Rishabh Shetty Net Worth: ಕಾಂತಾರ ಸಿನಿಮಾದ ಮೂಲಕವೇ ದೇಶ ವಿದೇಶಗಳಲ್ಲಿ ಜನಪ್ರಿಯತೆ ಗಳಿಸಿದ ನಟ ರಿಷಬ್ ಶೆಟ್ಟಿ ಕರ್ನಾಟಕದ ಹೆಮ್ಮೆಯ ಸೆಲೆಬ್ರಿಟಿ. ಇವರ ಕೈಚಳಕದ ಮೂಲಕ ತೆರೆಗೆ ಬಂದ ‘ಕಾಂತಾರ’ ಸಾರ್ವಕಾಲಿಕ ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಕಾಂತಾರ ದಿ ಲೆಜೆಂಡ್ - ಅಧ್ಯಾಯ 1 ಇದೀಗ ತೆರೆಗೆ ಬರಲು ಸಿದ್ಧವಾಗುತ್ತಿದೆ. ಮೊದಲ ಹಂತದಲ್ಲೇ ರೋಮಾಂಚನ ಸೃಷ್ಟಿಸಿದ್ದ, ವಿಭಿನ್ನ ಕಥಾಹಂದರ ಹೊಂದಿದ್ದ ಕಾಂತಾರ, ಇದೀಗ ಎರಡನೇ ಹಂತದಲ್ಲಿ ಇನ್ನೆಷ್ಟು ಸದ್ದು ಮಾಡುತ್ತೆ ಅನ್ನೋದನ್ನು ಕಾದುನೋಡಬೇಕಿದೆ.
ಇನ್ನು ಕಾಂತಾರ ದಿ ಲೆಜೆಂಡ್ - ಅಧ್ಯಾಯ 1ರ ಟೀಸರ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ರಿಷಬ್ ಶೆಟ್ಟಿ ಮತ್ತು ತಂಡ ಹಂಚಿಕೊಂಡಿದೆ. ಈ ಚಿತ್ರವು 2024 ರಲ್ಲಿ ಥಿಯೇಟರ್’ಗಳಲ್ಲಿ ಬಿಡುಗಡೆಯಾಗಲಿದೆ.
ಇವೆಲ್ಲದರ ಜೊತೆಗೆ ನಾವಿಂದು ಡಿವೈನ್ ಸ್ಟಾರ್ ಎಂದೇ ಖ್ಯಾತಿ ಪಡೆದ ರಿಷಬ್ ಶೆಟ್ಟಿಯವರ ಆಸ್ತಿ ಮೌಲ್ಯದ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ.
ಸಿನಿಮಾ ಜಗತ್ತಿಗೆ ಕಾಲಿಡುವ ಮುನ್ನ ರಿಷಬ್ ಶೆಟ್ಟಿ ವಾಟರ್ ಕ್ಯಾನ್ ಮಾರಾಟ, ರಿಯಲ್ ಎಸ್ಟೇಟ್ ಮತ್ತು ಹೋಟೆಲ್ ಕೆಲಸ ಸೇರಿದಂತೆ ಹಲವು ಕೆಲಸಗಳನ್ನು ಮಾಡುತ್ತಿದ್ದರು. ಅರವಿಂದ್ ಕೌಶಿಕ್ ಅವರ ತುಘಲಕ್ ಸಿನಿಮಾದಲ್ಲಿ ಕೆಲಸ ಮಾಡೋದಕ್ಕೂ ಮುನ್ನ ಕ್ಲಾಪ್ ಬಾಯ್, ಸ್ಪಾಟ್ ಬಾಯ್, ಸಹಾಯಕ ನಿರ್ದೇಶಕ, ಇತ್ಯಾದಿಯಾಗಿ ಕೆಲಸ ಮಾಡಲು ಪ್ರಾರಂಭಿಸಿದರು.
ಆದರೆ ಇಂದು ನಟನೆ, ನಿರ್ದೇಶನ ಮತ್ತು ಚಲನಚಿತ್ರ ನಿರ್ಮಾಣದಿಂದ ಹಣವನ್ನು ಗಳಿಸುತ್ತಿದ್ದಾರೆ. ಕಾಂತಾರದ ಯಶಸ್ಸಿನ ಬಳಿಕ ರಿಷಬ್ ಶೆಟ್ಟಿಯವರ ಒಟ್ಟು ಆಸ್ತಿ ಮೌಲ್ಯ ಏರಿಕೆ ಕಂಡಿದೆ ಎಂದು ಹೇಳಲಾಗುತ್ತಿದೆ.
Mashable India ಪ್ರಕಾರ, ಅಂದಾಜು ರೂ. 12 ಕೋಟಿ (USD 1.43 ಮಿಲಿಯನ್) ಆಸ್ತಿ ಮೌಲ್ಯವನ್ನು ರಿಷಬ್ ಹೊಂದಿದ್ದಾರೆ. ಇನ್ನು ಸಿನಿಮಾವೊಂದರಲ್ಲಿ ನಟನೆಗಾಗಿ ರೂ. 4 ಕೋಟಿ (USD 479,837) ಸಂಭಾವನೆ ಪಡೆಯುತ್ತಾರೆ. ಇವೆಲ್ಲದರ ಹೊರತಾಗಿ ಅವರ ವಾರ್ಷಿಕ ಆದಾಯ ಮತ್ತು ಬ್ರಾಂಡ್ ಎಂಡಾರ್ಸ್ಮೆಂಟ್’ಗಳ ಶುಲ್ಕದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ.
ಅಂದಹಾಗೆ ನಟ ರಿಷಬ್ ಶೆಟ್ಟಿ ಅವರು ರೂ. 10.5 ಕೋಟಿ (USD 1,259,699) ನೀಡಿ ಸ್ಯಾಂಡಲ್ವುಡ್ ಹಿರಿಯ ನಟ ಮತ್ತು ನಿರ್ಮಾಪಕ ದ್ವಾರಕೀಶ್ ಅವರಿಂದ ಮನೆಯನ್ನು ಖರೀದಿಸಿದ್ದರು ಎಂದು ಹೇಳಲಾಗುತ್ತಿದೆ. ಈ ಮನೆ ಬೆಂಗಳೂರಿನ ಎಚ್ಆರ್ಎಸ್ ಲೇಔಟ್’ನಲ್ಲಿ ಇದೆ.
Cartoq ಪ್ರಕಾರ, 2022 ರಲ್ಲಿ ರಿಷಬ್ ಶೆಟ್ಟಿ ಅವರು ಸುಮಾರು ರೂ.83 ಲಕ್ಷ (USD 99,578) ಬೆಲೆಯ Audi Q7ನ್ನು ಖರೀದಿಸಿದ್ದರು. ಇದಲ್ಲದೆ, ರೂ. 7.95 ಕೋಟಿ (USD 953,791) ಮೌಲ್ಯದ ರೋಲ್ಸ್ ರಾಯ್ಸ್ ಘೋಸ್ಟ್, ರೂ. 1.60 ಕೋಟಿ ಬೆಲೆಯ ಮರ್ಸಿಡಸ್ ಬೆನ್ಜ್ S 350 d Coupe, ರೂ. 1.58 ಕೋಟಿ ಮೌಲ್ಯದ ಆಡಿ ಐ A8L Lexus LX 570 ಮತ್ತು ಮರ್ಸಿಡಸ್ ಬೆನ್ಜ್ S500 ಕೂಡ ರಿಷಬ್ ಬಳಿ ಇದೆ.