ಕುತೂಹಲ ಕೆರಳಿಸಿದ ಎಚ್.ವಿಶ್ವನಾಥ್ ನಡೆ

ಇತ್ತೀಚೆಗೆ ಇಬ್ಬರು ಕಾಂಗ್ರೆಸ್ ಶಾಸಕರು ಸಲ್ಲಿಸಿದ್ದ ರಾಜೀನಾಮೆಗಳ ಮಧ್ಯೆ ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ಅವರು ಕೆಲವು ಬಿಜೆಪಿ ಸಂಸದರೊಂದಿಗೆ ಸಭೆ ನಡೆಸಿದ್ದು ಈಗ ಸಾಕಷ್ಟು ಕುತೂಹಲ ಕೆರಳಿಸಿದೆ.

Last Updated : Jul 4, 2019, 07:41 AM IST
ಕುತೂಹಲ ಕೆರಳಿಸಿದ ಎಚ್.ವಿಶ್ವನಾಥ್ ನಡೆ   title=
photo:ANI

ಬೆಂಗಳೂರು: ಇತ್ತೀಚೆಗೆ ಇಬ್ಬರು ಕಾಂಗ್ರೆಸ್ ಶಾಸಕರು ಸಲ್ಲಿಸಿದ್ದ ರಾಜೀನಾಮೆಗಳ ಬೆನ್ನಲ್ಲೇ ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ಅವರು ಕೆಲವು ಬಿಜೆಪಿ ಸಂಸದರೊಂದಿಗೆ ಸಭೆ ನಡೆಸಿದ್ದು ಈಗ ಸಾಕಷ್ಟು ಕುತೂಹಲ ಕೆರಳಿಸಿದೆ.

ಎಚ್.ವಿಶ್ವನಾಥ ಅವರು ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಮತ್ತು ತುಮಕೂರು ಜಿಲ್ಲೆಯ ಸಂಸದ ಜಿ.ಎಸ್. ಬಸವರಾಜ್ ಅವರನ್ನು ಲೋಕಸಭಾ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಭೇಟಿ ಮಾಡಿರುವುದು ಈಗ ಮೈತ್ರಿ ಸರ್ಕಾರದಲ್ಲಿ ಹೊಸ ತಲ್ಲಣ ಸೃಷ್ಟಿಸಿದೆ ಎನ್ನಲಾಗಿದೆ. ಈಗ ಈ ಬಗ್ಗೆ ಪ್ರತಿಕ್ರಿಯಿಸಿರುವ ಎಚ್. ವಿಶ್ವನಾಥ್  “ನಾನು ಯಾರನ್ನೂ ಭೇಟಿಯಾಗಲಿಲ್ಲ, ಅವರೇ ನನ್ನನ್ನು ಭೇಟಿಯಾಗಲು ಬಂದರು. ನಾನು ಬಿಜೆಪಿ ನಾಯಕರನ್ನು ಭೇಟಿಯಾದ ಕಾರಣ ನಾನು ಬಿಜೆಪಿಗೆ ಸೇರುತ್ತೇನೆ ಎಂದಲ್ಲ. ಬಿಜೆಪಿಗೆ ಸೇರಲು ಯಾರೂ ನನ್ನನ್ನು ಆಹ್ವಾನಿಸಿಲ್ಲ. ಜೆಡಿ (ಎಸ್) ತ್ಯಜಿಸಬೇಕಾದರೆ ಮೊದಲು ಎಲ್ಲರಿಗೂ ತಿಳಿಸುತ್ತೇನೆ "ಎಂದು ಸುದ್ದಿಗಾರರಿಗೆ ಹೇಳಿದ್ದಾರೆ.

20 ವರ್ಷಗಳ ಹಿಂದೆ ಎಸ್‌ಎಂ ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿಯಾಗಿದ್ದ ವಿಶ್ವನಾಥ್, ಈಗ ಜೆಡಿಎಸ್ ಶಾಸಕರಾಗಿದ್ದಾರೆ. ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರದ ಬಗ್ಗೆ ಅಸಮಧಾನ ಹೊರಹಾಕಿದ ಎಚ್.ವಿಶ್ವನಾಥ “ಈ ಒಕ್ಕೂಟದ ಪ್ರಯೋಗವು ಸಂಪೂರ್ಣವಾಗಿ ವಿಫಲವಾಗಿದೆ. ಅದರಲ್ಲಿ ಕೇವಲ ಗೊಂದಲವೇ ತುಂಬಿದೆ, ಮತ್ತು ಸಮ್ಮಿಶ್ರ ಸರ್ಕಾರವು ರಾಷ್ಟ್ರಮಟ್ಟದಲ್ಲಿ ನಗುವ ಸಂಗತಿಯಾಗಿದೆ. ಇದಕ್ಕೆ ಸಮನ್ವಯ ಸಮಿತಿ (ಸಿದ್ದರಾಮಯ್ಯ) ಮತ್ತು ಸಿಎಂ ಕುಮಾರಸ್ವಾಮಿ ಅವರು ಕಾರಣ "ಎಂದು ವಿಶ್ವನಾಥ್ ತಿಳಿಸಿದರು.

Trending News