ಬೆಂಗಳೂರು: ಕಾಗವಾಡ ಕ್ಷೇತ್ರದ ನಮ್ಮ ಶಾಸಕ ಶ್ರೀಮಂತ ಪಾಟೀಲ ಅವರನ್ನು ಬಿಜೆಪಿ ನಾಯಕರು ಅಪಹರಣ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿ ಸದನದಲ್ಲಿ ಗದ್ದಲ ಎಬ್ಬಿಸಿದ ಬೆನ್ನಲ್ಲೇ ಮುಂಬೈನ ಸೇಂಟ್ ಜಾರ್ಜ್ ಆಸ್ಪತ್ರೆಯಿಂದ ಶಾಸಕ ಶ್ರೀಮಂತ ಪಾಟೀಲ ಅವರು ತಮ್ಮ ಪುತ್ರನೊಂದಿಗೆ ಇರುವ ಒಂದು ವೀಡಿಯೋ ಸಂದೇಶವನ್ನು ರವಾನೆ ಮಾಡಿದ್ದಾರೆ.
ನಮ್ಮ ಶಾಸಕ ಶ್ರೀಮಂತ ಪಾಟೀಲರನ್ನು ಬಿಜೆಪಿ ನಾಯಕರು ಕಿಡ್ನಾಪ್ ಮಾಡಿದ್ದಾರೆ: ಡಿಕೆಶಿ
"ನನ್ನನ್ನು ಯಾರೂ ಅಪಹರಿಸಿಲ್ಲ. ಯಾವ ಪಕ್ಷದ ನಾಯಕರೂ ನನ್ನನ್ನು ಇಲ್ಲಿಗೆ ಕರೆತಂದಿಲ್ಲ. ವೈಯಕ್ತಿಕ ಕೆಲಸದ ಮೇಲೆ ಚೆನ್ನೈಗೆ ಹೋಗಿದ್ದೆ. ಅಲ್ಲಿ ಎದೆ ನೋವು ಕಾಣಿಸಿಕೊಂಡಿತು. ಯಾವ ಆಸ್ಪತ್ರೆಗೆ ದಾಖಲಾಗುವುದು ಎಂದು ತಿಳಿಯದೆ ವಿಮಾನ ಟಿಕೆಟ್ ಬುಕ್ ಮಾಡಿಕೊಂಡು ಮುಂಬೈ ಬಂದೆ" ಎಂದು ಶ್ರೀಮಂತ ಪಾಟೀಲ ಅವರು ವೀಡಿಯೋದಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲರ ಅಪಹರಣ ಆರೋಪದ ಬಗ್ಗೆ ತನಿಖೆ ನಡೆಯಲಿ: ಗೃಹ ಸಚಿವರಿಗೆ ಸ್ಪೀಕರ್ ಸೂಚನೆ
ಇಂದು ಮಧ್ಯಾಹ್ನ ಸದನ ಕಾಲಾಪದ ಸಂದರ್ಭದಲ್ಲಿ ಬಿಜೆಪಿಯವರು ಶ್ರೀಮಂತ ಪಾಟೀಲ ಅವರನ್ನು ಅಪಹರಣ ಮಾಡಿದ್ದಾರೆ. ಇದಕ್ಕೆ ನಮ್ಮ ಬಳಿ ಎಲ್ಲಾ ಪುರಾವೆಗಳಿವೆ ಎಂದು ಹೇಳಿ ಅದೆಲ್ಲವನ್ನೂ ಸ್ಪೀಕರ್ ಗೆ ಸಲ್ಲಿಸಿದ್ದರು. ಬಳಿಕ ಸ್ಪೀಕರ್, ಇಂದೊಂದು ಕ್ರಿಮಿನಲ್ ಪ್ರಕರಣ. ನಾನು ಈ ಬಗ್ಗೆ ಏನನ್ನೂ ಮಾತನಾಡಲು ಸಾಧ್ಯವಿಲ್ಲ ಎಂದು ಹೇಳಿ, ಈ ಬಗ್ಗೆ ತನಿಖೆ ನಡೆಸಿ ನಾಳೆ ಬೆಳಿಗ್ಗೆ ವರದಿ ಸಲ್ಲಿಸುವಂತೆ ಗೃಹ ಸಚಿವ ಎಂ.ಬಿ.ಪಾಟೀಲ್ ಅವರಿಗೆ ಸೂಚನೆ ನೀಡಿದ ಬೆನ್ನಲ್ಲೇ ಶಾಸಕ ಶ್ರೀಮಂತ ಪಾಟೀಲ ಅವರು ವೀಡಿಯೋ ಸಂದೇಶ ಕಳುಹಿಸಿದ್ದಾರೆ.