ನವದೆಹಲಿ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಬಟ್ಟೆ ವ್ಯಾಪಾರಿಯ ಮಗನ ಸಾವಿನ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಜವಳಿ ಉದ್ಯಮಿ ಮನೀಶ್ ಕನೋಡಿಯಾ ಅವರ ಪುತ್ರ 17 ವರ್ಷದ ಕುಶಾಗ್ರಾ ಮೃತದೇಹ ಫಜಲ್ಗಂಜ್ನ ಅಪಾರ್ಟ್ಮೆಂಟ್ನಲ್ಲಿ ಪತ್ತೆಯಾಗಿದೆ. ಬಳಿಕ ಪೊಲೀಸರು ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಒಟ್ಟಾರೆಯಾಗಿ, 17 ವರ್ಷದ ಮಗುವನ್ನು ಅಪಹರಿಸಿ ನಂತರ ಹತ್ಯೆಗೈದಿರುವ ಪ್ರಕರಣವು ತುಂಬಾ ವಿಷಾಧಕರವಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ತಮ್ಮ ಮಗು ಕೋಚಿಂಗ್ನಿಂದ ಹಿಂತಿರುಗಿಲ್ಲ ಮತ್ತು ಅವರಿಗೆ ಸುಲಿಗೆ ಪತ್ರ ಸಿಕ್ಕಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ, ಬಳಿಕ ಪೊಲೀಸ್ ಅಧಿಕಾರಿಗಳು ಪ್ರಕರಣದ ಸಂಪೂರ್ಣ ತನಿಖೆಯಲ್ಲಿ ನಿರತರಾಗಿದ್ದಾರೆ. (Crime News In Kannada)
ಶಿಕ್ಷಕಿ ಮತ್ತು ಆಕೆಯ ಭಾವಿ ಪತಿ ಮೇಲೆ ಅನುಮಾನ
ವಾಸ್ತವದಲ್ಲಿ, ಈ ವಿಷಯದಲ್ಲಿ ಅತ್ಯಂತ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಕುಶಾಗ್ರಾಗೆ ಟ್ಯೂಷನ್ ಹೇಳಿಕೊಡುವ ಟೀಚರ್ ಮತ್ತು ಆಕೆಯ ಭಾವಿ ಪತಿಯನ್ನು ಅನುಮಾನಿಸಲಾಗಿದೆ. ಕುಶಾಗ್ರಗೆ ರಚಿತಾ ಹೆಸರಿನ ಟೀಚರಮ್ಮ ಟ್ಯೂಷನ್ ಹೇಳಿಕೊಡುತ್ತಿದ್ದಳು. ರಚಿತಾಳ ಭಾವಿ ವರ ಪ್ರಭಾತ್ ಮತ್ತು ಆತನ ಸ್ನೇಹಿತ ಅಂಕಿತ್ ಸೇರಿ ಕುಶಾಗ್ರ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸಿಸಿಟಿವಿಯಲ್ಲಿ ಸಿಕ್ಕಿರುವ ದೃಶ್ಯಾವಳಿಗಳಿಂದ ಪ್ರಭಾತ್ ರಚಿತಾ ಮೂಲಕ ಕುಶಾಗ್ರಗೆ ಕರೆ ಮಾಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಕುಶಾಗ್ರನನ್ನು ಪ್ರಭಾತ್ ಹಿಂಬಾಲಿಸುತ್ತಿರುವುದು ಸಿಸಿಟಿವಿಯಲ್ಲಿ ಕಂಡುಬಂದಿದೆ.
ಇದನ್ನೂ ಓದಿ-ಅರ್ಧ ಗಂಟೆ ಒದ್ದಾಡಿ ಜೀವ ತೊರೆದ ಸ್ವಿಸ್ ಮಹಿಳೆ, ಪೊಸ್ಟ್ ಮಾರ್ಟಮ್ ವರದಿಯಲ್ಲಿ ಬೆಚ್ಚಿ ಬೀಳಿಸುವ ಮಾಹಿತಿ ಬಹಿರಂಗ!
ಸುಲಿಗೆ ಪತ್ರವನ್ನು ಮನೆಗೆ ಕಳುಹಿಸಲಾಗಿದೆ
ಇದರ ನಂತರ, ಪ್ರಭಾತ್ ಕುಶಾಗ್ರನನ್ನು ತನ್ನ ಮನೆಗೆ ಕರೆದುಕೊಂಡು ಹೋಗುತ್ತಾನೆ ಮತ್ತು ಪ್ರಭಾತ್ ಮತ್ತು ಅಂಕಿತ್ ಇಬ್ಬರೂ ಹೋಗುತ್ತಿರುವುದನ್ನು ಗಮನಿಸಲಾಗಿದೆ ಮತ್ತು ಈ ಘಟನೆಯು 4:30 ಮತ್ತು 5:15 ರ ನಡುವೆ ಸಂಭವಿಸಿದೆ. ಘಟನೆಯ ನಂತರ ಪ್ರಭಾತ್ ಮತ್ತೊಂದು ಕೋಣೆಗೆ ಹೋಗಿ ಶರ್ಟ್ ಬದಲಿಸಿ ಘಟನೆ ನಡೆಸಿದ ನಂತರ ಪೊಲೀಸರ ದಿಕ್ಕು ತಪ್ಪಿಸುವ ಸಲುವಾಗಿ ಮನೆಗೆ ಸುಲಿಗೆ ಪತ್ರ ಕಳುಹಿಸಲಾಗಿದೆ.
ಇದನ್ನೂ ಓದಿ-ಡಾರ್ಕ್ ವೆಬ್ನಲ್ಲಿ ಮಾರಾಟವಾಗಿದೆಯಂತೆ 815 ಮಿಲಿಯನ್ ಭಾರತೀಯರ ವೈಯಕ್ತಿಯ ಮಾಹಿತಿ: ವರದಿ
ಆರೋಪಿ ಪ್ರಭಾತ್ ತಪ್ಪೊಪ್ಪಿಕೊಂಡಿದ್ದಾನೆ
ಪ್ರಸ್ತುತ, ಕಾನ್ಪುರ ಪೊಲೀಸ್ ಅಧಿಕಾರಿಗಳು ಈ ಸಂಪೂರ್ಣ ಪ್ರಕರಣದ ತೀವ್ರ ತನಿಖೆ ನಡೆಸುತ್ತಿದ್ದಾರೆ. ಘಟನೆ ಸಂಬಂಧ ಎಲ್ಲರ ವಿಚಾರಣೆ ನಡೆಸಲಾಗುತ್ತಿದೆ. ರಚಿತಾ ವಿಚಾರಣೆ ವೇಳೆ ಪ್ರಭಾತ್ ಹೆಸರು ಕೂಡ ಕೇಳಿ ಬಂದಿತ್ತು. ನಂತರ ಇಬ್ಬರನ್ನೂ ಮುಖಾಮುಖಿ ಕೂರಿಸಿ ವಿಚಾರಣೆ ನಡೆಸಲಾಯಿತು. ವಿಚಾರಣೆ ವೇಳೆ ಆರೋಪಿ ಪ್ರಭಾತ್ ಶಿಕ್ಷಕಿ ಹಾಗೂ ಕುಶಾಗ್ರನ ಅಕ್ರಮ ಸಂಬಂಧದ ಶಂಕೆಯ ಹಿನ್ನೆಲೆ ಹತ್ಯೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ, ಈ ಸಂಪೂರ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶೀಘ್ರದಲ್ಲೇ ಅಂತಿಮ ವರದಿಯನ್ನು ಸಲ್ಲಿಸುವ ಸಾಧ್ಯತೆ ಇದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.