SpaceX Starship launch Fail: ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಈ ವಾರದ ಆರಂಭದಲ್ಲಿ ಹಾರಾಟಕ್ಕೆ ಸಂಬಂಧಿಸಿದಂತೆ ಎಲ್ಲಾ ಅಗತ್ಯ ಅನುಮೋದನೆಗಳನ್ನು ನೀಡಿತ್ತು. ಸರಿಸುಮಾರು 400 ಅಡಿ ಎತ್ತರದ 'ಸ್ಟಾರ್ಶಿಪ್' ವಿಶ್ವದ ಅತಿದೊಡ್ಡ ಮತ್ತು ಶಕ್ತಿಶಾಲಿ ರಾಕೆಟ್ ಆಗಿದೆ.
ಸ್ಪೇಸ್ಎಕ್ಸ್ ಸ್ಟಾರ್ಶಿಪ್ ಉಡಾವಣೆ ವಿಫಲ: ವಿಶ್ವದ ಶ್ರೀಮಂತ ಉದ್ಯಮಿ ಎಲೋನ್ ಮಸ್ಕ್ ಅವರ 'ಸ್ಪೇಸ್ಎಕ್ಸ್' ತನ್ನ ಬೃಹತ್ ರಾಕೆಟ್ 'ಸ್ಟಾರ್ಶಿಪ್' ಅನ್ನು ಶನಿವಾರ(ನ.18) ಉಡಾವಣೆ ಮಾಡಿತು. ಆದರೆ ಅದರ 2ನೇ ಪರೀಕ್ಷಾರ್ಥ ಹಾರಾಟವು ಬೂಸ್ಟರ್ ಮತ್ತು ನಂತರ ವಾಹನದಲ್ಲಿ ಸ್ಫೋಟಗೊಂಡ ಕಾರಣ ವಿಫಲವಾಗಿದೆ. ಈ ಮೂಲಕ ಮಸ್ಕ್ ಅವರ ಕನಸು ಮತ್ತೊಮ್ಮೆ ಛಿತ್ರವಾಗಿದೆ. ಇದರ ವಿಫಲತೆಗೆ ಕಾರಣವೇನು ಅನ್ನೋದರ ಬಗ್ಗೆ ತಿಳಿಯಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಜಗತ್ತಿನ ಯಶಸ್ವಿ ಉದ್ಯಮಿ ಎಲೋನ್ ಮಸ್ಕ್ ತನ್ನ ರಾಕೆಟ್ಗಳ ಜನರನ್ನು ಚಂದ್ರ ಮತ್ತು ಮಂಗಳ ಗ್ರಹಕ್ಕೆ ಕರೆದೊಯ್ಯುವ ಉದ್ದೇಶ ಹೊಂದಿದ್ದಾನೆ.
ಎಲೋನ್ ಮಸ್ಕ್ ಅವರ ಕಂಪನಿ 'ಸ್ಪೇಸ್ಎಕ್ಸ್' ತನ್ನ ಬೃಹತ್ ರಾಕೆಟ್ 'ಸ್ಟಾರ್ಶಿಪ್' ಅನ್ನು ಶನಿವಾರ ಉಡಾವಣೆ ಮಾಡಿತು. ಆದರೆ ಬೂಸ್ಟರ್ ಮತ್ತು ನಂತರ ವಾಹನದಲ್ಲಿ ಸ್ಫೋಟದಿಂದಾಗಿ ಅದರ 2ನೇ ಪರೀಕ್ಷಾರ್ಥ ಹಾರಾಟ ವಿಫಲವಾಗಿದೆ.
ಬೂಸ್ಟರ್ ರಾಕೆಟ್ ಅನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಯಿತು, ಆದರೆ ದಕ್ಷಿಣ ಟೆಕ್ಸಾಸ್ನಿಂದ ಟೇಕ್ ಆಫ್ ಆದ 8 ನಿಮಿಷಗಳ ನಂತರ ಅದರ ಕಮ್ಯುನಿಕೇಷನ್ ಕಳೆದುಹೋಯಿತು. ಬಳಿಕ ಪರೀಕ್ಷೆಯು ವಿಫಲವಾಗಿದೆ ಎಂದು SpaceX ಘೋಷಿಸಿತು.
ಬಾಹ್ಯಾಕಾಶ ನೌಕೆಯ ಇಂಜಿನ್ಗಳನ್ನು ಭೂಮಿಯ ಕಕ್ಷೆಗೆ ಹಾರಿಸಲು ಮುಂದಾದಾಗ ಸಮಸ್ಯೆ ಸಂಭವಿಸಿದೆ. ಆದರೆ ಅದಕ್ಕೆ ಕೆಲವು ನಿಮಿಷಗಳ ಮೊದಲು ಬೂಸ್ಟರ್ ಸ್ಫೋಟಿಸಿತು. ವಾಹನವನ್ನು ಅದರ ಬೂಸ್ಟರ್ನಿಂದ ಪ್ರತ್ಯೇಕಿಸಿ ಬಾಹ್ಯಾಕಾಶಕ್ಕೆ ಕಳುಹಿಸುವುದು ಕಂಪನಿಯ ಗುರಿಯಾಗಿತ್ತು.
ಏಪ್ರಿಲ್ನಲ್ಲಿ ತನ್ನ ಮೊದಲ ಪರೀಕ್ಷಾರ್ಥ ಹಾರಾಟದ ಸ್ವಲ್ಪ ಸಮಯದ ನಂತರ 'ಸ್ಟಾರ್ಶಿಪ್' ರಾಕೆಟ್ ಸ್ಫೋಟದಲ್ಲಿ ನಾಶವಾಯಿತು. ಸ್ಪೇಸ್ಎಕ್ಸ್ ಕಳೆದ ಹಲವಾರು ತಿಂಗಳುಗಳಿಂದ ರಾಕೆಟ್ ಮತ್ತು ಉಡಾವಣಾ ಪ್ಯಾಡ್ ಎರಡನ್ನೂ ಸುಧಾರಿಸಿದೆ. ಇದು ಮೆಕ್ಸಿಕೋ ಗಡಿಯ ಬಳಿ ಟೆಕ್ಸಾಸ್ನ ದಕ್ಷಿಣ ತುದಿಯಲ್ಲಿದೆ.
ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಈ ವಾರದ ಆರಂಭದಲ್ಲಿ ಹಾರಾಟಕ್ಕೆ ಸಂಬಂಧಿಸಿದಂತೆ ಎಲ್ಲಾ ಅಗತ್ಯ ಅನುಮೋದನೆಗಳನ್ನು ನೀಡಿತ್ತು. ಸರಿಸುಮಾರು 400 ಅಡಿ ಎತ್ತರದ 'ಸ್ಟಾರ್ಶಿಪ್' ವಿಶ್ವದ ಅತಿದೊಡ್ಡ ಮತ್ತು ಶಕ್ತಿಶಾಲಿ ರಾಕೆಟ್ ಆಗಿದೆ.