How much Orry earn : ಸೋಷಿಯಲ್ ಮೀಡಿಯಾ ಸೆನ್ಸೇಷನ್ ಮತ್ತು ಸೆಲೆಬ್ರಿಟಿಗಳ ಆತ್ಮೀಯ ಸ್ನೇಹಿತ ಒರಿ ಬಿಗ್ ಬಾಸ್ 17 ರ ವೇದಿಕೆಯಲ್ಲಿ ಅನೇಕ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಒರಿ ತಮ್ಮ ಫೋಟೊಗಳ ಆಸಕ್ತಿದಾಯಕ ಸಂಗತಿ ಬಿಚ್ಚಿಟ್ಟಿದ್ದಾರೆ. ಬಿಗ್ ಬಾಶ್ ಮನೆಯೊಳಗೆ ಪ್ರವೇಶಿಸುವ ಮೊದಲು, ಒರಿ ವೇದಿಕೆಯಲ್ಲಿ ಸಲ್ಮಾನ್ ಖಾನ್ ಅವರೊಂದಿಗೆ ತಮಾಷೆಯ ಸಂಭಾಷಣೆ ನಡೆಸಿದರು.
ಬಿಗ್ ಬಾಸ್ 17 ರ ವೇದಿಕೆಯಲ್ಲಿ ಸಲ್ಮಾನ್ ಖಾನ್ ಅವರ ಮುಂದೆ ಒರಿ ಕೆಲವು ಆಘಾತಕಾರಿ ವಿಚಾರ ಬಹಿರಂಗಪಡಿಸಿದರು. ಫೋಟೋಗಳಿಗೆ ಪೋಸ್ ನೀಡಿ ಸುಮಾರು 20-30 ಲಕ್ಷ ರೂಪಾಯಿ ಗಳಿಸಿದ್ದಾರೆ ಎಂದು ಹೇಳಿದರು. ಒರಿ ಹೇಳಿದ ಈ ಮಾತು ಕೇಳಿ ಸಲ್ಮಾನ್ ಖಾನ್ ಅಚ್ಚರಿಗೊಂಡಿದ್ದಾರೆ. ಒರಿ ಅವರು 5 ಮ್ಯಾನೇಜರ್ಗಳನ್ನು ಹೊಂದಿದ್ದಾರೆ ಎಂದು ಇದೇ ವೇಳೆ ತಿಳಿಸಿದ್ದಾರೆ.
ಇದನ್ನೂ ಓದಿ: ನೀತು ಹೊಸ ಇತಿಹಾಸ.. 50 ದಿನಕ್ಕೆ ಎಲಿಮಿನೇಟ್ ಆದ್ರೂ ಇಷ್ಟೆಲ್ಲ ದಾಖಲೆ ಬರೆದ ಮೊದಲ ಸ್ಪರ್ಧಿ ಇವರು!
ನಾನು ಫೋಟೋಗಳಿಗೆ ಪೋಸ್ ನೀಡಲು ಮತ್ತು ಅವುಗಳನ್ನು ಪೋಸ್ಟ್ ಮಾಡಲು ಹಣವನ್ನು ಪಡೆಯುತ್ತೇನೆ. ಈ ಫೋಟೋಗಳಿಂದ ನಾನು ಒಂದು ರಾತ್ರಿಯಲ್ಲಿ ಸುಮಾರು 20-30 ಲಕ್ಷ ರೂ. ಸಂಪಾದಿಸುತ್ತೇನೆ ಎಂದು ಒರಿ ಹೇಳಿದರು.
ಒರಿ ಎಷ್ಟು ಫೋನ್ ಬಳಸುತ್ತಾರೆ ಎಂಬ ಸಲ್ಮಾನ್ ಖಾನ್ ಪ್ರಶ್ನೆಗೆ ಉತ್ತರಿಸಿದ ಅವರು, "ಬೆಳಗ್ಗೆ ಒಂದು, ಮಧ್ಯಾಹ್ನಕ್ಕೆ ಒಂದು ಮತ್ತು ರಾತ್ರಿ ಹೊತ್ತು ಮೂರು ಫೋನ್ ಬಳಸುತ್ತೇನೆ ಎಂದರು. ಆಗ ಸಲ್ಮಾನ್ ಒರಿಗೆ ಇಷ್ಟು ಫೋನ್ಗಳನ್ನು ಏನು ಮಾಡುತ್ತಾರೆ ಎಂದು ಕೇಳಿದರು. ಈ ಕುರಿತು ಅವರು, ಉತ್ತಮ ಫೋಟೋಗಳಿಂದ ಅನೇಕ ಪ್ರಯೋಜನಗಳಿವೆ. ಚೆನ್ನಾಗಿ ಸಂಪಾದಿಸಲು ಉತ್ತಮ ಫೋಟೋಗಳನ್ನು ಪೋಸ್ಟ್ ಮಾಡಬೇಕು ಎಂದು ಹೇಳಿದರು.
ಇದನ್ನೂ ಓದಿ: BBK10: ಬಿಗ್ ಬಾಸ್ ಮನೆಗೆ ಕ್ರಿಕೆಟರ್ ವೈಲ್ಡ್ ಕಾರ್ಡ್ ಎಂಟ್ರಿ.. ಈ ಸ್ಟೈಲಿಶ್ ಹಂಕ್ ಯಾರು ಗೊತ್ತೇ.!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.