ನವದೆಹಲಿ: ಸಾಮಾಜಿಕ ಮಾಧ್ಯಮಗಳಲ್ಲಿ ಮುಸ್ಲಿಮರ ವಿರುದ್ಧವಾಗಿ ಪೋಸ್ಟ್ ಮಾಡಿದ್ದಕ್ಕೆ ಆಕೆ ಮೇಲೆ ಪ್ರಕರಣ ದಾಖಲಿಸಲಾಗಿತ್ತು, ಈ ಹಿನ್ನಲೆಯಲ್ಲಿ ಆಕೆ ಜಾಮೀನು ನೀಡಲು ರಾಂಚಿ ಕೋರ್ಟ್ ಕುರಾನ್ ಧರ್ಮಗ್ರಂಥದ ಪ್ರತಿಗಳನ್ನು ವಿತರಿಸಬೇಕೆಂದು ಆದೇಶ ನೀಡಿತ್ತು. ಆದರೆ ಈಗ ಅವರು ಸ್ಥಳೀಯ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಜಾರ್ಖಂಡ್ ಹೈಕೋರ್ಟ್ ಗೆ ಮೊರೆಹೋಗಿದ್ದಾರೆ.
ಪ್ರಥಮ ದರ್ಜೆ ನ್ಯಾಯಾಲಯ ನ್ಯಾಯಾದೀಶರಾದ ಮನೀಶ್ ಕುಮಾರ್ ಸಿಂಗ್ ಅವರು ರಿಚಾಗೆ ಕರಾರು ಸಹಿತ ಜಾಮಿನನ್ನು ನೀಡಿದ್ದರು. ಅದರಲ್ಲಿ ಪ್ರಮುಖವಾಗಿ ಆಕೆ ಕುರಾನಿನ ಐದು ಪ್ರತಿಗಳನ್ನು ವಿತರಿಸಬೇಕು ಮತ್ತು ಪೋಲೀಸರ ಸಮ್ಮುಖದಲ್ಲಿ ಸ್ಥಳೀಯ ಅಂಜುಮನ್ ಕಮೀಟಿಗೆ ಒಂದು ಕುರಾನ್ ಪ್ರತಿಯನ್ನು ವಿತರಿಸಬೇಕು ಎಂದು ಕೋರ್ಟ್ ಆದೇಶ ನೀಡಿತ್ತು.
ರಿಚಾ ಭಾರ್ತಿ 19 ವರ್ಷದ ಬಿಕಾಂ ವಿದ್ಯಾರ್ಥಿನಿ, ಜುಲೈ 12 ರಂದು ಫೇಸ್ ಬುಕ್ ನಲ್ಲಿ ಮುಸ್ಲಿಂ ವಿರೋಧಿ ಪೋಸ್ಟ್ ಗಳನ್ನೂ ಶೇರ್ ಮಾಡಿದ್ದಕ್ಕೆ ಮುಸ್ಲಿಂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಅಂಜುಮನ್ ಕಮೀಟಿ ಅವರ ವಿರುದ್ಧ ದೂರು ನೀಡಿತ್ತು. ಈ ಹಿನ್ನಲೆಯಲ್ಲಿ ಈ ವಿದ್ಯಾರ್ಥಿನಿಯನ್ನು ಬಂಧಿಸಲಾಗಿತ್ತು.
ಈಗ ಸ್ಥಳೀಯ ನ್ಯಾಯಾಲಯದ ಆದೇಶದ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ರಿಚಾ 'ಇಂದು ಅವರು ಕುರಾನ್ ಗ್ರಂಥವನ್ನು ವಿತರಿಸಲು ಹೇಳುತ್ತಾರೆ. ಮುಂದೆ ಅವರು ಇಸ್ಲಾಂಗೆ ಸೇರಲು ಹೇಳುತ್ತಾರೆ. ಮುಸ್ಲಿಂರು ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುತ್ತಾರೆ, ಅವರಿಗೆ ಎಂದಾದರು ರಾಮಾಯಣ ಅಥವಾ ಹನುಮಾನ ಚಾಲಿಸಾವನ್ನು ಹಿಂದೂ ಧರ್ಮವನ್ನು ಅವಮಾನಿಸಿದ್ದಕ್ಕೆ ಎಂದಾದರೂ ಹೇಳಿಸಲಾಗಿದೆಯೇ? ಎಂದು ಅವರು ಪ್ರಶ್ನಿಸಿದರು.