ಮುಂದಿನ ದಸರಾಕ್ಕೆ ಮುನ್ನ ಪ್ರಭಾಸ್ ಮದುವೆ : ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟ ಶ್ಯಾಮಲಾ ದೇವಿ.!

Shyamala devi on Prabhas Marriage : ತೆಲುಗು ಹಿರಿಯ ನಟ ಕೃಷ್ಣಂರಾಜ್ ಅವರ ಪತ್ನಿ ಶ್ಯಾಮಲಾ ದೇವಿ ಅವರು ಪ್ರಭಾಸ್ ಮದುವೆ ಬಗ್ಗೆ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. ನವರಾತ್ರಿ ನಿಮಿತ್ತ ವಿಜಯವಾಡದ ದುರ್ಗಮ್ಮ ದೇವಸ್ಥಾನಕ್ಕೆ ಬಂದಿದ್ದ ಅವರು, ರೆಬಲ್‌ಸ್ಟಾರ್‌ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

Written by - Krishna N K | Last Updated : Oct 18, 2023, 09:09 PM IST
  • ನಟ ಯಂಗ್‌ ರೆಬಲ್‌ ಸ್ಟಾರ್‌ ಪ್ರಭಾಸ್‌ಗೆ 40 ವರ್ಷ ಕಳೆದರೂ ಇನ್ನೂ ಮದುವೆಯಾಗಿಲ್ಲ.
  • ಶ್ಯಾಮಲಾ ದೇವಿ ಅವರು ಪ್ರಭಾಸ್ ಮದುವೆ ಬಗ್ಗೆ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ.
  • ಈ ಹಿಂದೆ ಹಲವು ಬಾರಿ ಪ್ರಭಾಸ್ ಮದುವೆಯ ಬಗ್ಗೆ ಕುತೂಹಲಕಾರಿ ಹೇಳಿಕೆ ನೀಡಿದ್ದರು.
ಮುಂದಿನ ದಸರಾಕ್ಕೆ ಮುನ್ನ ಪ್ರಭಾಸ್ ಮದುವೆ : ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟ ಶ್ಯಾಮಲಾ ದೇವಿ.! title=

Prabhas Marriage : ಪ್ಯಾನ್ ಇಂಡಿಯಾದ ಹೀರೋ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಅವರ ದೊಡ್ಡಮ್ಮ ಶ್ಯಾಮಲಾದೇವಿ ನಟ ಪ್ರಭಾಸ್ ಮದುವೆಯ ಸ್ಪಷ್ಟತೆ ನೀಡಿದ್ದಾರೆ. ಈ ಹಿಂದೆ ಹಲವು ಬಾರಿ ಪ್ರಭಾಸ್ ಮದುವೆಯ ಬಗ್ಗೆ ಕುತೂಹಲಕಾರಿ ಹೇಳಿಕೆ ನೀಡಿದ್ದ ಅವರು, ಈ ಬಾರಿ ಪ್ರಭಾಸ್ ಮದುವೆಯ ದಿನಾಂಕವನ್ನು ಖಚಿತಪಡಿಸಿದ್ದಾರೆ. 

ಹೌದು.. ಟಾಲಿವುಡ್ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಪ್ರಭಾಸ್, 40 ವರ್ಷ ಕಳೆದರೂ ಇನ್ನೂ ಮದುವೆಯಾಗಿಲ್ಲ, ಮದುವೆ ಬಗ್ಗೆ ಕೇಳಿದಾಗ ಏನೇನೋ ಹೇಳಿ ಮಾತು ಮರೆಸುತ್ತಿದ್ದರು. ಇದು ಅವರ ಅಭಿಮಾನಿಗಳಲ್ಲಿ ಕೊಂಚ ಅಸಮಾಧಾನವನ್ನು ತಂದಿದೆ.  ಕೃಷ್ಣಂರಾಜ್‌ ಅವರು ಬದುಕಿದ್ದಾಗಲೇ ಪ್ರಭಾಸ್ ಮದುವೆಯಾಗಲು ಬಯಸಿದ್ದರು. ಆದರೆ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರಿಂದ ಅದು ಆಗಲಿಲ್ಲ. ಅವರ ಉಪಸ್ಥಿತಿಯಲ್ಲಿ ಪ್ರಭಾಸ್ ಮದುವೆಯಾದರೆ ಒಳ್ಳೆಯದು ಎಂದು ಅಭಿಮಾನಿಗಳೆಲ್ಲ ಭಾವಿಸಿದ್ದರು. ಆದರೆ ಅವರು ಅನಾರೋಗ್ಯದಿಂದ ನಿಧನರಾದರು. 

