ನವದೆಹಲಿ: ಮುಖ್ಯಮಂತ್ರಿ ಪದವಿ ಮೇಲೆ ಕಣ್ಣಿಟ್ಟಿರುವ ಶಿವಸೇನಾದ ಯುವ ನಾಯಕ ಆದಿತ್ಯ ಠಾಕ್ರೆ ಈಗ ಮಹಾರಾಷ್ಟ್ರದಲ್ಲಿ 4000 ಕಿಲೋಮೀಟರ್ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಜಲಗಾಂನಿಂದ ಪ್ರಾರಂಭವಾಗಿರುವ ಈ ಯಾತ್ರೆ ಮಹಾರಾಷ್ಟ್ರದ ಬಹುತೇಕ ಪ್ರದೇಶಗಳನ್ನು ಒಳಗೊಳ್ಳಲಿದೆ ಎನ್ನಲಾಗಿದೆ.
ತಮ್ಮ ತಂದೆಯೊಂದಿಗೆ ಮುಂಬೈನಲ್ಲಿ ರೈತರ ರ್ಯಾಲಿಯನ್ನು ಮುನ್ನಡೆಸಿದ ಒಂದು ದಿನದ ನಂತರ, ಆದಿತ್ಯ ಠಾಕ್ರೆ ಅವರು ಮಹಾರಾಷ್ಟ್ರ ಪ್ರವಾಸವನ್ನು ಪ್ರಾರಂಭಿಸಿದ್ದಾರೆ, ಈ ವರ್ಷದ ಕೊನೆಯಲ್ಲಿ ಚುನಾವಣೆ ಇರುವುದರಿಂದ ಈ ಯಾತ್ರೆ ಈಗ ಮಹತ್ವ ಪಡೆದು ಕೊಂಡಿದೆ.ಜಲಗಾಂನಿಂದ ಪ್ರಾರಂಭಗೊಂಡ ಈ ಯಾತ್ರೆಗೆ ಹಿರಿಯ ಸೇನಾ ನಾಯಕರಾದ ಏಕನಾಥ ಶಿಂಧೆ ಮತ್ತು ರಾಮದಾಸ್ ಕದಮ್ ಜಲ್ಗಾಂವ್‌ನ ಹಿರಿಯ ರಾಜಕಾರಣಿ ಸುರೇಶದಾ ಜೈನ್ ಅವರು ಸಾಥ್ ನೀಡಿದರು.
कृष्णाजी नगर मैदान, जळगाव पाचोरा मधून आज जन आशीर्वाद यात्रेचा शुभारंभ केला. महाराष्ट्रातील प्रत्येक जिल्ह्यात जाऊन सर्वांचे आशीर्वाद मी घेणार आहे. मला महाराष्ट्र घडवायचा आहे त्यासाठी तुमची साथ हवी आहे! pic.twitter.com/7iip5ViYbq
— Aaditya Thackeray (@AUThackeray) July 18, 2019
ರ್ಯಾಲಿಯ ಪ್ರಾರಂಭದಲ್ಲಿ ಆದಿತ್ಯ ಠಾಕ್ರೆ ಮಾತನಾಡಿ "ಇಂದು ಶಿವಸೇನೆಯನ್ನು ಮಹಾರಾಷ್ಟ್ರದ ಪ್ರತಿಯೊಂದು ಮನೆಗೆ ಕರೆದೊಯ್ಯುವ ಪ್ರಯತ್ನದ ಪ್ರಾರಂಭವಾಗಿದೆ. ಆಗ ಮಾತ್ರ ನಾವು ನವ ಮಹಾರಾಷ್ಟ್ರವನ್ನು ನಿರ್ಮಿಸಬಹುದು. ಶಿವಸೇನೆ ಎಂದರೆ ಯುವಕರು, ರೈತರು ಮತ್ತು ಮಹಿಳೆಯರು. ನಮ್ಮದು ಪರಿಹಾರಗಳನ್ನು ಹುಡುಕುವ ಪಕ್ಷ. ಇದು ನನಗೆ ಮತಗಳನ್ನು ಹುಡುಕುವ ಪ್ರವಾಸವಲ್ಲ. ನನಗೆ ಇದು ತೀರ್ಥಯಾತ್ರೆ. ಹಲವಾರು ವರ್ಷಗಳಿಂದ ನನ್ನ ತಂದೆ ಮತ್ತು ಅಜ್ಜನಿಂದ ಪರಿಹಾರಗಳನ್ನು ಪಡೆಯುವುದು ಹೇಗೆ ಎನ್ನುವುದನ್ನು ನಾನು ಕಲಿತಿದ್ದೇನೆ ಎಂದರು.
ಜಲ್ಗಾಂವ್‌ನಲ್ಲಿ ಸ್ಥಳೀಯ ಶಾಸಕ ಕಿಶೋರ್ ಪಾಟೀಲ್ ಅವರು ಮಾತನಾಡುತ್ತಾ 'ನಾವು ಆದಿತ್ಯ ಠಾಕ್ರೆ ಅವರನ್ನು ರಾಜ್ಯದ ಮುಖ್ಯಮಂತ್ರಿಯಾಗಿ ನೋಡಲು ಬಯಸುತ್ತೇವೆ' ಎಂದು ಘೋಷಿಸಿದರು. ಆ ಮೂಲಕ ಈ ಯಾತ್ರೆಯ ಮೂಲ ಉದ್ದೇಶವನ್ನು ಅವರು ಸಾಧರುಪಡಿಸಿದರು.