Dasara Celebrations: ಸುಮಾರು 15 ಕೆಜಿ ತೂಕದ ಕುರಿಯ ಬೆಲೆ ಸುಮಾರು 20 ಸಾವಿರ ರೂ. ಆಗಿದೆ. ಇನ್ನು ಮೇಕೆ ಬೆಲೆ ಕೂಡ 3 ಸಾವಿರ ರೂ. ನಷ್ಟು ಏರಿಕೆಯಾಗಿದೆ. ಆದರೂ ಕೂಡ ಕುರಿ, ಮೇಕೆ ವ್ಯಾಪಾರಿಗಳು ನಷ್ಟದಲ್ಲಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ ಬೆಲೆಗಳು ಅಷ್ಟೇನೂ ಏರಿಕೆಯಾಗಿಲ್ಲ. ಮೇಕೆ ಮರಿಗಳಿಗೆ 6 ರಿಂದ 7 ಸಾವಿರ ರೂ.ವರೆಗೆ ಬೆಲೆ ಇದ್ದು, ಸುಮಾರು 15 ಕೆಜಿ ತೂಕದ ಮೇಕೆಗಳನ್ನು 15 ಸಾವಿರ ರೂ.ಗೆ ಮಾರಾಟ ಮಾಡಲಾಗುತ್ತಿದೆ ಎಂದು ಹುಬ್ಬಳ್ಳಿಯ ಬಂಜಾರ ಕಾಲೋನಿಯ ಸೇರಿದಂತೆ ವಿವಿಧ ಕಡೆಗಳಲ್ಲಿ ಮಾರಾಟ ಜೋರಾಗಿದೆ.
ವಯಸ್ಕ ಕುರಿಗಳ ಬೆಲೆ ,30,000 ರೂ.ಗಳಾಗಿದ್ದು, ಟಗರು ಬೆಲೆ 35,000-40,000 ರೂ. ಆಗಿದೆ. ಸಾಮಾನ್ಯ ದಿನಗಳಿಗೆ ಹೋಲಿಸಿದರೆ ದಸರಾ ಹಿನ್ನೆಲೆಯಲ್ಲಿ ಎಲ್ಲಾ ಜಾನುವಾರುಗಳ ಬೆಲೆ 2,000 ರಿಂದ 5,000 ರೂ.ಗಳಷ್ಟು ಹೆಚ್ಚಾಗಿದೆ.
ಇದನ್ನೂ ಓದಿ-ಕಲ್ಯಾಣಸ್ವಾಮಿ ಮಠದಲ್ಲಿ ದಸರಾ ಆಚರಣೆ; ಸಚಿವ ನಾಗೇಂದ್ರ ಭಾಗಿ
ಹುಬ್ಬಳ್ಳಿಯ ನವನಗರದ ಮಾರುಕಟ್ಟೆಯಲ್ಲಿಂದು ನಡೆದ ವಾರದ ಜಾನುವಾರು ಮಾರುಕಟ್ಟೆಯಲ್ಲಿ ಇತರ ಜಿಲ್ಲೆಗಳು ಮತ್ತು ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಗೋವಾದಿಂದ ಖರೀದಿದಾರರು ಇಲ್ಲಿಗೆ ಆಗಮಿಸಿದ್ದರು.ಇಲ್ಲಿ ಗುಣಮಟ್ಟದ ಉತ್ಪನ್ನಗಳು ಲಭ್ಯವಿದ್ದು, ಕುರುಬರು ಮತ್ತು ಪ್ರಾಣಿ ಸಾಕುದಾರರು ಹೆಚ್ಚು ಕಾಳಜಿಯಿಂದ ಪ್ರಾಣಿಗಳನ್ನು ಸಾಕಿದ್ದಾರೆ.
ನಾವು ಈ ಬಾರಿ 50,000 ರೂ.ಗೆ ಒಂದು ಜೋಡಿ ಟಗರುಗಳನ್ನು ಮಾರಾಟ ಮಾಡಿದೇವು. ತಿಂಗಳ ಹಿಂದೆ 15 ಸಾವಿರ ರೂ.ಗೂ ಇದೇ ಜೋಡಿ ಟಗರು ಖರೀದಿಸುವವರು ಇರಲಿಲ್ಲ .ಈಗ ಎಲ್ಲಿಲ್ಲದ ಬೇಡಿಕೆ ಬಂದಿದೆ.
