1983, 2011, 2003ರ ಅಂಕಿಅಂಶಗಳ ಪ್ರಕಾರ ವಿಶ್ವಕಪ್ ಫೈನಲ್’ನಲ್ಲಿ ಟಾಸ್ ವೇಳೆ ಹೀಗಾದರೆ ಭಾರತಕ್ಕೆ ಅದೃಷ್ಟ!

World Cup 2023 final: ಈ ಬಾರಿಯ ಸ್ಪರ್ಧೆ ಕುತೂಹಲದಿಂದ ಕೂಡಿದೆ. ಆದರೆ, ಈ ಪಂದ್ಯದಲ್ಲಿ ಟಾಸ್ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಲಾಗುತ್ತಿದೆ. ಈ ಪಂದ್ಯದಲ್ಲಿ ಇಬ್ಬನಿಯ ಪಾತ್ರವೂ ಸಾಕಷ್ಟು ಚೆನ್ನಾಗಿ ಕಾಣಿಸಲಿದೆ. ಇಬ್ಬನಿ ಬೀಳುತ್ತಿರುವುದರಿಂದ ಬ್ಯಾಟಿಂಗ್ ಕಷ್ಟವಾಗಲಿದೆ.

Written by - Bhavishya Shetty | Last Updated : Nov 19, 2023, 12:18 PM IST
    • ವಿಶ್ವದಾದ್ಯಂತ ಅಭಿಮಾನಿಗಳು ಭಾರತ ಟ್ರೋಫಿ ಗೆಲ್ಲಲಿ ಎಂದು ಹಾರೈಸುತ್ತಿದ್ದಾರೆ.
    • ಭಾರತವು 1983 ಮತ್ತು 2011 ರಲ್ಲಿ ಎರಡು ಬಾರಿ ವಿಶ್ವಕಪ್ ಗೆದ್ದಿದೆ
    • ಏಕದಿನ ಕ್ರಿಕೆಟ್‌ನ ಇತಿಹಾಸದಲ್ಲಿ 30 ಪಂದ್ಯಗಳ ಪೈಕಿ 17ರಲ್ಲಿ ಟಾಸ್ ಗೆದ್ದ ತಂಡವೇ ಗೆದ್ದಿದೆ
1983, 2011, 2003ರ ಅಂಕಿಅಂಶಗಳ ಪ್ರಕಾರ ವಿಶ್ವಕಪ್ ಫೈನಲ್’ನಲ್ಲಿ ಟಾಸ್ ವೇಳೆ ಹೀಗಾದರೆ ಭಾರತಕ್ಕೆ ಅದೃಷ್ಟ!  title=
world cup 2023 final

World Cup 2023 final: 2023ರ ವಿಶ್ವಕಪ್‌’ನ ಅಂತಿಮ ಪಂದ್ಯ ಇಂದು ಅಹಮದಾಬಾದ್‌’ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಭಾರತವು ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಸದ್ಯ ವಿಶ್ವದಾದ್ಯಂತ ಅಭಿಮಾನಿಗಳು ಭಾರತ ಟ್ರೋಫಿ ಗೆಲ್ಲಲಿ ಎಂದು ಹಾರೈಸುತ್ತಿದ್ದಾರೆ. ಭಾರತವು 1983 ಮತ್ತು 2011 ರಲ್ಲಿ ಎರಡು ಬಾರಿ ವಿಶ್ವಕಪ್ ಗೆದ್ದಿದ್ದರೆ, ಆಸ್ಟ್ರೇಲಿಯಾ ತಂಡವು ಈ ವಿಷಯದಲ್ಲಿ ಭಾರತವನ್ನು ಹಿಂದಿಕ್ಕಿ ಐದು ಬಾರಿ ಚಾಂಪಿಯನ್ ಆಗಿದೆ. 1987, 1999, 2003, 2007 ಮತ್ತು 2015ನೇ ಇಸವಿಯಲ್ಲಿ ಜಯ ದಾಖಲಿಸಿದೆ.

 ಇದನ್ನೂ ಓದಿ: “ವಿಶ್ವಕಪ್ ಟ್ರೋಫಿ ಗೆಲ್ಲೋದು ಇದೇ ಶ್ರೇಷ್ಠ ತಂಡ”- ಟಾಸ್’ಗೂ ಮುನ್ನ ಭವಿಷ್ಯ ನುಡಿದ ರಿಕಿ ಪಾಂಟಿಂಗ್

