ನವದೆಹಲಿ: ವಿಶ್ವಕಪ್ ನ ಲೀಗ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 268 ರನ್ ಗಳಿಸಿದೆ.
☝️ Rohit
☝️ Vijay Shankar
☝️ JadhavKemar Roach is on a roll! #CWC19 | #WIvIND | #MenInMaroon | #TeamIndia pic.twitter.com/96OXuOqz9E
— ICC (@ICC) June 27, 2019
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡವು ರೋಹಿತ್ ಶರ್ಮಾ ಅವರ ವಿಕೆಟ್ ನ್ನು ಬೇಗನೆ ಕಳೆದುಕೊಂಡಿತು. ಇನ್ನೊಂದೆಡೆ ಕೆ.ಎಲ್ ರಾಹುಲ್ ಉತ್ತಮ ಪ್ರದರ್ಶನ ನೀಡುವ ಸೂಚನೆ ನೀಡಿದ್ದಾದರೂ ಕೂಡ 48 ರನ್ ಗೆ ಔಟಾದರು. ಇನ್ನು ಶತಕದ ನಿರೀಕ್ಷೆಯಲ್ಲಿದ್ದ ವಿರಾಟ್ ಕೊಹ್ಲಿ 72 ರನ್ ಗಳಿಗೆ ವಿಕೆಟ್ ಒಪ್ಪಿಸಿದರು.
Fifties for Kohli and Dhoni, and a quick 38-ball 46 from Pandya take India to 268/7, while Roach and Holder star with the ball.
Can West Indies chase this down?
Download the #CWC19 app for highlights ⬇️
APPLE 🍎 https://t.co/VpYh7SIMyP
ANDROID 🤖 https://t.co/cVREQ16w2N pic.twitter.com/MCCmYipF76— ICC (@ICC) June 27, 2019
ಇನ್ನು ಮಧ್ಯದಲ್ಲಿ ವಿಜಯ್ ಶಂಕರ್ ಹಾಗೂ ಕೇದಾರ್ ಜಾಧವ್ ಬೇಗನೆ ವಿಕೆಟ್ ಒಪ್ಪಿಸುವ ಮೂಲಕ ಭಾರತದ ರನ್ ಗತಿಗೆ ಕಡಿವಾಣ ಬಿದ್ದಿತು. ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ (46) ಧೋನಿ (56)ಅವರ ಉತ್ತಮ ಜೊತೆಯಾಟದಿಂದಾಗಿ ಭಾರತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 268 ರನ್ ಗಳಿಸಿದೆ.
ವೆಸ್ಟ್ ಇಂಡೀಸ್ ತಂಡದ ಪರ ಕೆಮಾರ್ ರೋಚ್ ಮೂರು ವಿಕೆಟ್ ಗಳನ್ನು ಕಬಳಿಸುವ ಮೂಲಕ ಭಾರತದ ಆರಂಭಿಕ ಬ್ಯಾಟಿಂಗ್ ಬೆನ್ನೆಲುಬು ಮುರಿದರು.