ಆದರೆ, ಈ ಬಾರಿ ಜಾನುವಾರುಗಳು ಹೆಚ್ಚಿನ ಪ್ರಮಾಣದಲ್ಲಿ ಬಂದಿದ್ದರಿಂದ ದರ ಇಳಿಕೆಯಾಗಿದೆ. ಹುಬ್ಬಳ್ಳಿಯ ಅಮರಗೋಳ, ನೂಲ್ವಿ, ಬ್ಯಾಹಟ್ಟಿ ಹಾಗೂ ಮುಂತಾದ ದನಗಳ ಮಾರುಕಟ್ಟೆಯಲ್ಲಿ ಕುರಿ ವ್ಯಾಪಾರಿ ಪರಸಪ್ಪ ವಟವಾಟಿ. ರೈತರು ಆರ್ಥಿಕ ಬಿಕ್ಕಟ್ಟಿನಲ್ಲಿರುವ ಕಾರಣ, ಅವರು ಆಡುಗಳು, ಕುರಿಗಳು ಮತ್ತು ಟಗರುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡುತ್ತಿದ್ದಾರೆ ಮತ್ತು ನಾವು ಕಡಿಮೆ ಬೆಲೆಗೆ ಪ್ರಾಣಿಗಳನ್ನು ಮಾರಾಟ ಮಾಡಬೇಕಾಗಿದೆ. ಇಲ್ಲಿ ಟಗರುಗಳ ಬೆಲೆಯೂ 15 ಸಾವಿರದಿಂದ 12 ಸಾವಿರಕ್ಕೆ ಇಳಿಕೆಯಾಗಿದೆ.
ಇದನ್ನೂ ಓದಿ-ಬಿಬಿಎಂಪಿ ನಿಯಮ ಉಲ್ಲಂಘಿಸಿದ ಪಬ್, ಬಾರ್, ಮಾಲೀಕರಿಗೆ ನೋಟೀಸ್
ಹುಬ್ಬಳ್ಳಿಯ ವಾರದ ಮಾರುಕಟ್ಟೆಯಲ್ಲಿ ನಾವು 15 ಕೆಜಿ ತೂಕದ ಕುರಿಗಳನ್ನು 7-8,000 ರೂ.ಗೆ ಮಾರಾಟ ಮಾಡಬೇಕಾಯಿತು. ಉತ್ತಮ ಗುಣಮಟ್ಟದ ಟಗರುಗಳು ಮಾತ್ರ 16,000 ರಿಂದ 20,000 ರೂ. ಮಾರಾಟವಾದವು ಎಂದು ಹಾವೇರಿ ಜಿಲ್ಲೆ ಗುತ್ತಲದ ಕುರುಬ ಮಂಜು ಮಕರಡ್ಡಿ ಹಂಚಿಕೊಂಡರು.
ಹುಬ್ಬಳ್ಳಿಯ ಗ್ರಾಹಕರು ಚಿಲ್ಲರೆ ಮಾರುಕಟ್ಟೆಯಲ್ಲಿ ಕುರಿ ಮಾಂಸದ ಬೆಲೆ ಕೆಜಿಗೆ 700 ರಿಂದ 800-850 ರೂ. ದಾಟಿದೆ. ವಿಶೇಷವಾಗಿ ದಸರಾ ಹಬ್ಬಕ್ಕೆ ದೇವಿಗೆ ಮಾಂಸಾಹಾರಿಯ ಅಡುಗೆಯನ್ನ ನೈವೇದ್ಯ ಜೊತೆಗೆ ಊಟ ಸಹ ಮಾಂಸಾಹಾರಿ ಮಾಡುತ್ತಾರೆ ಆದ್ದರಿಂದ ಬೆಲೆ ಏರಿಕೆ ಆಗಿದೆ ಎನ್ನುತ್ತಾರೆ ಸ್ಥಳೀಯ ಮುಖಂಡ ಕಾಶಿನಾಥ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.