ದೋಷಯುಕ್ತ ಇಲೆಕ್ಟ್ರಿಕ್ ವಾಹನ ಕೊಟ್ಟ ಟಿ ವಿ ಎಸ್ ಕಂಪನಿಗೆ ಹೊಸ ವಾಹನ ಕೊಡಲು ಇಲ್ಲವೇ 1.60 ಲಕ್ಷ ಪರಿಹಾರ ನೀಡಲು ಕೋರ್ಟ್ ಆದೇಶ 

ಹುಬ್ಬಳ್ಳಿಯ ಶಿಂದೆ ಕಾಂಪ್ಲೆಕ್ಸ ನಿವಾಸಿ ಉಷಾ ಜೈನ ಎಂಬುವವರು ಅಲ್ಲಿಯ ವಿದ್ಯಾನಗರದ ಪ್ರಕಲ್ಪ ಮೋಟರ್ಸ ಇವರಿಂದ ದಿ. 18/06/2021 ರಂದು ರೂ. 1,25,000/- ಕೊಟ್ಟು ಟಿ ವಿ ಎಸ್ ಐಕ್ಯೂಬ್ ಇಲೆಕ್ಟ್ರಿಕ್ ವಾಹನ ಖರೀದಿಸಿದ್ದರು. ವಾಹನ ಖರೀದಿಸಿದ 6 ತಿಂಗಳಲ್ಲಿಯೇ ಅದರ ಬ್ರೇಕ್‍ನಲ್ಲಿ ಕರೆಂಟ್ ಬಂದು ಆ ವಾಹನದಲ್ಲಿ ದೋಷ ಕಂಡು ಬಂದಿತ್ತು.

Written by - Manjunath N | Last Updated : Oct 20, 2023, 09:09 PM IST
  • ಈ ಬಗ್ಗೆ ದೂರುದಾರಳು ಪ್ರಕಲ್ಪ ಮೋಟರ್ಸ್‍ಗೆ ವಾಹನ ತೆಗೆದುಕೊಂಡು ಹೋಗಿ ದೋಷ ಸರಿಪಡಿಸಲು ಹಲವು ಬಾರಿ ಕೋರಿಕೊಂಡಿದ್ದಳು.
  • ಆಗ ಪ್ರಕಲ್ಪ ಮೋಟರ್ಸರವರು ಸದರಿ ವಾಹನದ ಹಲವು ಬಿಡಿ ಭಾಗಗಳನ್ನು 5-6 ಸಾರಿ ಬದಲಾಯಿಸಿ ರಪೇರಿ ಮಾಡಿಕೊಟ್ಟಿದ್ದರು.
  • ಆದರೂ ಸಹ ವಾಹನದ ರಿಪೇರಿ ಕೆಲಸ ಸರಿಯಾಗಿ ಆಗಿರಲಿಲ್ಲ. ವಾಹನವನ್ನು ಚಾಲು ಮಾಡುವಾಗ ದೂರುದಾರರ ಕೈಗೆ ಇಲೆಕ್ಟ್ರಿಕ್ ಶಾಕ್ ತಗುಲುತ್ತಿತ್ತು.
ದೋಷಯುಕ್ತ ಇಲೆಕ್ಟ್ರಿಕ್ ವಾಹನ ಕೊಟ್ಟ ಟಿ ವಿ ಎಸ್ ಕಂಪನಿಗೆ ಹೊಸ ವಾಹನ ಕೊಡಲು ಇಲ್ಲವೇ 1.60 ಲಕ್ಷ ಪರಿಹಾರ ನೀಡಲು ಕೋರ್ಟ್ ಆದೇಶ  title=
ಸಾಂದರ್ಭಿಕ ಚಿತ್ರ