ಇದನ್ನೂ ಓದಿ : ಅತ್ಯಾಚಾರದ ದೃಶ್ಯಕ್ಕೆ 'ಸೆಕ್ಸ್ ಸೀನ್' ಅಂತ ಹೆಸರಿಟ್ಟ ನೆಟಿಜನ್ಸ್‌ : ನಿಮ್ಗೂ ಅಕ್ಕ-ತಂಗಿ ಇರ್ತಾರೆ ಎಂದ ನಟಿ..!

ಇತ್ತೀಚಿಗೆ ಪ್ರಭಾಸ್ ಕುಟುಂಬದ ಜವಾಬ್ದಾರಿಯನ್ನು ತೆಗೆದುಕೊಂಡು ತನ್ನ ತಂಗಿಯರ ಮದುವೆಯ ನಂತರ ತಾವು ಮದುವೆಯಾಗುವುದಾಗಿ ಹೇಳಿದ್ದರು ಎಂಬ ವರದಿಗಳಿವೆ. ಇದೀಗ ಶ್ಯಾಮಲಾ ದೇವಿ ಮತ್ತೊಮ್ಮೆ ಪ್ರಭಾಸ್ ಮದುವೆ ಬಗ್ಗೆ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. ನವರಾತ್ರಿಯ ಪ್ರಯುಕ್ತ ಪ್ರಭಾಸ್ ಅವರ ದೊಡ್ಡಮ್ಮ ಕೃಷ್ಣಂರಾಜ್ ಅವರ ಪತ್ನಿ ಶ್ಯಾಮಲಾದೇವಿ ವಿಜಯವಾಡ ದುರ್ಗಮ್ಮ ದೇಗುಲಕ್ಕೆ ಬಂದಿದ್ದರು. ದರ್ಶನದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಈ ವೇಳೆ ಪ್ರಭಾಸ್ ಮದುವೆ ವಿಚಾರ ಪ್ರಸ್ತಾಪವಾಗಿತ್ತು.

ಇದಕ್ಕೆ ಉತ್ತರಿಸಿದ ಶ್ಯಾಮಲಾ ದೇವಿ, ದುರ್ಗಮ್ಮನ ಆಶೀರ್ವಾದದಿಂದ ಪ್ರಭಾಸ್ ಮದುವೆ ಶೀಘ್ರದಲ್ಲೇ ನಡೆಯಲಿದೆ. ಆದರೆ ಹುಡುಗಿ ಯಾರು? ಮದುವೆಯ ದಿನಾಂಕವನ್ನು ನಾನು ಹೇಳುವುದಿಲ್ಲ. ಆದರೆ ಶೀಘ್ರದಲ್ಲೇ ನಮ್ಮ ಮನೆಯಲ್ಲಿ ಮಂಗಳಕರ ಕಾರ್ಯ ನಡೆಯಲಿದೆ. ಮುಂದಿನ ದಸರಾ ವೇಳೆಗೆ ಪ್ರಭಾಸ್ ಖಂಡಿತವಾಗಿಯೂ ಸಂಸಾರಸ್ಥರಾಗುತ್ತಾರೆ ಎಂದು ಹೇಳಿದ್ದಾರೆ. ಸಧ್ಯ ಶ್ಯಾಮಲಾದೇವಿಯವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಇದನ್ನೂ ಓದಿ :  ದೊಡ್ಮನೆಯಲ್ಲಿ ʼಪ್ರೀತಿ-ಸ್ನೇಹʼ ಸಮರ..! ವಿನಯ್ Vs ಸಂಗೀತ, ಕಾರ್ತಿಕ್ ಬೆಂಬಲ ಯಾರಿಗೆ..?

ಸಧ್ಯ ಪ್ರಶಾಂತ್ ನೀಲ್ ನಿರ್ದೇಶನದ ಪ್ರಭಾಸ್‌ ನಟನೆಯ 'ಸಾಲಾರ್' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಕಂಪ್ಲೀಟ್ ಆ್ಯಕ್ಷನ್ ಎಂಟರ್‌ಟೈನರ್ ಈ ಸಿನಿಮಾ ಡಿಸೆಂಬರ್ 22 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಸಲಾರ್ ಜೊತೆ ಪ್ರಭಾಸ್ ಅಭಿನಯದ ಕಲ್ಕಿ ಮತ್ತು ಮಾರುತಿ ನಿರ್ದೇಶನದ ಚಿತ್ರವೂ ಸಹ ಶೂಟಿಂಗ್ ಹಂತದಲ್ಲಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News