ಬೆಂಗಳೂರು: ಬಿಜೆಪಿ ಸಾಕಿದ ರಣಹದ್ದುಗಳು ಈಗಲೂ ಕಾರ್ಯಾಚರಣೆ ನಡೆಸಿವೆ. ಆದರೆ ಅವುಗಳನ್ನು ನಮ್ಮ ಸರ್ಕಾರ ಹೆಡೆಮುರಿ ಕಟ್ಟಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ. ಈ ಬಗ್ಗೆ ಸೋಮವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ‘PSI ಅಕ್ರಮ ನಡೆಸಿದ್ದವರೇ ಈಗ ಕೆಇಎ ಪರೀಕ್ಷೆಯ ಅಕ್ರಮದಲ್ಲೂ ಭಾಗಿಯಾಗಿದ್ದಾರೆ, ನಮ್ಮ ಸರ್ಕಾರ ತಕ್ಷಣಕ್ಕೆ ಅಕ್ರಮವನ್ನು ಬಯಲಿಗೆಳೆದು ಸ್ಪಷ್ಟ ಸಂದೇಶ ನೀಡಿದೆ’ ಎಂದು ಹೇಳಿದೆ.
ಬಿಜೆಪಿ ಸರ್ಕಾರವಾಗಿದ್ದಿದ್ದರೆ, ಅಕ್ರಮ ನಡೆದೇ ಇಲ್ಲ ಎಂದು ಸಮರ್ಥಿಸುತ್ತಿತ್ತು, ಆರೋಪಿಗಳ ಜೊತೆಗೆ ಬಿಜೆಪಿಗರೂ ಕೈಜೋಡಿಸಿರುತ್ತಿದ್ದರು ಮತ್ತು ಹಗರಣ ಹೊರಬಂದಮೇಲೆ ಆರೋಪಿಗಳನ್ನು ಬಂಧಿಸಲು ಮೀನಮೇಷ ಎಣಿಸುತ್ತಿತ್ತು. ಆದರೆ ನಮ್ಮ ಸರ್ಕಾರ ಯಾವುದೇ ಅಕ್ರಮಗಳನ್ನು ಸಹಿಸುವುದಿಲ್ಲ’ವೆಂದು ಕಾಂಗ್ರೆಸ್ ಖಡಕ್ ಸೂಚನೆ ನೀಡಿದೆ.
ಬಿಜೆಪಿ ಸಾಕಿದ ರಣಹದ್ದುಗಳು ಈಗಲೂ ಕಾರ್ಯಾಚರಣೆ ನಡೆಸಿವೆ. ಆದರೆ ಅವುಗಳನ್ನು ನಮ್ಮ ಸರ್ಕಾರ ಹೆಡೆಮುರಿ ಕಟ್ಟಿದೆ.
PSI ಅಕ್ರಮ ನಡೆಸಿದ್ದವರೇ ಈಗ ಕೆಇಎ ಪರೀಕ್ಷೆಯ ಅಕ್ರಮದಲ್ಲೂ ಭಾಗಿಯಾಗಿದ್ದಾರೆ, ನಮ್ಮ ಸರ್ಕಾರ ತಕ್ಷಣಕ್ಕೆ ಅಕ್ರಮವನ್ನು ಬಯಲಿಗೆಳೆದು ಸ್ಪಷ್ಟ ಸಂದೇಶ ನೀಡಿದೆ.
ಬಿಜೆಪಿ ಸರ್ಕಾರವಾಗಿದ್ದಿದ್ದರೆ,
◆ಅಕ್ರಮ ನಡೆದೇ ಇಲ್ಲ ಎಂದು…— Karnataka Congress (@INCKarnataka) October 30, 2023
ಇದನ್ನೂ ಓದಿ: ಅರಣ್ಯ ಇಲಾಖೆ ಅಧಿಕಾರಿಗಳಿಗೆ ಲೋಕಾ ಅಧಿಕಾರಿಗಳ ಶಾಕ್
ಬಿಜೆಪಿ ಸಂಸದರಿಗೆ ಧೈರ್ಯವಿಲ್ಲ!
‘ರಾಜ್ಯಕ್ಕೆ "ಕರ್ನಾಟಕ"ದ ನಾಮಕರಣವಾಗಿ 50 ವರ್ಷ ಸಂದಿದೆ, 50ನೇ ವರ್ಷದ ಸಂಭ್ರಮದಲ್ಲಿದ್ದೇವೆ. ಆದರೆ, ಕೇಂದ್ರ ಸರ್ಕಾರಕ್ಕೆ ನಾಡಧ್ವಜದ ಮಾನ್ಯತೆಗಾಗಿ ಪ್ರಸ್ತಾವನೆ ಸಲ್ಲಿಸಿ 6 ವರ್ಷ ಕಳೆದರೂ ಕೇಂದ್ರ ಸರ್ಕಾರದ ಸಣ್ಣ ಸ್ಪಂದನೆಯೂ ಇಲ್ಲ. ದಿನಕ್ಕೆ 18 ಗಂಟೆ ಕೆಲಸ ಮಾಡುತ್ತೇನೆ ಎನ್ನುವ ಪ್ರಧಾನಿ ಮೋದಿಯವರಿಗೆ ಇದಕ್ಕೆ ಸಮಯ ಸಿಗಲಿಲ್ಲವೇ? ಬಿಜೆಪಿ ಸಂಸದರಿಗೆ ನಾಡು, ನುಡಿಯ ವಿಚಾರದಲ್ಲಿ ದನಿ ಎತ್ತುವ ಕನಿಷ್ಠ ಧೈರ್ಯವೂ ಇಲ್ಲ, ಕಾಳಜಿಯೂ ಇಲ್ಲ. ಕರ್ನಾಟಕದ ಅಸ್ಮಿತೆಯ ಬಗ್ಗೆ ಕೇಂದ್ರ ಸರ್ಕಾರ ದ್ವೇಷ ಹಾಗೂ ನಿರ್ಲಕ್ಷ್ಯದ ಭಾವನೆ ಹೊಂದಿದೆ. ಇದಕ್ಕೆ ಕನ್ನಡಿಗರು ತಕ್ಕ ಉತ್ತರ ನೀಡಲಿದ್ದಾರೆ’ ಎಂದು ಕಾಂಗ್ರೆಸ್ ಟೀಕಿಸಿದೆ.
ಇದನ್ನೂ ಓದಿ: ಡಿಕ್ಕಿಗೆ ಹಳಿ ತಪ್ಪಿದ 3 ಪ್ಯಾಸೆಂಜರ್ ಬೋಗಿಗಳು
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.