Bigg Boss Kannada: ಬಿಗ್ ಬಾಸ್ ಮನೆಯಲ್ಲಿ ಸಹನಾಮೂರ್ತಿಯಂತಿದ್ದ ಪ್ರತಾಪ್ ಇದೀಗ ತಮ್ಮ ಅಸಲಿ ಆಟ ಶುರುಮಾಡಿದ್ದಾರೆ.. ಮನೆಗೆ ಕಾಲಿಟ್ಟಾಗ ಟ್ರೋಲ್‌ಗಳ ಮೂಲಕ ಹೈಲೈಟ್ ಆಗಿದ್ದ ಡ್ರೋನ್ ಇದೀಗ ಅಭಿಮಾನಿಗಳ ಬೆಂಬಲದಿಂದ ಸಖತ್ ಹೈಲೈಟ್ ಆಗುತ್ತಿದ್ದಾರೆ.. ಆದರೆ ಇದೇ ವೇಳೆ ಡ್ರೋನ್ ಪ್ರತಾಪ್ ಇನ್‌ಸ್ಟಾಗ್ರಾಮ್ ಪೋಸ್ಟ್‌ವೊಂದು ಭಾರೀ ವೈರಲ್ ಆಗುತ್ತಿದೆ..
ಸದ್ಯ ಬಿಗ್ ಬಾಸ್ ಮನೆಯಲ್ಲಿ ಇವರ ಮುಗ್ಧತೆಯನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.. ಮನೆಯಲ್ಲಿ ಉತ್ತಮ ಮತ್ತು ಸೈಲೆಂಟ್ ಸ್ಪರ್ಧಿ ಎನಿಸಿಕೊಂಡಿದ್ದಾರೆ,... ಅಲ್ಲದೇ ಇವರೇ ವಿನ್ ಆಗಬೇಕು ಎಂದು ಎಷ್ಟೋ ಕೂಗುಗಳು ಕೇಳಿ ಬರುತ್ತಿವೆ.. ಹಲವರು ಇವರ ಹೆಸರಿನ ಫ್ಯಾನ್ ಪೇಜ್ ತೆಗೆದು ಅವರ ಬೆಂಬಲಕ್ಕೆ ನಿಂತಿದ್ದಾರೆ.. ಇದೆಲ್ಲದರ ನಡುವೆ ಮೋಸ ನಡೆಯುತ್ತಿರುವ ಕುರಿತು ಡ್ರೋನ್ ಪ್ರತಾಪ್ ಅವರ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಪೋಸ್ಟ್‌ವೊಂದನ್ನು ಶೇರ್ ಮಾಡಲಾಗಿದೆ..
ಇದನ್ನೂ ಓದಿ-ಘೋಸ್ಟ್ ನಂತರ ಶ್ರೀನಿಯ ಮುಂದಿನ ಚಿತ್ರ..? ಘೋಸ್ಟ್-2 ಅಥವಾ ಬೀರ್‌ಬಲ್-2..!
ಬಿಗ್ ಬಾಸ್ ಮನೆಯಲ್ಲಿ ಮೊಬೈಲ್ ಬಳಕೆ ನಿಷೇಧ ಹೇಗೆ ಇದೆಲ್ಲ ಸಾಧ್ಯ ಎಂದರೆ ಬಿಗ್‌ಬಾಸ್ ಸ್ಪರ್ಧಿಗಳ ಸ್ನೇಹಿತರು ಇಲ್ಲವೇ ಅವರ ಕುಟುಂಬಸ್ಥರು ಯಾರಾದರು ಅವರ ಪರವಾಗಿ ಪೋಸ್ಟ್ ಶೇರ್ ಮಾಡುವುದು ಹಾಗೆಯೇ ಮಾಹಿತಿ ಹಂಚಿಕೊಳ್ಳುತ್ತಿರುತ್ತಾರೆ.. ಅದೇ ರೀತಿ ಡ್ರೋನ್ ಪ್ರತಾಪ್ ಅವರ ಇನ್‌ಸ್ಟಾಗ್ರಾಮ್ ಖಾತೆಯಿಂದಲೂ ಪೋಸ್ಟ್ ಒಂದನ್ನು ಶೇರ್ ಮಾಡಲಾಗಿದ್ದು, ಅದರಲ್ಲಿ ಪ್ರತಾಪ್ "ಸ್ನೇಹಿತರೇ ನಾವು ನಮ್ಮ ಖಾತೆಯಿಂದಾಗಲಿ ಹಾಗೂ ಅಧಿಕೃತ ಫ್ಯಾನ್ ಪೇಜ್ನಿಂದ ಯಾವುದೇ ರೀತಿಯ Paid promotion ಅಥವಾ Paid Collabaration ಮಾಡುತ್ತಿಲ್ಲ... ಕೆಲವು Fan page ಗಳಲ್ಲಿ ಈ ರೀತಿಯ ನಡವಳಿಕೆ ಕಂಡು ಬಂದಿದೆ. ಕೆಲವರು ನಮಗೆ ಇದರ ಬಗ್ಗೆ ಮಾಹಿತಿ ನೀಡಿದ್ದು, ಆದ್ದರಿಂದ ನೀವುಗಳು ಮೋಸ ಹೋಗಬೇಡಿ. ಅದಕ್ಕೆ ನಾವು ಹೊಣೆಯಾಗಿರುವುದಿಲ್ಲ. ಅಂಥ ಖಾತೆಗಳನ್ನು ನೀವುಗಳು Report ಮಾಡಬಹುದು" ಎಂದು ಪೋಸ್ಟ್ ಮಾಡಿ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ-ʼಕೆಂಡʼದ ಅಖಾಡಕ್ಕಿಳಿದು ದಾಖಲೆ ಬರೆದರಾ ರೂಪಾ ರಾವ್..?
ಸಾಮಾಜಿಕ ಜಾಲತಾಣಗಳ ದುರ್ಬಳಕೆ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಯಾರು ಫೇಮಸ್ ಆದರೂ ಅವರ ಹಸರಿನಿಂದ ಖಾತೆ ತೆಗೆದು ಹಣ ಕೇಳುವ ದಂಧೆ ಇಲ್ಲವೇ ಅಲ್ಲದೇ ಇನ್ನಿತರ ಚಟುವಟಿಗಳನ್ನು ನಡೆಸಲಾಗುತ್ತಿದೆ.. ಅದೇ ರೀತಿ ಡ್ರೋನ್ ಪ್ರತಾಪ್ ಅವರಿಗೂ ಆಗಿರುವುದಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ..
ಇನ್ನು ಈ ಪೋಸ್ಟ್‌ಗೆ ಸಾವಿರಾರು ಕಾಮೆಂಟ್‌ಗಳು ಸುರಿಯುತ್ತಿವೆ.. ಅದರಲ್ಲಿ ಬಹುತೇಕರು.. ನಿಮ್ಮೊಂದಿಗೆ ನಾವಿದ್ದೇವೆ.. ಡ್ರೋನ್ ಪ್ರತಾಪ್ ಜೈ ಎಂದು ಅಭಿಮಾನದ ಜೊತೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.