ಈ ಬಾರಿಯ ಸ್ಪರ್ಧೆ ಕುತೂಹಲದಿಂದ ಕೂಡಿದೆ. ಆದರೆ, ಈ ಪಂದ್ಯದಲ್ಲಿ ಟಾಸ್ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಲಾಗುತ್ತಿದೆ. ಈ ಪಂದ್ಯದಲ್ಲಿ ಇಬ್ಬನಿಯ ಪಾತ್ರವೂ ಸಾಕಷ್ಟು ಚೆನ್ನಾಗಿ ಕಾಣಿಸಲಿದೆ. ಇಬ್ಬನಿ ಬೀಳುತ್ತಿರುವುದರಿಂದ ಬ್ಯಾಟಿಂಗ್ ಕಷ್ಟವಾಗಲಿದೆ. ಅಹಮದಾಬಾದ್‌ನಲ್ಲಿ ಟಾಸ್‌ ದಾಖಲೆ ಅಚ್ಚರಿ ಮೂಡಿಸಿದೆ. ಕಳೆದ 12 ಆವೃತ್ತಿಯ ವಿಶ್ವಕಪ್‌’ನಲ್ಲಿ ಟಾಸ್‌ ಮಹತ್ವದ ಪಾತ್ರ ವಹಿಸಿದೆ.

ಅಹಮದಾಬಾದ್‌’ನಲ್ಲಿ ಟಾಸ್‌’ನ ಪಾತ್ರ:

ಇದು 13ನೇ ಆವೃತ್ತಿಯ ವಿಶ್ವಕಪ್ ಆಗಿದ್ದು, ಪ್ರಸ್ತುತ ಈ ಆವೃತ್ತಿಯಲ್ಲಿ 47 ಪಂದ್ಯಗಳು ನಡೆದಿವೆ. ಅಹಮದಾಬಾದ್‌’ನಲ್ಲಿ 2023 ರ ವಿಶ್ವಕಪ್‌’ನಲ್ಲಿ ಒಟ್ಟು ನಾಲ್ಕು ಪಂದ್ಯಗಳನ್ನು ಆಡಲಾಗಿದೆ. ಮತ್ತು ಪ್ರಸ್ತುತ ಪಂದ್ಯಾವಳಿಯಲ್ಲಿ ಈ ಮೈದಾನದಲ್ಲಿ ಟಾಸ್ ಯಾವುದೇ ಪ್ರಮುಖ ಪಾತ್ರವನ್ನು ವಹಿಸಿಲ್ಲ. ಎರಡು ಪಂದ್ಯಗಳಲ್ಲಿ, ಟಾಸ್ ಗೆದ್ದ ತಂಡ ಗೆದ್ದಿದ್ದರೆ, ಇನ್ನೆರಡು ಪಂದ್ಯಗಳಲ್ಲಿ ಟಾಸ್ ಗೆದ್ದ ತಂಡ ಎರಡು ಬಾರಿ ಸೋತಿದೆ.

ಅಹಮದಾಬಾದ್‌’ನಲ್ಲಿ ನಡೆದ ಏಕದಿನ ಕ್ರಿಕೆಟ್‌ನ ಇತಿಹಾಸದಲ್ಲಿ 30 ಪಂದ್ಯಗಳ ಪೈಕಿ 17ರಲ್ಲಿ ಟಾಸ್ ಗೆದ್ದ ತಂಡವೇ ಗೆದ್ದಿದೆ. 16 ಬಾರಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ತಂಡಗಳು ಒಂಬತ್ತು ಪಂದ್ಯಗಳನ್ನು ಗೆದ್ದಿವೆ. ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಕ್ರಿಕೆಟ್ ತಂಡ 14 ಪಂದ್ಯಗಳಲ್ಲಿ ಎಂಟರಲ್ಲಿ ಗೆದ್ದಿದೆ.

 ಇದನ್ನೂ ಓದಿ: Gruha Lakshmi scheme: ಮೈಸೂರಿನ ಚಾಮುಂಡೇಶ್ವರಿ ದೇವಿಗೂ ಪ್ರತಿ ತಿಂಗಳು ₹2,000

ಅಂದಹಾಗೆ ವಿಶ್ವಕಪ್ ಫೈನಲ್‌’ನಲ್ಲಿ ಟಾಸ್ ಸೋತಿರುವುದು ಭಾರತಕ್ಕೆ ಶುಭ ತಂದಿದೆ. 1983ರ ಫೈನಲ್ ಅಥವಾ 2011ರ ಫೈನಲ್ ಆಗಿರಲಿ, ಟಾಸ್ ಸೋತ ನಂತರ ಇಬ್ಬರು ಭಾರತೀಯ ನಾಯಕರು ಮಾತ್ರ ಟ್ರೋಫಿ ಎತ್ತಿ ಹಿಡಿದಿದ್ದರು. 2003ರ ವಿಶ್ವಕಪ್‌’ನ ಅಂತಿಮ ಟಾಸ್ ಗೆದ್ದಿದ್ದ ತಂಡ ಸೌರವ್ ಗಂಗೂಲಿ ನಾಯಕತ್ವದಲ್ಲಿ ಪಂದ್ಯವನ್ನು ಸೋತಿತ್ತು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News