ನವದೆಹಲಿ: ದೇಶದ ಪ್ರಮುಖ ನಗರಗಳ ಇಂದಿನ ಪೆಟ್ರೋಲ್ ಬೆಲೆಯಲ್ಲಿ ಏರಿಕೆಯಾಗಿದ್ದು, ಡೀಸೆಲ್ ಬೆಲೆ ಸ್ಥಿರವಾಗಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಭಾನುವಾರ ಪೆಟ್ರೋಲ್ ಬೆಲೆ 73.08ರೂ., ಡೀಸೆಲ್ ಬೆಲೆ 66.24ರೂ. ಇದೆ. ಈ ದರವು ಇಂದು ಬೆಳಿಗ್ಗೆ 6 ಗಂಟೆಯಿಂದ ನಾಳೆ ಬೆಳಿಗ್ಗೆ 6 ಗಂಟೆಯವರೆಗೆ ಅನ್ವಯವಾಗಲಿದೆ.
ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ ನವದೆಹಲಿಯಲ್ಲಿ 73.08 ರೂ., ಕೊಲ್ಕತ್ತಾದಲ್ಲಿ 75.38 ರೂ., ಮುಂಬೈನಲ್ಲಿ 78.69 ರೂ, ಚೆನ್ನೈನಲ್ಲಿ 75.89 ರೂ., ಬೆಂಗಳೂರಿನಲ್ಲಿ 75.50 ರೂ., ಹೈದರಾಬಾದ್ ನಲ್ಲಿ 77.61 ರೂ ಹಾಗೂ ತಿರುವನಂತಪುರಂನಲ್ಲಿ 76.21 ರೂ. ಇದೆ.
ಡೀಸೆಲ್ ಬೆಲೆ ಪ್ರತಿ ಲೀಟರ್ಗೆ ನವದೆಹಲಿಯಲ್ಲಿ 66.24 ರೂ., ಕೊಲ್ಕತ್ತಾದಲ್ಲಿ 68.31 ರೂ., ಮುಂಬೈನಲ್ಲಿ 69.43 ರೂ, ಚೆನ್ನೈನಲ್ಲಿ 69.96 ರೂ., ಬೆಂಗಳೂರಿನಲ್ಲಿ 68.43 ರೂ., ಹೈದರಾಬಾದ್ ನಲ್ಲಿ 72.14 ರೂ ಹಾಗೂ ತಿರುವನಂತಪುರಂನಲ್ಲಿ 71.04 ರೂ. ಇದೆ.
ಕ್ರಿಯಾತ್ಮಕ ಬೆಲೆ ಯೋಜನೆ ಅಡಿಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲದ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತಿದೆ.