಾಜ್ ಖತ್ರಿ, ವಾಸಿಂ ಅಕ್ರಮ್ ಮತ್ತು ಮುದಸ್ಸರ್ ಅಜೀಜ್ ಸೇರಿದಂತೆ 11 ಜನರೊಂದಿಗೆ ಸುಶ್ಮಿತಾ ಡೇಟಿಂಗ್ ನಡೆಸಿರುವ ಬಗ್ಗೆ ಸುದ್ದಿ ಹಬ್ಬಿತ್ತು.
ತನ್ನ 24 ನೇ ವಯಸ್ಸಿನಲ್ಲಿ, ಸುಶ್ಮಿತಾ ಸೇನ್ ಹೆಣ್ಣು ಮಗುವನ್ನು ದತ್ತು ತೆಗೆದುಕೊಂಡರು. ರೆನೀಯನ್ನು ದತ್ತು ಪಡೆದ ಸುಶ್ಮಿತಾ ಸಿಂಗಲ್ ಪೇರೆಂಟ್ ಆಗಲು ನಿರ್ಧರಿಸಿದರು.
2010 ರಲ್ಲಿ, ಸುಶ್ಮಿತಾ ಸೇನ್ ಮತ್ತೊಂದು ಹೆಣ್ಣು ಮಗುವನ್ನು ದತ್ತು ತೆಗೆದುಕೊಂಡರು. ಸುಶ್ಮಿತಾ ಎರಡನೇ ಪುತ್ರಿಯ ಹೆಸರು ಅಲಿಸಾ.
ಅನೇಕ ವಿಫಲ ಸಂಬಂಧಗಳ ನಂತರ, ಸುಶ್ಮಿತಾ ಸೇನ್ 15 ವರ್ಷಗಳ ಕಿರಿಯ ಕಾಶ್ಮೀರಿ ಮಾಡೆಲ್ ರೋಹ್ಮನ್ ಶಾಲ್ ಜೊತೆಯೂ ಸಂಬಂಧ ಇರಿಸಿಕೊಂಡಿದ್ದರು. ಇವರಿಬ್ಬರೂ ಸೋಶಿಯಲ್ ಮಿಡಿಯಾದಲ್ಲಿ ತಮ್ಮಿಬ್ಬರ ಫೋಟೋ ಗಳನ್ನೂ ಶೇರ್ ಮಾಡಿಕೊಳ್ಳುತ್ತಿದ್ದರು. ಆದರೆ ಇದೀಗ ರೋಹ್ಮನ್ ಜೊತೆಗಿನ ಸಂಬಂಧವೂ ಮುರಿದು ಬಿದ್ದಿದೆ ಎನ್ನಲಾಗುತ್ತಿದೆ.
ಇದೆಲ್ಲದರ ಮಧ್ಯೆ ಸುಶ್ಮಿತಾ ಅಡಿಸನ್ ಕಾಯಿಲೆಯಿಂದ ಬಳಲಿದ್ದಾರೆ. ಆದರೆ ಈ ಕಾಯಿಲೆ ವಿರುದ್ದ ಹೋರಾಡಿ, ಸಂಪೂರ್ಣ ಗುಣಮುಖರಾಗಿದ್ದಾರೆ. ಈ ಮಧ್ಯೆ ತನ್ನ 43 ನೇ ವಯಸ್ಸಿನಲ್ಲಿ ಲಘು ಹೃದಯಾಘಾತಕ್ಕೂ ಒಳಗಾಗಿದ್ದಾರೆ.