ಧಾರವಾಡ: ಹುಬ್ಬಳ್ಳಿಯ ಶಿಂದೆ ಕಾಂಪ್ಲೆಕ್ಸ ನಿವಾಸಿ ಉಷಾ ಜೈನ ಎಂಬುವವರು ಅಲ್ಲಿಯ ವಿದ್ಯಾನಗರದ ಪ್ರಕಲ್ಪ ಮೋಟರ್ಸ ಇವರಿಂದ ದಿ. 18/06/2021 ರಂದು ರೂ. 1,25,000/- ಕೊಟ್ಟು ಟಿ ವಿ ಎಸ್ ಐಕ್ಯೂಬ್ ಇಲೆಕ್ಟ್ರಿಕ್ ವಾಹನ ಖರೀದಿಸಿದ್ದರು. ವಾಹನ ಖರೀದಿಸಿದ 6 ತಿಂಗಳಲ್ಲಿಯೇ ಅದರ ಬ್ರೇಕ್‍ನಲ್ಲಿ ಕರೆಂಟ್ ಬಂದು ಆ ವಾಹನದಲ್ಲಿ ದೋಷ ಕಂಡು ಬಂದಿತ್ತು.

ಈ ಬಗ್ಗೆ ದೂರುದಾರಳು ಪ್ರಕಲ್ಪ ಮೋಟರ್ಸ್‍ಗೆ ವಾಹನ ತೆಗೆದುಕೊಂಡು ಹೋಗಿ ದೋಷ ಸರಿಪಡಿಸಲು ಹಲವು ಬಾರಿ ಕೋರಿಕೊಂಡಿದ್ದಳು. ಆಗ ಪ್ರಕಲ್ಪ ಮೋಟರ್ಸರವರು ಸದರಿ ವಾಹನದ ಹಲವು ಬಿಡಿ ಭಾಗಗಳನ್ನು 5-6 ಸಾರಿ ಬದಲಾಯಿಸಿ ರಪೇರಿ ಮಾಡಿಕೊಟ್ಟಿದ್ದರು. ಆದರೂ ಸಹ ವಾಹನದ ರಿಪೇರಿ ಕೆಲಸ ಸರಿಯಾಗಿ ಆಗಿರಲಿಲ್ಲ. ವಾಹನವನ್ನು ಚಾಲು ಮಾಡುವಾಗ ದೂರುದಾರರ ಕೈಗೆ ಇಲೆಕ್ಟ್ರಿಕ್ ಶಾಕ್ ತಗುಲುತ್ತಿತ್ತು.

ಇದನ್ನೂ ಓದಿ: ಸಾಮಾಜಿಕ ಬಹಿಷ್ಕಾರಕ್ಕೆ ನೊಂದು ವ್ಯಕ್ತಿ ಆತ್ಮಹತ್ಯೆ : ಕುಟುಂಬಸ್ಥರ ಪ್ರತಿಭಟನೆ 

ಸಾಕಷ್ಟು ರಿಪೇರಿ ಮಾಡಿದರು ಅದರಲ್ಲಿ ಯಾವುದೇ ಸುಧಾರಣೆ ಆಗದ್ದರಿಂದ ಸದರಿ ವಾಹನವನ್ನು ಬದಲಾಯಿಸಿ ಬೇರೆ ವಾಹನ ಕೊಡುವಂತೆ ಅಥವಾ ಆ ವಾಹನದ ಸಂಪೂರ್ಣ ಹಣವನ್ನು ಮರಳಿಸುವಂತೆ ದೂರುದಾರಳು ಪ್ರಕಲ್ಪ ಮೋಟರ್ಸರವರಿಗೆ ಮತ್ತು ಟಿ ವಿ ಎಸ್ ಕಂಪನಿಗೆ ಕೇಳಿಕೊಂಡಿದ್ದರು. ದೂರುದಾರರ ವಿನಂತಿಯನ್ನು ಎದುರುದಾರರು ನಿರಾಕರಿಸಿದ್ದರು. ಅವರ ಈ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಎದುರುದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೋರಿ ದೂರುದಾರಳು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ.09/02/2023 ರಂದು ಪಿರ್ಯಾದಿ ಸಲ್ಲಿಸಿದ್ದರು.

