Shilpa Shetty Divorce: ಮಂಗಳೂರು ಮೂಲದ ಶಿಲ್ಪಾ ಶೆಟ್ಟಿ ಮತ್ತು ಪತಿ ರಾಜ್ ಕುಂದ್ರಾ ಇತ್ತೀಚೆಗೆ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಒಟ್ಟಿಗೆ ಕಾಣಿಸಿಕೊಂಡಿದ್ದರು. ಪತಿಯೊಬ್ಬರೇ ಮಾಸ್ಕ್ ಹಾಕುತ್ತಿದ್ದರು. ಇದೀಗ ಪತ್ನಿಯೂ ಸಾಥ್ ಕೊಡುತ್ತಿದ್ದಾರೆ ಎಂದು ಟ್ರೋಲ್ ಕೂಡಾ ಆಗಿದ್ದರು.
ಇದೆಲ್ಲರ ನಡುವೆ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ಇಬ್ಬರೂ ದೂರವಾಗಿದ್ದಾರೆ ಎನ್ನುವ ಚರ್ಚೆಯೊಂದು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ. ಹೌದು ಈ ರೀತಿಯ ಅನುಮಾನ ಹುಟ್ಟುಹಾಕಿದ್ದು ರಾಜ್ ಕುಂದ್ರಾ ಮಾಡಿರುವ ಎಕ್ಸ್ (ಟ್ವೀಟ್).
ಇದನ್ನೂ ಓದಿ-Yash Viral News: ಯಶ್ ಕಾಲಿಗೆ ಪೊಲೀಯೋ ಅಟ್ಯಾಕ್ ಎಂಬ ವಿಡಿಯೋ ವೈರಲ್!?
ಸಾಕಷ್ಟು ಕಷ್ಟದ ದಿನಗಳಲ್ಲಿ ಒಟ್ಟಿಗೆ ಹೆಜ್ಜೆ ಹಾಕಿರುವ ಮಂಗಳೂರು ಮೂಲದ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ದೂರವಾಗಿದ್ದು ನಿಜನಾ? ಇಂದು ನಂಬಲು ಅಸಾಧ್ಯವಾದಂತಹ ಮಾತು.. ಆದರೆ ರಾಜ್ ಕುಂದ್ರಾ ಸೋಷಿಯಲ್ ಮಿಡಿಯಾದಲ್ಲಿ "ನಾವು ಬೇರ್ಪಟ್ಟಿದ್ದೇವೆ. ಈ ಕಷ್ಟದ ಸಮಯದಲ್ಲಿ ನೀವು ನಮಗೆ ಸಮಯ ಕೊಡಿ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ-ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡು ಶಾಕ್ ನೀಡಿದ ʼಬೃಂದಾವನʼ ನಟಿ ಕಾರ್ತಿಕಾ...!
ಈ ಮುದ್ದಾದ ಜೋಡಿ ಮೊನ್ನೆಯಷ್ಟೇ ನಡೆದ ಯುಟಿ 69 ಸಿನಿಮಾದ ಟ್ರೈಲರ್ ರಿಲೀಸ್ ಈವೆಂಟ್ನಲ್ಲಿ ಭಾಗಿಯಾಗಿದ್ದರು. ಇದಲ್ಲದೇ ಗಣೇಶೋತ್ಸವದಂದು ಮನೆಯಲ್ಲಿ ಶಿಲ್ಪಾ ಜೊತೆ ಡ್ಯಾನ್ಸ್ ಕೂಡಾ ಮಾಡಿದ್ರು. ಆದರೆ ಇದೀಗ ದಿಢೀರ್ ಎಂದು ಇಂತದ್ದೊಂದು ಪೋಸ್ಟ್ ಮಾಡಿದ್ದಾರೆ. ಇದು ಡಿವೋರ್ಸ್ ಕುರಿತಾಗಿರವ ಪೋಸ್ಟ್? ಅಥವಾ ಬೇರೆ ಯಾವುದೋ ವಿಷಯಕ್ಕೆ ಈ ರೀತಿ ಹಾಕಿದ್ದಾರಾ? ಈ ಎಲ್ಲ ಪ್ರಶ್ನೆಗಳಿಗೆ ಅವರೇ ಉತ್ತರ ಕೊಡಬೇಕು.
ಇನ್ನು ರಾಜ್ ಕುಂದ್ರಾ ಸತತ ಎರಡು ವರ್ಷಗಳಿಗೂ ಹೆಚ್ಚು ಕಾಲ ಫೇಸ್ ಮಾಸ್ಕ್ ಹಾಕಿಕೊಂಡು ಓಡಾಡುತ್ತಿದ್ದರು. ಆದರೆ ನಿನ್ನೆಯಚ್ಟೇ ಅವರು ತಮ್ಮ ಮುಖವನ್ನು ಕ್ಯಾಮರಾಗೆ ತೋರಿಸಿ ಶಾಕ್ ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.