ಇದನ್ನೂ ಓದಿ: ಧೀಡಿರನೇ ಪತಿಯಿಂದ ಬೇರ್ಪಟ್ಟ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ..! ಅಷ್ಟಕ್ಕೂ ಆಗಿದ್ದಾದರೂ ಏನು?

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ. ಭೂತೆ, ಸದಸ್ಯರುಗಳಾದ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಹಾಗೂ ಪ್ರಭು .ಸಿ ಹಿರೇಮಠ ಅವರು ಸದರಿ ಇಲೆಕ್ಟ್ರಿಕ್ ವಾಹನ ಖರೀದಿಸಿದ 6 ತಿಂಗಳಲ್ಲಿಯೇ ಅದರಲ್ಲಿ ದೋಷ ಕಂಡುಬಂದಿದ್ದರಿಂದ ಮತ್ತು ಆ ಬಗ್ಗೆ ದೂರಿದರೂ ಎದುರುದಾರ ಕಂಪನಿಯವರು ಅದರ ದೋಷ ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ. ರಿಪೇರಿ ಮಾಡಿದ ನಂತರವು ಅದನ್ನು ಚಾಲನೆ ಮಾಡುವಾಗ ಸಡನ್ ಆಗಿ ಕರೆಂಟ್ ಬರುತ್ತಿರುವುದರಿಂದ ಆ ವಾಹನದಲ್ಲಿ ಉತ್ಪಾದನಾ ದೋಷ ಇದೆ ಅಂತ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.

ಎದುರುದಾರ ಟಿ.ವಿ.ಎಸ್ ಉತ್ಪಾದಾನಾ ಕಂಪನಿ ಮತ್ತು ಡೀಲರ್‍ಗಳಿಂದ ದೂರುದಾರರಿಗೆ ಸೇವಾ ನ್ಯೂನ್ಯತೆ ಆಗಿರುವುದು ಮೇಲ್ನೊಟಕ್ಕೆ ಕಂಡುಬಂದಿದೆ ಅಂತಾ ಆಯೋಗ ತನ್ನ ತೀರ್ಪಿನಲ್ಲಿ ತಿಳಿಸಿದೆ. ಎಲ್ಲ ಎದುರುದಾರು ವೈಯಕ್ತಿಕವಾಗಿ ಮತ್ತು ಜಂಟಿನಾತೆಯಿಂದ ಆ ಐಕ್ಯೂಬ್ ಇಲೆಕ್ಟ್ರಿಕ್ ವಾಹನವನ್ನು ಬದಲಾಯಿಸಿ ಅದೇ ರೀತಿಯ ಹೊಸ ವಾಹನವನ್ನು ತೀರ್ಪು ನೀಡಿದ ಒಂದು ತಿಂಗಳೊಳಗಾಗಿ ದೂರುದಾರರಿಗೆ ನೀಡುವಂತೆ ಆದೇಶಿಸಿದೆ.

ತೀರ್ಪು ನೀಡಿದ ಒಂದು ತಿಂಗಳೊಳಗಾಗಿ ಹೊಸ ವಾಹನ ಕೊಟ್ಟು ಬದಲಾವಣೆ ಮಾಡಲು ಎದುರುದಾರರು ವಿಫಲರಾದಲ್ಲಿ ನಂತರ ಆ ವಾಹನದ ಮೌಲ್ಯ ಪೂರ್ತಿ ಹಣ ರೂ.1,25,000/-ಮತ್ತು ದಿ:09/02/2023 ರಿಂದ ಶೇ.8 ರಷ್ಟು ಬಡ್ಡಿ ಲೆಕ್ಕ ಹಾಕಿ ಹಣ ಸಂದಾಯ ಮಾಡುವಂತೆ ಎದುರುದಾರ ಕಂಪನಿಗೆ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ತೊಂದರೆಗಾಗಿ ಎದುರುದಾರರು ರೂ.25,000/-ಗಳ ಪರಿಹಾರ ಹಾಗೂ ರೂ.10,000/- ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಆಯೋಗ ನಿರ್ದೇಶಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News